ಉಡುಪಿ: ಇಲ್ಲಿನ ಕೊಡವೂರಿನ ಕಂಬಳಕಟ್ಟ ಯುವ ಬಂಟರ ಸಂಘದ 12ನೇ ವಾರ್ಷಿಕ ಅಧಿವೇಶನ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ನಡೆಯಿತು. ಅಧಿವೇಶನದ ಸಭಾ ಕಾರ್ಯಕ್ರಮವನ್ನು ಅತಿಥಿ ಅಭ್ಯಾಗತರೊಡಗೂಡಿ ದೀಪ ಪ್ರಜ್ವಲಿಸಿ ಉದ್ಘಾಟನೆ ಮಾಡಿದರು.
ಉಡುಪಿ: ಇಲ್ಲಿನ ಕೊಡವೂರಿನ ಕಂಬಳಕಟ್ಟ ಯುವ ಬಂಟರ ಸಂಘದ 12ನೇ ವಾರ್ಷಿಕ ಅಧಿವೇಶನ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ನಡೆಯಿತು. ಅಧಿವೇಶನದ ಸಭಾ ಕಾರ್ಯಕ್ರಮವನ್ನು ಅತಿಥಿ ಅಭ್ಯಾಗತರೊಡಗೂಡಿ ದೀಪ ಪ್ರಜ್ವಲಿಸಿ ಉದ್ಘಾಟನೆ ಮಾಡಿದರು.
ಸಂಘದ ಗೌರವ ಸ್ವೀಕರಿಸಿ ಮಾತನಾಡಿದ ಮುಖ್ಯ ಅತಿಥಿ ಆರ್‌ಜೆ ನಯನ ಶೆಟ್ಟಿ, ಸಂಘ ಸಂಸ್ಥೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡರೆ ನಮಗರಿವಿಲ್ಲದೆ ಸಂಘ ನಮ್ಮನ್ನು ಯಶಸ್ಸಿನೆಡೆಗೆ ಕೊಂಡೊಯ್ಯುತ್ತದೆ ಎಂದರು. ಈ ಸಂದರ್ಭ ಸಂತೋಷ್ ಶೆಟ್ಟಿ ಪಂಚರತ್ನ ಅವರನ್ನು ಕಂಬಳ ಕ್ಷೇತ್ರ, ದಿನೇಶ್ ಶೆಟ್ಟಿ ಬಾವಲಿಮನೆ ಅವರನ್ನು ಕೃಷಿಕ್ಷೇತ್ರ, ಆಯುರ್ವೇದ ವೈದ್ಯಕೀಯ ಶಿಕ್ಷಣ ಪೊರೈಸಿದ ಡಾ. ನಿಕ್ಷಿತಾ ಆರ್. ಶೆಟ್ಟಿ ಕಂಬಳಕಟ್ಟ, ವಿದ್ಯಾರ್ಥಿಗಳಾದ ಸಾಂಜಲಿ ಶೆಟ್ಟಿ ಮೂಡುಬೆಟ್ಟು, ಜೇಷ್ಣಾ ಶೆಟ್ಟಿ ಬುಡ್ನಾರು , ಧೃತಿಜ ಶೆಟ್ಟಿ ಮೂಡುಬೆಟ್ಟು ಅವರುಗಳನ್ನು ಶೈಕ್ಷಣಿಕ ಕ್ಷೇತ್ರದಲ್ಲಿನ ಸಾಧನೆಗೆ ಗೌರವಿಸಲಾಯಿತು ಹಾಗೂ ಅರ್ಹ ಫಲಾನುಭಾವಿಗಳಿಗೆ ಆರ್ಥಿಕ ಸಹಾಯ ಧನ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಸಂಘದ ಅಧ್ಯಕ್ಷ ಪುಷ್ಪರಾಜ್ ಕೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಉದ್ಯಮಿ ಪ್ರವೀಣ್ ಶೆಟ್ಟಿ ಪುತ್ತೂರು, ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ, ಶಿರ್ವ ಬಂಟರ ಸಂಘದ ಅಧ್ಯಕ್ಷ ಸಾಯಿನಾಥ್ ಶೆಟ್ಟಿ, ಉದ್ಯಮಿ ಸಂಜೀವ ಶೆಟ್ಟಿ ಕಪ್ಪೆಟ್ಟು, ಹಿರಿಯರಾದ ಜಗನ್ನಾಥ ಶೆಟ್ಟಿ ದೊಡ್ಡಮನೆ, ರಾಜು ಶೆಟ್ಟಿ ಜನ್ನಿಬೆಟ್ಟು, ಕೆ. ಶಿವಪ್ರಸಾದ್ ಶೆಟ್ಟಿ ಮಜಲುಮನೆ, ಸಂಘಟನಾ ಅಧ್ಯಕ್ಷ ಸುರೇಶ್ ಶೆಟ್ಟಿ ಕಂಬಳಕಟ್ಟ ಉಪಸ್ಥಿತರಿದ್ದರು.ಈ ಸಂದರ್ಭ ಸಂಘದ ಮಹಿಳಾ ಸದಸ್ಯರಿಂದ ಭಕ್ತಿ ಗಾಯನ, ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಂಗತರಂಗ ಕಲಾವಿದರು, ಕಾಪು ಸದಸ್ಯರಿಂದ ‘ಅಧ್ಯಕ್ಷೆರ್’ ನಾಟಕ ಪ್ರದರ್ಶನಗೊಂಡಿತು.
ಅಶ್ವಿನಿ ಶೆಟ್ಟಿ ಸಂತೆಕಟ್ಟೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ವಿಜೇಶ್ ಆರ್. ಶೆಟ್ಟಿ ಪ್ರಸ್ತಾವನೆಗೈದರು, ಖಜಾಂಚಿ ರಾಕೇಶ್ ಶೆಟ್ಟಿ ಕಂಬಳಕಟ್ಟ ವಂದಿಸಿದರು. ಸುಮಿತ್ರಾ ಶೆಟ್ಟಿ ಪ್ರಾರ್ಥನೆಗೈದರು, ಅಮೃತ್ ಶೆಟ್ಟಿ ಕಂಬಳಕಟ್ಟ, ಸುರೇಖಾ ಶೆಟ್ಟಿ ಬಾವಲಿಮನೆ ಹಾಗೂ ಸಂಗೀತಾ ಶೆಟ್ಟಿ ನಿರೂಪಿಸಿದರು.