ಶಿಕ್ಷಣ ಎಂಬುದು ಒಂದು ಅದ್ಬುತವಾದ ಶಕ್ತಿಯಾಗಿದ್ದು, ಇದರ ಮೂಲಕ ನಾವು ಉತ್ತಮ ಸಮಾಜ ರೂಪಿಸಿಕೊಳ್ಳಲು ಸಾಧ್ಯ. ಸಮಾಜವನ್ನು ಸರಿ ದಾರಿಯಲ್ಲಿ ಕೊಂಡೊಯ್ಯುವ ಶಕ್ತಿ ಶಿಕ್ಷಣಕ್ಕಿದೆ. ಶಿಕ್ಷಕರ ಕೊಡುಗೆ ಅಪಾರವಾಗಿದ್ದು, ಪ್ರತಿಯೊಬ್ಬರು ಶಿಕ್ಷಣದ ಮಹತ್ವ ಅರಿತುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಂಡಾಗ ಮಾತ್ರ ಶಿಕ್ಷಕ ವೃತ್ತಿಯ ಶ್ರಮ ಸಾರ್ಥಕವಾಗುತ್ತದೆ ಎಂದು ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಹೇಳಿದರು.

ಕನ್ನಡಪ್ರಭ ವಾರ್ತೆ ಭದ್ರಾವತಿ

ಶಿಕ್ಷಣ ಎಂಬುದು ಒಂದು ಅದ್ಬುತವಾದ ಶಕ್ತಿಯಾಗಿದ್ದು, ಇದರ ಮೂಲಕ ನಾವು ಉತ್ತಮ ಸಮಾಜ ರೂಪಿಸಿಕೊಳ್ಳಲು ಸಾಧ್ಯ. ಸಮಾಜವನ್ನು ಸರಿ ದಾರಿಯಲ್ಲಿ ಕೊಂಡೊಯ್ಯುವ ಶಕ್ತಿ ಶಿಕ್ಷಣಕ್ಕಿದೆ. ಶಿಕ್ಷಕರ ಕೊಡುಗೆ ಅಪಾರವಾಗಿದ್ದು, ಪ್ರತಿಯೊಬ್ಬರು ಶಿಕ್ಷಣದ ಮಹತ್ವ ಅರಿತುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಂಡಾಗ ಮಾತ್ರ ಶಿಕ್ಷಕ ವೃತ್ತಿಯ ಶ್ರಮ ಸಾರ್ಥಕವಾಗುತ್ತದೆ ಎಂದು ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಹೇಳಿದರು.

ಸಿದ್ದಾರೂಢ ನಗರದ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಶನಿವಾರ ಆಯೋಜಿಸಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಜನ್ಮ ದಿನಾಚರಣೆ, ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಸಮಿತಿ ಅಧ್ಯಕ್ಷ ಬಿ.ಎಸ್ ಗಣೇಶ್, ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಎಂ. ಆಶಾಲತಾ ಸಹಿತ ಇನ್ನಿತರರು ಮಾತನಾಡಿದರು.

ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜಕುಮಾರ್, ಉಪಾಧ್ಯಕ್ಷ ಬಷೀರ್ ಅಹಮದ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸೈಯದ್ ರಿಯಾಜ್, ಮಾಜಿ ಉಪಾಧ್ಯಕ್ಷ ಚನ್ನಪ್ಪ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ. ಪೃಥ್ವಿರಾಜ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಡಿ ಮಂಜುನಾಥ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜಿ. ಕೊಟ್ರಪ್ಪ, ಶಿಕ್ಷಣ ಸುಧಾರಣಾ ಸಮಿತಿ ತಾಲೂಕು ಅಧ್ಯಕ್ಷ ಜಯಪ್ಪ ಸಿ. ಹೆಬ್ಬಳಗೆರೆ, ಕೆ. ಮಂಜುನಾಥ್, ವೆಂಕಟೇಶ್, ಎಸ್.ಕೆ ಮೋಹನ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ ಸುರೇಶ್ ಸ್ವಾಗತಿಸಿದರು.

---ಬಾಕ್ಸ್‌----

ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರು: ಶೇಖರಪ್ಪ, ಆರ್. ಚೇತನಾ, ಪಚ್ಚಮ್ಮ, ಅನುರಾಧ, ಉಮ್ಮೇಸಲ್ಮಾ, ಮೃತ್ಯುಂಜಯ ಕಾನಿಟ್ಕರ್, ಮಾಲತೇಶ್, ಟಿ. ರಾಮಚಂದ್ರಪ್ಪ, ಸಿ.ಕೆ ಸುನೀಲಾ, ಪಿ. ರೇಣುಕಾ, ಚಂದ್ರಶೇಖರ್, ರವಿ, ಪ್ರಭು, ಮೀನಾಕ್ಷಿ, ಸುಮಾ, ರುದ್ರೇಶಯ್ಯ, ಸೈಯದ್ ಷೋಗ್ರಾ, ಸಿ. ಬೇಬಿ, ಸೈಯದ್ ಸುಲೇಮಾನ್ ಮತ್ತು ಡಾರತಿ ಸಹಿತ ಹಲವು ಶಿಕ್ಷಕರಿಗೆ ತಾಲೂಕುಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

ಡಿ. ಕೀರ್ತನಾ, ಕೆ. ಧನುಷ್ ಮತ್ತು ಪಿ.ಎಸ್ ರಮ್ಯ ಸಹಿತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಸಿಲ್ವರ್ ಜ್ಯೂಬಿಲಿ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲೆ ವಿಭಾಗ), ಅನನ್ಯ ಪ್ರೌಢಶಾಲೆ, ಸಹ್ಯಾದ್ರಿ ಆಂಗ್ಲ ಪ್ರೌಢಶಾಲೆ, ಸ್ವಾಮಿ ವಿವೇಕಾನಂದ ಆಂಗ್ಲ ಪ್ರೌಢಶಾಲೆ, ಮಾವಿನಕೆರೆ ಸರ್ಕಾರಿ ಪ್ರೌಢಶಾಲೆ ಸಹಿತ ಶೇ.100 ಫಲಿತಾಂಶ ಪಡೆದ ಇತರ ಶಾಲೆಗಳನ್ನು ಗೌರವಿಸಲಾಯಿತು. ಲೋಕೇಶಪ್ಪ, ನಾಗಲಕ್ಷ್ಮಿ, ಎಂ.ಎನ್ ಶಿವಮೂರ್ತಿ, ಎನ್. ನೀಲಪ್ಪ, ಎ.ಕೆ ರಂಗಪ್ಪ, ಎಚ್.ಡಿ ಗಿರಿಯಪ್ಪ, ಡಿ.ಎಂ ರೇಣುಕಾ, ಸಿ. ಪ್ರಸನ್ನ, ಎಚ್.ಪಿ ರವೀಂದ್ರ, ಅಕ್ಮ ಉನ್ನಿಸಾ, ಕೆ. ಶಾಂತಕುಮಾರ್, ಜಯಂತಿ, ಕೆ. ಪರಮೇಶ್ವರಪ್ಪ, ಕೀರ್ತಿಮಾಲಾ, ಎಸ್. ಪ್ರಮೀಳಾ, ಶಾಹ್ವರ್ ಬಾನು,, ಪಿ. ಶಾಂತ, ಮೈಲಾರಪ್ಪ, ಮಲ್ಲಾಶೆಟ್ಟಿ, ಎಚ್.ಎಸ್ ದೇವಮ್ಮ, ಎಂ.ಎಸ್ ಬಾಲರಾಜ್, ಎಂ. ಅನಸೂಯ, ಗಿರಿಜಾ, ಕೆ.ಆರ್ ಶೇಖರಪ್ಪ, ಕಸ್ನಾನಾಯ್ಕ, ಕೆ. ವಾಗೀಶ್, ಸೀತಮ್ಮ, ಶಾಂತಪ್ಪ, ಧನಶೇಖರ್, ಎ.ಕೆ ಸುರೇಶ್, ಫಾರೂಕ್ ಅಹಮದ್, ರುದ್ರಮ್ಮ, ಎಚ್. ನಾಗರಾಜ್, ಮೇರಿ ಪ್ಲೋರಾ, ಬಿ.ವಿ ಕುಸುಮ, ದಿನೇಶ್ ಕುಮಾರ್, ಜಿ.ಎನ್ ಬಸವರಾಜಪ್ಪ, ಕೆ.ಎಸ್ ಸಾಕಮ್ಮ, ಎಸ್. ಅಮೃತ, ಸಿ.ಎಚ್ ಉಮಾ, ಕೆ.ಎಸ್ ತುಳಸಿ ಸಹಿತ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.