ಕೈತೋಟ-ತಾರಸಿ ತೋಟ ನಿರ್ಮಾಣ ಮಾಡಿ

| Published : Jan 15 2025, 12:46 AM IST

ಸಾರಾಂಶ

ಕುಟುಂಬಕ್ಕೆ ಅಗತ್ಯವಿರುವ ವಿವಿಧ ಹಣ್ಣು,ತರಕಾರಿ ಬೆಳೆದು ಮನೆಯ ಅಂಧ ಹೆಚ್ಚಿಸಿ, ಮಾನಸಿಕ ನೆಮ್ಮದಿ ಪಡೆಯಲು, ಸಾವಯವ ಪದ್ಧತಿಯಲ್ಲಿ ಚಿಕ್ಕ-ಚೊಕ್ಕ ಕೈತೋಟ ಮತ್ತು ತಾರಸಿ ತೋಟ ಅಭಿವೃದ್ಧಿ ಪಡಿಸಿ ನಿರ್ವಹಣೆ ಮಾಡಿದರೆ ತಾಜಾ ರೀತಿಯಲ್ಲಿ ಅವಶ್ಯಕವಿರುವ ವಸ್ತು ಅಚ್ಚುಕಟ್ಟಾಗಿ ಪಡೆದುಬಹುದಾಗಿದೆ

ಗದಗ: ಪ್ರತಿಯೊಬ್ಬರೂ ಕೈತೋಟ, ತಾರಸಿ ತೋಟ ನಿರ್ಮಾಣ ಮಾಡಿ ಹಣ್ಣು, ತರಕಾರಿ ಪೌಷ್ಠಿಕಾಂಶಯುಕ್ತ ವಸ್ತು ಬೆಳೆಯಬಹುದಾಗಿದೆ ಎಂದು ನಿವೃತ್ತ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸುರೇಶ ಕುಂಬಾರ ಹೇಳಿದರು.

ಅವರು ಉಷಾದೇವಿ ಕುಷ್ಟಗಿ ರೋಟರಿ ಕಮ್ಯುನಿಟಿ ಕೇರ್ ಸೆಂಟರ್ ನಲ್ಲಿ ನಡೆದ ಕೈತೋಟ ಮತ್ತು ತಾರಸಿ ತೋಟ ನಿರ್ಮಾಣ ಹಾಗೂ ನಿರ್ವಹಣೆ ಕಾರ್ಯಕ್ರಮದಲ್ಲಿ ಸಾವಯವ ಪದ್ಧತಿಯಲ್ಲಿ ಹಣ್ಣು,ತರಕಾರಿ, ಹೂವು, ಔಷಧೀಯ ಮತ್ತು ಸೌಗಂಧಿಕ ಸಸ್ಯ ಬೆಳೆಸುವ ಕುರಿತು ಉಪನ್ಯಾಸ ಮತ್ತು ಪ್ರಾಯೋಗಿಕ ತರಬೇತಿ ಉದ್ಘಾಟಿಸಿ ಮಾತನಾಡಿದರು.

ಆಹಾರ ಧಾನ್ಯ, ಹಣ್ಣು ತರಕಾರಿ ಬೆಳೆಯಲು ಅತಿಯಾದ ರಾಸಾಯನಿಕ ಗೊಬ್ಬರ, ಕೀಟ, ರೋಗನಾಶಕಗಳ ಬಳಕೆಯಿಂದ, ಆಹಾರ ಕಲುಷಿತಗೊಂಡಿದ್ದು, ಅಪೌಷ್ಠಿಕತೆಯಿಂದ ಜನರು ಹಲವು ಕಾಯಿಲೆಗಳಿಂದ ಬಳಲುತ್ತಿದ್ದು, ಅನಾರೋಗ್ಯ ಪೀಡಿತರಾಗುತ್ತಿದ್ದಾರೆ.ಆದರಿಂದ ಕುಟುಂಬಕ್ಕೆ ಅಗತ್ಯವಿರುವ ವಿವಿಧ ಹಣ್ಣು,ತರಕಾರಿ ಬೆಳೆದು ಮನೆಯ ಅಂಧ ಹೆಚ್ಚಿಸಿ, ಮಾನಸಿಕ ನೆಮ್ಮದಿ ಪಡೆಯಲು, ಸಾವಯವ ಪದ್ಧತಿಯಲ್ಲಿ ಚಿಕ್ಕ-ಚೊಕ್ಕ ಕೈತೋಟ ಮತ್ತು ತಾರಸಿ ತೋಟ ಅಭಿವೃದ್ಧಿ ಪಡಿಸಿ ನಿರ್ವಹಣೆ ಮಾಡಿದರೆ ತಾಜಾ ರೀತಿಯಲ್ಲಿ ಅವಶ್ಯಕವಿರುವ ವಸ್ತು ಅಚ್ಚುಕಟ್ಟಾಗಿ ಪಡೆದುಬಹುದಾಗಿದೆ ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ರೇವಣಸಿದ್ದೇಶ ಉಪ್ಪಿನ ಅಧ್ಯಕ್ಷತೆ ವಹಿಸಿ ಮಾತನಾಡಿ, ರೋಟರಿ ಕ್ಲಬ್ ವರ್ಷಪೂರ್ತಿ ಹಲವಾರು ಕಾರ್ಯಕ್ರಮ ಹಮ್ಮಿಕೊಂಡು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದೆ. ಗದಗ-ಬೆಟಗೇರಿ ಜನತೆಗೆ ಹಣ್ಣು-ತರಕಾರಿ ಹೂ ಸಾವಯವ ಪದ್ಧತಿಯಲ್ಲಿ ಬೆಳೆಯಲು, ತರಬೇತಿ ಕಾರ್ಯಕ್ರಮ ಆಯೋಜನೆಯಾಗಿರುವುದು ಎಲ್ಲರಿಗೂ ಉಪಯುಕ್ತವಾಗಿದೆ ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಶ್ರೀಧರ ಸುಲ್ತಾನಪೂರ, ಅತಿಥಿ ಉಪನ್ಯಾಸ ಮತ್ತು ತರಬೇತಿ ನೀಡಿದ ಮಂಗಳಾ ನೀಲಗುಂದ ಕೈತೋಟ ಮತ್ತು ತಾರಸಿ ತೋಟದ ಮಹತ್ವ ಅಗತ್ಯತೆ, ಹಣ್ಣು, ಹೂವು, ತರಕಾರಿ, ಔಷಧೀಯ ಸಸ್ಯ ಬೆಳೆಸುವ ಪದ್ಧತಿ, ಸಾವಯವ ಕೃಷಿ ಪದ್ಧತಿ ಬೆಳವಣಿಗೆ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ಸಂಯೋಜಕ ಡಾ. ಪ್ರದೀಪ ಉಗಲಾಟ, ನವೀನ ಕುಷ್ಟಗಿ, ಬಾಲಕೃಷ್ಣ ಕಾಮತ ನಿರೂಪಿಸಿ ವಂದಿಸಿದರು. ಹಿರಿಯರಾದ ಡಾ. ಶೇಖರ ಸಜ್ಜನರ, ಡಾ.ಜಿ.ಬಿ. ಪಾಟೀಲ, ಡಾ. ಆರ್.ಸಿ.ಗಜ್ಜಿನಮಠ, ಡಾ ವಿನಯ ಟಿಕಾರೆ, ವೀಣಾ ತಿರ್ಲಾಪೂರ, ಡಾ. ಕಮಲಾಕ್ಷಿ ಅಂಗಡಿ, ನಾಗರತ್ನ ಪಾಟೀಲ, ಮಂಜುಳಾ ಅಕ್ಕಿ, ಕಸ್ತೂರಿಬಾಯಿ ಹಿರೇಗೌಡರ, ದೇವಾಡಿಗ, ರೋಟರಿ ಕ್ಲಬ್ ಗದಗ-ಬೆಟಗೇರಿ, ಇನ್ನರವ್ಹೀಲ್ ಕ್ಲಬ್, ಅಕ್ಕನ ಬಳಗದ ಸದಸ್ಯರು, ತೋಟಗಾರಿಕೆ ತರಬೇತಿ ಕೇಂದ್ರದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಾರ್ವಜನಿಕರು ಭಾಗವಹಿಸಿದ್ದರು.