ಇಲ್ಲಿಯ ಕರ್ನಾಟಕ ವಿಜ್ಞಾನ ಕಾಲೇಜು ಆವರಣದಲ್ಲಿ ನಡೆಯತ್ತಿರುವ ಬಿಲ್ಡ್ ಎಕ್ಸ್‌ಪೋ ಕೇವಲ ವಾಣಿಜ್ಯ ಪ್ರದರ್ಶನವಲ್ಲ. ಅದು ಸಂಸ್ಕೃತಿ, ಕಲೆ ಮತ್ತು ಜನಪದ ಪರಂಪರೆಯ ಜೀವಂತ ವೇದಿಕೆಯಾಗಿಯೂ ಗುರುತಿಸಿಕೊಳ್ಳುತ್ತಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಧಾರವಾಡ: ಇಲ್ಲಿಯ ಕರ್ನಾಟಕ ವಿಜ್ಞಾನ ಕಾಲೇಜು ಆವರಣದಲ್ಲಿ ನಡೆಯತ್ತಿರುವ ಬಿಲ್ಡ್ ಎಕ್ಸ್‌ಪೋ ಕೇವಲ ವಾಣಿಜ್ಯ ಪ್ರದರ್ಶನವಲ್ಲ. ಅದು ಸಂಸ್ಕೃತಿ, ಕಲೆ ಮತ್ತು ಜನಪದ ಪರಂಪರೆಯ ಜೀವಂತ ವೇದಿಕೆಯಾಗಿಯೂ ಗುರುತಿಸಿಕೊಳ್ಳುತ್ತಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್, ಟರ್ಬೊ ಸ್ಟೀಲ್ ಆಶ್ರಯದಲ್ಲಿ ಆಯೋಜಿಸಿರುವ ಬಿಲ್ಡ್ ಎಕ್ಸ್‌ಪೋ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮದಲ್ಲಿ ಮಾತನಾಡಿದರು.ವ್ಯಾಪಾರ–ತಂತ್ರಜ್ಞಾನ ಜೊತೆಗೆ ಸಂಸ್ಕೃತಿಯ ಸೌಂದರ್ಯವನ್ನೂ ಒಟ್ಟುಗೂಡಿಸುವ ವಿಶಿಷ್ಟ ಪ್ರಯತ್ನ ಇದಾಗಿದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮ ಮೊದಲ ದಿನ ಉದ್ಘಾಟಸಿದ ಅಂತಾರಾಷ್ಟ್ರೀಯ ಹಾಸ್ಯ ಕಲಾವಿದ ಮಹಾದೇವ ಸತ್ತಿಗೇರಿ ಮಾತನಾಡಿ, ಬಿಲ್ಡ್ ಎಕ್ಸ್ಪೋ ಸ್ಥಳೀಯ ಕಲಾವಿದರ ಪ್ರತಿಭೆಗೆ ಗೌರವ ನೀಡುವ ಹಾಗೂ ಅವರಿಗೆ ಪ್ರೋತ್ಸಾಹ ನೀಡುವ ವಿಶಿಷ್ಟ ವೇದಿಕೆಯಾಗಿದೆ ಎಂದರು.ಅಧ್ಯಕ್ಷತೆಯನ್ನು ಎಂಜಿನಿಯರ್ಸ್ ಅಧ್ಯಕ್ಷ ಸುನೀಲ ಬಾಗೇವಾಡಿ ವಹಿಸಿದ್ದರು. ದಾಮೋದರ ಹೆಗಡೆ ಪ್ರಾರ್ಥಿಸಿದರು. ಮಾರ್ತಾಂಡಪ್ಪ ಕತ್ತಿ ನಿರೂಪಿಸಿದರು. ಉಪಾಧ್ಯಕ್ಷ ಅರುಣಕುಮಾರ ಶೀಲವಂತ ಸ್ವಾಗತಿಸಿದರು. ಎಕ್ಸ್‌ಪೋ ಚೇರಮನ್ ಅಜಿತ ಕರೋಗಲ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸಿದ್ದನಗೌಡ ಪಾಟೀಲ ವಂದಿಸಿದರು.
ನಂತರ ಕಲಾಶಕ್ತಿ ಫೌಂಡೇಷನ್, ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ, ಸಾಂಸ್ಕೃತಿಕ ಲೋಕ ಅಕಾಡೆಮಿ, ವೀಣಾ ಮಠ ಮತ್ತು ಸ್ವಾತಿ ಅಭಿಷೇಕ ಪಾಟೀಲ, ವಸುಧಾ ಚಕ್ರವರ್ತಿ, ಮಿನಲ ಅವರಿಂದ ಜಾನಪದ ವೈಭವ, ಪ್ರಮೀಳಾ ಜಕ್ಕಣ್ಣವರ ಅವರಿಂದ ಹಾಡುಗಳ ವೈವಿಧ್ಯಮಯ ಹಾಗೂ ವಿವಿಧ ಕಲಾ ತಂಡಗಳ, ವೈಯಕ್ತಿಕ ಜನಪದ ವೈಭವ, ಡ್ಯಾನ್ಸ್, ಮನರಂಜನಾ ಕಾರ್ಯಕ್ರಮಗಳು ನಡೆದವು.