ಡಾ. ಅಂಬೇಡ್ಕರ್‌ ಆಶಯದ ಸಮಾಜ ನಿರ್ಮಾಣ ಇಂದಿನ ಅಗತ್ಯ-ಸಚಿವ ಎಚ್‌.ಕೆ. ಪಾಟೀಲ

| Published : Mar 07 2025, 12:50 AM IST

ಡಾ. ಅಂಬೇಡ್ಕರ್‌ ಆಶಯದ ಸಮಾಜ ನಿರ್ಮಾಣ ಇಂದಿನ ಅಗತ್ಯ-ಸಚಿವ ಎಚ್‌.ಕೆ. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಡಾ. ಬಿ. ಆರ್. ಅಂಬೇಡ್ಕರ್‌ ಅವರ ಮೌಲ್ಯ, ತತ್ವ ಹಾಗೂ ಅಧ್ಯಯನಶೀಲತೆ ಹಾಗೂ ಸಂವಿಧಾನದ ಜಾಗೃತಿ ಇಂದಿನ ಅಗತ್ಯವಾಗಿದ್ದು, ಕರ್ನಾಟಕ ದಲಿತ ನೌಕರರ ಒಕ್ಕೂಟದ ಜಿಲ್ಲಾ ಶಾಖೆ ಈ ನಿಟ್ಟಿನಲ್ಲಿ ಜನಪರವಾಗಿ ಒಗ್ಗೂಡಿ ಮತ್ತಷ್ಟ ಉತ್ತಮ ಕಾರ್ಯಗಳನ್ನು ಮಾಡಬೇಕೆಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಗದಗ: ಡಾ. ಬಿ. ಆರ್. ಅಂಬೇಡ್ಕರ್‌ ಅವರ ಮೌಲ್ಯ, ತತ್ವ ಹಾಗೂ ಅಧ್ಯಯನಶೀಲತೆ ಹಾಗೂ ಸಂವಿಧಾನದ ಜಾಗೃತಿ ಇಂದಿನ ಅಗತ್ಯವಾಗಿದ್ದು, ಕರ್ನಾಟಕ ದಲಿತ ನೌಕರರ ಒಕ್ಕೂಟದ ಜಿಲ್ಲಾ ಶಾಖೆ ಈ ನಿಟ್ಟಿನಲ್ಲಿ ಜನಪರವಾಗಿ ಒಗ್ಗೂಡಿ ಮತ್ತಷ್ಟ ಉತ್ತಮ ಕಾರ್ಯಗಳನ್ನು ಮಾಡಬೇಕೆಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಅವರು ಇಲ್ಲಿನ ಲಯನ್ಸ್ ಸಭಾಭವನದಲ್ಲಿ ಈಚೆಗೆ ಜಿಲ್ಲಾ ಕರ್ನಾಟಕ ದಲಿತ ನೌಕರರ ಒಕ್ಕೂಟದ ಆಶ್ರಯದಲ್ಲಿ ಏರ್ಪಡಿಸಲಾದ ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಹಾಗೂ ದಲಿತ ನೌಕರರ ಸಮಾವೇಶದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಒಗ್ಗಟ್ಟಾಗಿ ಹೋರಾಡುವ ರೀತಿಯೇ ರಾಷ್ಟ್ರ ಕಟ್ಟುವ ಕಾರ್ಯದಲ್ಲೂ ಸಹ ಸಮರ್ಪಿತರಾಗಿ ಕಾರ್ಯನಿರ್ವಹಿಸಬೇಕು. ಜನರಲ್ಲಿ ಸಂವಿಧಾನದ ಮೌಲ್ಯಗಳ ಕುರಿತು ಜಾಗೃತಿ ವಹಿಸಬೇಕು ಎಂದರು. ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ ಕ್ಷೇತ್ರದಲ್ಲೂ ಸಹ ಮೀಸಲಾತಿಯ ಅಗತ್ಯವಿದ್ದು, ಅದರ ಸಂಪೂರ್ಣ ಅನುಷ್ಠಾನ ಅವಶ್ಯ. ಈ ಹಿನ್ನೆಲೆಯಲ್ಲಿ ಸರ್ಕಾರಿ ದಲಿತ ನೌಕರರ ಒಕ್ಕೂಟ ನೊಂದವರ, ಅವಕಾಶ ವಂಚಿತರ, ದೀನ ದಲಿತರ ಆಶಾಕಿರಣವಾಗಿ ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು. ಸಮ ಸಮಾಜದ ನಿರ್ಮಾಣಕ್ಕಾಗಿ ತೊಡಗಿಸಿಕೊಳ್ಳಬೇಕು ಎಂದರು.

ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ನೌಕರರು ಒಗ್ಗಟ್ಟಿನಿಂದ ಸಂಘಟಿತರಾದಾಗ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲಾ ದಲಿತ ನೌಕರರ ಒಕ್ಕೂಟ ಸಮಾಜಮುಖಿ ಕಾರ್ಯ ಮಾಡುವತ್ತ ಗಮನಹರಿಸಬೇಕು ಹಾಗೂ ಒಗ್ಗಟ್ಟಿನಿಂದ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮುಂದಾಗಬೇಕು ಎಂದರು. ಉಪನ್ಯಾಸಕರಾಗಿ ಆಗಮಿಸಿದ ಪ್ರೊ. ಅರ್ಜುನ ಗೊಳಸಂಗಿ ಉಪನ್ಯಾಸ ನೀಡಿದರು. ಜಿಪಂ ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ ಜೆ.ಸಿ, ದಲಿತ ಮುಖಂಡ ಎಸ್.ಎನ್.ಬಳ್ಳಾರಿ ಮುಂತಾದವರು ಮಾತನಾಡಿದರು. ಡಿಡಿಪಿಐ ಆರ್.ಎಸ್. ಬುರಡಿ, ಬಿಇಓ ವಿ.ವಿ.ನಡುವಿನಮನಿ, ಬಿ.ಎಫ್. ಪೂಜಾರ, ಸತೀಶ ಪಾಸಿ, ಡಿ.ಜಿ.ಜೋಗಣ್ಣವರ, ಎಂ.ಕೆ.ಲಮಾಣಿ, ಡಿ.ಎಸ್.ಮುಂದಿನಮನಿ, ದುರ್ಗಪ್ಪ ಹರಿಜನ, ನ್ಯಾಯವಾದಿ ಮೋಹನ ಭಜಂತ್ರಿ, ಪ್ರಕಾಶ ದೊಡ್ಡಮನಿ, ಅಶೋಕ ಕುಂದಗೋಳ, ತಾಲೂಕ ಅಧ್ಯಕ್ಷ ಎಚ್.ಆರ್.ಓಲೆಕಾರ, ಎನ್.ಎಂ. ಅರಳಿಗಿಡದ, ಶ್ರೀಕಾಂತ ನರಗುಂದ, ಆನಂದ ಮುಳಗುಂದ, ಲಕ್ಷ್ಮಣ ಗುಡಿಸಲಮನಿ, ನಾರಾಯಣಕುಮಾರ ಬಳ್ಳಾರಿ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು. ದಲಿತ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಮೇಲಿನಮನಿ, ಬಿ.ಎಸ್. ತಳವಾರ ಅವರು ನೌಕರರ ಸಮಸ್ಯೆ ಅದರ ಪರಿಪಾರೋಪಾಯ ಹಾಗೂ ಮುಂದೆ ಕೈಗೊಳ್ಳಬೇಕಾದ ಹೋರಾಟದ ರೂಪುರೇಷೆಗಳನ್ನು ತಿಳಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಮುತ್ತು ಮಾದರ ಸ್ವಾಗತಿಸಿದರು. ಎಸ್. ಟಿ. ವಾಲ್ಮೀಕಿ ನಿರೂಪಿಸಿದರು.