ಕಲ್ಪತರು ವಿದ್ಯಾಸಂಸ್ಥೆಯ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಸಾಧನೆ ಮಾಡುವ ಮೂಲಕ ಎಲ್ಲರಿಗೂ ಕೀರ್ತಿ ತಂದಿದ್ದಾರೆ ಎಂದು ಸಂಸ್ಥೆಯ ಉಪಾಧ್ಯಕ್ಷರಾದ ಬಾಗೆಪಲ್ಲಿ ನಟರಾಜು ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ನ ಕಲ್ಪತರು ವಿದ್ಯಾಸಂಸ್ಥೆಯ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಸಾಧನೆ ಮಾಡುವ ಮೂಲಕ ಎಲ್ಲರಿಗೂ ಕೀರ್ತಿ ತಂದಿದ್ದಾರೆ ಎಂದು ಸಂಸ್ಥೆಯ ಉಪಾಧ್ಯಕ್ಷರಾದ ಬಾಗೆಪಲ್ಲಿ ನಟರಾಜು ತಿಳಿಸಿದರು.ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೆಕ್ಯಾನಿಕಲ್ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಯದರ್ಶಿ ಎಂ.ಆರ್.ಸಂಗಮೇಶ್ ಮಾತನಾಡಿ, ಮೆಕ್ಯಾನಿಕಲ್ ವಿಭಾಗದಿಂದ ಈಗ ನಡೆಯುತ್ತಿರುವ ಪ್ರಾಜೆಕ್ಟ್‌ಗಳನ್ನು ವೀಕ್ಷಿಸಿ ಸಮಗ್ರ ಮಾಹಿತಿಗಳನ್ನು ಪಡೆದಿದ್ದು ಪ್ರಾಜೆಕ್ಟ್‌ಗಳನ್ನು ವಿದ್ಯಾರ್ಥಿ ವಿದ್ಯಾರ್ಥಿನಿಯರು ಬಹಳ ಉತ್ಸುಕತೆಯಿಂದ ಮಾಡಿರುವುದು ದೊಡ್ಡಸಾಧನೆಯಾಗಿದೆ ಮತ್ತು ಹೆಮ್ಮೆತರುವ ಸಂಗತಿಯಾಗಿದೆ ಎಂದು ತಿಳಿಸಿದರು.
ಕಾರ್ಯದರ್ಶಿ ಜಿ.ಎಸ್. ಉಮಾಶಂಕರ್ ಮಾತನಾಡಿ, ವಿದ್ಯಾರ್ಥಿಗಳ ಕಲಿಕಾ ಹಿತದೃಷ್ಟಿಯಿಂದ ಇನ್ನು ಮುಂದೆ ನಿರಂತರವಾಗಿ ಇಂತಹ ಕಾರ್ಯಕ್ರಮವನ್ನು ಸಂಸ್ಥೆಯ ಪೂರ್ಣ ಸಹಕಾರದೊಂದಿಗೆ ನೆರವೇರಿಸಲಾಗುತ್ತದೆ, ಪ್ರತಿ ವಿದ್ಯಾರ್ಥಿಗಳು ಸಮಯ ಪ್ರಜ್ಞೆಯನ್ನು ಅರಿತು ವಿದ್ಯಾಭ್ಯಾಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಒಳ್ಳೆಯ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ತಿಳಿಸಿದರು. ಖಜಾಂಚಿಗಳಾದ ಟಿ.ಎಸ್.ಶಿವಪ್ರಸಾದ್ ಪ್ರಾಜೆಕ್ಟ್ ಪ್ರದರ್ಶನವನ್ನು ಸುದೀರ್ಘ ಮಾಹಿತಿಗಳೊಂದಿಗೆ ವೀಕ್ಷಿಸಿ ಮಾತನಾಡಿ, ಸಂಸ್ಥೆಯ ವಿವಿಧ ಕಾಲೇಜುಗಳಲ್ಲಿ ಸಹಕಾರ ನೀಡುತ್ತಿದ್ದು ವಿದ್ಯಾರ್ಥಿಗಳು ಹೆಚ್ಚಿನ ಶ್ರಮವಹಿಸಿ ತಮ್ಮ ಜ್ಞಾನಭಂಡಾರವನ್ನು ಹೆಚ್ಚಿಸಿಕೊಂಡು ಸ್ಪರ್ಧಾತ್ಮಕ ತಾಂತ್ರಿಕ ಜಗತ್ತಿಗೆ ಅನುಗುಣವಾಗಿ ತಮ್ಮಗಳ ಕೌಶಲ್ಯಗಳನ್ನು ಪ್ರದರ್ಶಿಸುವ ಮೂಲಕ ಉನ್ನತಮಟ್ಟದ ಉದ್ಯೋಗಗಳನ್ನು ಪಡೆದು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆಯಬೇಕು ಎಂದರು. ಪ್ರಾಂಶುಪಾಲರಾದ ಡಾ. ಸತೀಶ್‌ಕುಮಾರ್ ಮಾತನಾಡಿದರು. ಡಾ. ಟಿ.ಎಸ್.ಕಿರಣ್ , ಡಾ. ಬಿ.ಎಂ.ವಿಶ್ವನಾಥ್ ಟಿ.ಎಸ್.ಬಸವರಾಜು, ಜಿ.ಪಿ.ದೀಪಕ್, ಬಿ.ಎಸ್.ಉಮೇಶ್, ಕಾರ್ಯದರ್ಶಿಗಳಾದ ಟಿ.ಯು.ಜಗದೀಶ್‌ಮೂರ್ತಿ, ಎಚ್.ಜಿ. ಸುಧಾಕರ್ ಪಾಲ್ಗೊಂಡಿದ್ದರು.