ಸಾರಾಂಶ
ಹಾರೋಹಳ್ಳಿ: ನೆಲ, ಜಲದ ಪರವಾಗಿ ಹೋರಾಟ ಹಿತದೃಷ್ಟಿಯಿಂದ ಸಂಘಟನೆಯ ಪ್ರತಿಯೊಬ್ಬರೂ ಪ್ರತಿದಿನ ಕನ್ನಡ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಬಿ.ಎನ್. ಜಗದೀಶ್ ಹೇಳಿದರು.
ಹಾರೋಹಳ್ಳಿ ಪಟ್ಟಣದ ವೃತ್ತದಲ್ಲಿ ಜಯಕರ್ನಾಟಕ ಸಂಘಟನೆ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಮತ್ತು ಸಂಘಟನೆಯ ಪದಾಧಿಕಾರಿಗಳ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡಿಗರಾದ ನಾವು ನುಡಿ ಕನ್ನಡ, ನಡೆ ಕನ್ನಡ, ಉಸಿರು ಕನ್ನಡ ಎಂದು ಜೀವಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇದೇ ವೇಳೆ ಕನ್ನಡದ ಬಗ್ಗೆ, ಕನ್ನಡಿಗರ ಬಗ್ಗೆ ಹೆಮ್ಮೆ ಪಡುವ ವಿಷಯಗಳು ಆಗಾಗ ಕೇಳಿಬರುತ್ತಿರುತ್ತವೆ. ನಾಮಫಲಕಗಳಲ್ಲಿ ಶೇಕಡ.50ಕ್ಕಿಂತ ಹೆಚ್ಚು ಕನ್ನಡ ಬಳಸಬೇಕು ಎಂಬ ಪ್ರತಿಭಟನೆಗಳು ಕೂಗದೇ, ಚೀರದೆ ನಮ್ಮೊಂದಿಗೆ ಕನ್ನಡ ಕಲಿಯಿರಿ ಎಂಬ ಅಪ್ಲಿಕೇಶನ್ ಬಿಡುಗಡೆ ಮಾಡಿದ ಆಟೋ ಚಾಲಕರ ಹೊಸ ಪ್ರಯತ್ನಗಳು ಹೀಗೆ ಹತ್ತು ಹಲವು ಕನ್ನಡ ಕಟ್ಟುವ ಕೆಲಸಗಳು ನಮ್ಮ ಕಣ್ಣ ಮುಂದಿದೆ.ನಮ್ಮ ಸಂಘಟನೆಯೂ ಸಹ ಅದೇ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರು. ಹಾರೋಹಳ್ಳಿಯು ಹಲವಾರು ವರ್ಷಗಳಿಂದಲೂ ಇದೇ ರೀತಿಯಲ್ಲಿದೆ. ಕೈ ಗಾರಿಕಾ ಪ್ರದೇಶ ಮಾತ್ರ ಇದೆ ಹೇಳಿಕೊಳ್ಳುವ ಬದಲಾವಣೆಗಳು ಯಾವುದೂ ಆಗಿಲ್ಲ ಮುಂದಿನ ದಿನಗಳಲ್ಲಿ ಇವುಗಳೆಲ್ಲದರ ವಿರುದ್ಧ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲಾಧ್ಯಕ್ಷ ರವಿ ಮಾತನಾಡಿ, ನಮ್ಮ ನಾಡು ನಮ್ಮ ಊರು ಕಟ್ಟುವುದು ನಮ್ಮ ಕೆಲಸ. ಹಾಗಾಗಿ ಆ ಕೆಲಸವನ್ನು ಚಾಚೂ ತಪ್ಪದೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಹಾರೋಹಳ್ಳಿ ಭಾಗದಲ್ಲಿ ಉತ್ತಮ ರೀತಿಯ ಹೋರಾಟ, ಸಮಾಜ ಕಟ್ಟುವ ಕೆಲಸಗಳನ್ನು ತಾಲೂಕು ಅಧ್ಯಕ್ಷ ಕೋಟೆ ರಾಜು ನೇತೃತ್ವದಲ್ಲಿ ರೂಪಿಸಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಜಯಕರ್ನಾಟಕ ಸಂಘಟನೆಯ ರಾಜ್ಯ ಮುಖ್ಯ ಸಲಹೆಗಾರ ಪ್ರಕಾಶ್ ರೈ, ಎಚ್.ರಾಮಚಂದ್ರಯ್ಯ,ಡಿ.ಜಿ ಕುಮಾರ್,ಎ.ಕೃಷ್ಣಪ್ಪ, ಜಿಲ್ಲಾ ಪದಾಧಿಕಾರಿಗಳಾದ ವೀರೇಶ್, ಅರುಣ್ ಕುಮಾರ್, ಆನಂದ್ ಕುಮಾರ್, ರಾಮಣ್ಣ, ಅರುಣ್ ಕುಮಾರ್, ಮುಖಂಡರಾದ ಮುರಳೀಧರ್, ಪುರುಷೋತ್ತಮ್, ಶ್ರೀನಿವಾಸ್, ಲಕ್ಷಣ್ ಕೊಳ್ಳಿಗನಹಳ್ಳಿ, ಹಾರೋಹಳ್ಳಿ ಚಂದ್ರು, ಅಶೋಕ್ ಕುಮಾರ್, ಅನಿಲ್, ತಾಲೂಕು ಅಧ್ಯಕ್ಷ ಕೋಟೆ ರಾಜು, ಯೋಗಾನಂದ, ನಾಗು, ಮಹಾಲಿಂಗ, ಅಭಿಲಾಷ್, ಮೋಹನ್, ಹರಿ, ಪ್ರಮೋದ್, ನಿತಿನ್, ಆಕಾಶ್, ಮಧು ಸೂದನ್, ಲಿಖಿತ್, ಅರ್ಜುನ್ ಇತರರು ಹಾಜರಿದ್ದರು.
19ಕೆಆರ್ ಎಂಎನ್ 4.ಜೆಪಿಜಿಹಾರೋಹಳ್ಳಿ ವೃತ್ತದಲ್ಲಿ ಜಯಕರ್ನಾಟಕ ಸಂಘಟನೆ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಸಂಘಟನೆಯ ಪದಾಧಿಕಾರಿಗಳ ಸೇರ್ಪಡೆ ಕಾರ್ಯಕ್ರಮದಲ್ಲಿ ಹೋರಾಟಗಾರರನ್ನು ಸನ್ಮಾನಿಸಲಾಯಿತು.