ಬೀಚ್ ಸ್ವಚ್ಛಗೊಳಿಸಿದ ದಂಪತಿಗೆ ಮೋದಿಯಿಂದ ಬುಲಾವ್!

| Published : Jan 26 2024, 01:48 AM IST

ಸಾರಾಂಶ

ಈ ಜೋಡಿ ಮದುವೆಯಾಗಿ ಹನಿಮೂನ್‌ಗೆ ಹೋಗುವ ಬದಲು ಬೈಂದೂರಿನ ಹೆಸರಾಂತ ಸೋಮೇಶ್ವರ ಬೀಚ್ ಸ್ವಚ್ಛಗೊಳಿಸುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಇದನ್ನು ಪ್ರಧಾನ ಮಂತ್ರಿ ಅವರು ತಮ್ಮ ಮನ್ ಕೀ ಬಾತ್‌ನಲ್ಲೂ ಪ್ರಸ್ತಾಪಿಸಿ ಶ್ಲಾಘಿಸಿದ್ದರು.

ಕನ್ನಡಪ್ರಭ ವಾರ್ತೆ ಕುಂದಾಪುರ

ಮದುವೆಯಾಗಿ ಹನಿಮೂನ್ ತೆರಳುವ ಬದಲು ತಮ್ಮೂರಿನ ಬೀಚ್ ಸ್ವಚ್ಛಗಳಿಸಿ ಸುದ್ದಿಯಾಗಿದ್ದ ಬೈಂದೂರಿನ ದಂಪತಿಗೆ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಆಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಕಚೇರಿಯಿಂದ ಬುಲಾವ್ ಬಂದಿದೆ.

ಬೈಂದೂರಿನ ಕಳವಾಡಿ ದಂಪತಿಯಾದ ಅನುದೀಪ್ ಹಾಗೂ ಮಿನುಷಾ, ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ದೆಹಲಿಗೆ ತೆರಳಿದ್ದಾರೆ.

ಈ ಜೋಡಿ ಮದುವೆಯಾಗಿ ಹನಿಮೂನ್‌ಗೆ ಹೋಗುವ ಬದಲು ಬೈಂದೂರಿನ ಹೆಸರಾಂತ ಸೋಮೇಶ್ವರ ಬೀಚ್ ಸ್ವಚ್ಛಗೊಳಿಸುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಇದನ್ನು ಪ್ರಧಾನ ಮಂತ್ರಿ ಅವರು ತಮ್ಮ ಮನ್ ಕೀ ಬಾತ್‌ನಲ್ಲೂ ಪ್ರಸ್ತಾಪಿಸಿ ಶ್ಲಾಘಿಸಿದ್ದರು.

ಬೀಚ್ ಸ್ವಚ್ಛಗೊಳಿಸಿ ಸುದ್ದಿ ಮಾಡಿರುವ ಅನುದೀಪ್ ಹೆಗ್ಡೆ ವೃತ್ತಿಯಲ್ಲಿ ಡಿಜಿಟಲ್ ಮಾರ್ಕೆಟರ್. ಮಿನುಷಾ ಫಾರ್ಮಾಸಿಟಿಕಲ್ ಉದ್ಯೋಗಿ. ಪ್ರಕೃತಿ ಪ್ರಿಯರಾಗಿರುವ ಈ ದಂಪತಿ ಬೈಂದೂರು ಸಮೀಪದ ಸೋಮೇಶ್ವರ ಬೀಚ್‌ನಲ್ಲಿ 8 ದಿನಗಳ ಕಾಲ ಸ್ವಚ್ಛತಾ ಕಾರ್ಯವನ್ನು ಕೈಗೊಂಡು ಸಾಮಾಜಿಕ ಕಳಕಳಿ ಮೆರೆದಿದ್ದರು.ಎಂಜಿಎಂಸಿಯ ವಿದ್ಯಾರ್ಥಿಗಳು ದೆಹಲಿ ಪರೇಡ್ ಗೆ

ಕನ್ನಡಪ್ರಭ ವಾರ್ತೆ ಉಡುಪಿನಗರದ ಎಂಜಿಎಂ ಕಾಲೇಜಿನ ಮೂರು ವಿದ್ಯಾರ್ಥಿಗಳು ನವದೆಹಲಿಯಲ್ಲಿ ಜ. 26ರಂದು ನಡೆಯುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕಾಲೇಜನ್ನು ಪ್ರತಿನಿಧಿಸುತ್ತಿದ್ದಾರೆ.

ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕಿ ಅನ್ವಿತಾ ಎಂ.ತಂತ್ರಿ, ನೌಕಾ ದಳದ ಕೆಡೆಟ್ಸ್‌ಗಳಾದ ಎಸ್ ಸಿಸಿ ಪ್ರಸಾದ್ ಕುಲಾಲ್ ಹಾಗೂ ಎಸ್ ಸಿಸಿ ಚಿನ್ಮಯಿ ಭಟ್ ಪಥಸಂಚಲನದಲ್ಲಿ ಭಾಗವಹಿಸಲಿದ್ದಾರೆ.