ಮೋದಿಯಿಂದ ದೇಶದ ಭವಿಷ್ಯ ನಿರ್ಮಾಣ: ಭಾಂಡಗೆ

| Published : Apr 07 2024, 01:46 AM IST

ಸಾರಾಂಶ

ಕಾಂಗ್ರೆಸ್‌ನಲ್ಲಿ ದೇಶವನ್ನಾಳುವ ಯಾವ ನಾಯಕರೂ ಇಲ್ಲ. ಅವರಿಗೆ ದೇಶದ ಬಗ್ಗೆ ಗೌರವವೂ ಇಲ್ಲ ಮತ್ತು ಕಾಳಜಿಯೂ ಇಲ್ಲ.

ಕೊಪ್ಪಳ ಲೋಕಸಭಾ ಕ್ಷೇತ್ರದ ಉಸ್ತುವಾರಿ ನಾರಾಯಣಸಾಕನ್ನಡಪ್ರಭ ವಾರ್ತೆ ಕೊಪ್ಪಳ

ದೇಶದ ಭವಿಷ್ಯ ನಿರ್ಮಾಣ ಮಾಡುವ ರಾಷ್ಟ್ರಮಟ್ಟದ ನಾಯಕ ಪ್ರಧಾನಿಮಂತ್ರಿ ನರೇಂದ್ರ ಮೋದಿಯಾಗಿದ್ದು, ಅದು ಅವರಿಂದ ಮಾತ್ರ ಸಾಧ್ಯ ಎಂದು ರಾಜ್ಯಸಭಾ ಸದಸ್ಯ ಮತ್ತು ಕೊಪ್ಪಳ ಲೋಕಸಭಾ ಕ್ಷೇತ್ರದ ಉಸ್ತುವಾರಿ ನಾರಾಯಣಸಾ ಭಾಂಡಗೆ ಹೇಳಿದರು.

ನಗರದ ಮಧುಶ್ರೀ ಕಲ್ಯಾಣಮಂಟಪದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಬೂತ್ ಅಭಿಯಾನ ಹಾಗೂ ಬಿಜೆಪಿ ಹಾಗೂ ಜೆಡಿಎಸ್ ಸಮನ್ವಯ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಕಾಂಗ್ರೆಸ್‌ನಲ್ಲಿ ದೇಶವನ್ನಾಳುವ ಯಾವ ನಾಯಕರೂ ಇಲ್ಲ. ಅವರಿಗೆ ದೇಶದ ಬಗ್ಗೆ ಗೌರವವೂ ಇಲ್ಲ ಮತ್ತು ಕಾಳಜಿಯೂ ಇಲ್ಲ. ಒಬ್ಬ ಮಲ್ಲಿಕಾರ್ಜುನ ಖರ್ಗೆ ಅಲ್ಲ, ಇಂಥ ನೂರು ಖರ್ಗೆಯವರು ಬಂದರೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮಾನವಾಗಲು ಸಾಧ್ಯವಿಲ್ಲ ಎಂದರು.

ಡಾ. ಕೆ. ಬಸವರಾಜ ಅವರನ್ನು ಗೆಲ್ಲಿಸುವ ಮೂಲಕ ಮತ್ತೊಮ್ಮೆ ಈ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಾಗುವಂತೆ ಮಾಡಬೇಕು. ಈ ಮೂಲಕ ದೇಶವನ್ನು ಬಲಿಷ್ಠ ಮಾಡಲು ಈ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ಭಾರತವನ್ನು ವಿಶ್ವಗುರು ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು. ವೈದ್ಯನಾಗಿ ವಿದೇಶಗಳಲ್ಲಿ ಸೇವೆ ಮಾಡುವುದಕ್ಕೆ ಅವಕಾಶ ಇದ್ದರೂ ದೇಶಕ್ಕಾಗಿಯೇ ರಾಜಕೀಯಕ್ಕೆ ಬಂದಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟೂರ್‌ ತಿಳಿಸಿದರು.

ಮಾಜಿ ಸಚಿವ ಹಾಲಪ್ಪ ಆಚಾರ, ವಿಧಾನಸಭೆ ವಿರೋಧಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ, ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಮಾಜಿ ಸಂಸದ ಶಿವರಾಮಗೌಡ, ಮಾಜಿ ಸಚಿವ ಹನುಮಂತಪ್ಪ ಅಲ್ಕೋಡ, ಮಾಜಿ ಸಂಸದ ಕೆ.‌ ವಿರೂಪಾಕ್ಷಪ್ಪ, ಮಾಜಿ ಶಾಸಕ ಬಸವರಾಜ ದಢೇಸ್ಗೂರು ಮಾತನಾಡಿದರು. ಸುರೇಶ ಭೂಮರಡ್ಡಿ, ಗುರುಮೂರ್ತಿ ಸ್ವಾಮಿ ಅಳವಂಡಿ, ಗಿರೀಗೌಡ, ಈಶಪ್ಪ ಮಾದಿನೂರು, ಮಹಾಂತೇಶ ಮೈನಳ್ಳಿ, ಚಂದ್ರು ಹಲಿಗೇರಿ, ಮಂಜುನಾಥ ಹಂದ್ರಾಳ, ನರಸಿಂಹರಾವ್ ಕುಲಕರ್ಣಿ ಇತರರಿದ್ದರು.