ಮುಂಡಗೋಡ ಜಾತ್ರಾ ಪೂರ್ವ ಹೊರಬೀಡು ದಿನದಂದು ಪಟ್ಟಣದ ಅಂಬೇಡ್ಕರ್ ಓಣಿಯ ಬಸವರಾಜ ಮಲ್ಲಪ್ಪ ಚಲವಾದಿ ಎಂಬವರ ಮನೆ ಕಳ್ಳತನ ಮಾಡಿದ್ದ ಅಂತರ ಜಿಲ್ಲಾ ಕಳ್ಳನನ್ನು ಶನಿವಾರ ಸಂಜೆ ಮುಂಡಗೋಡ ಪೊಲೀಸರು ಚಿನ್ನಾಭರಣ ಸಮೇತ ಬಂಧಿಸಿದ್ದಾರೆ.
ಮುಂಡಗೋಡ: ಜಾತ್ರಾ ಪೂರ್ವ ಹೊರಬೀಡು ದಿನದಂದು ಪಟ್ಟಣದ ಅಂಬೇಡ್ಕರ್ ಓಣಿಯ ಬಸವರಾಜ ಮಲ್ಲಪ್ಪ ಚಲವಾದಿ ಎಂಬವರ ಮನೆ ಕಳ್ಳತನ ಮಾಡಿದ್ದ ಅಂತರ ಜಿಲ್ಲಾ ಕಳ್ಳನನ್ನು ಶನಿವಾರ ಸಂಜೆ ಮುಂಡಗೋಡ ಪೊಲೀಸರು ಚಿನ್ನಾಭರಣ ಸಮೇತ ಬಂಧಿಸಿದ್ದಾರೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಬಕದ ಹೊನ್ನಹಳ್ಳಿಯ ಮಂಜುನಾಥ ಬಸವಂತಪ್ಪ ನಾಯಕ (೩೪) ಎಂಬವನೇ ಬಂಧಿತ ಆರೋಪಿ.ಜ. ೨೭ರಂದು ಹೊರ ಬೀಡುವಿನ ದಿನ, ಮುಂಡಗೋಡ ಪಟ್ಟಣದ ಅಂಬೇಡ್ಕರ್ ಓಣಿಯಲ್ಲಿರುವ ಮನೆಯ ಮುಂದಿನ ಬಾಗಿಲು ಮುರಿದು ಒಳಗೆ ನುಗ್ಗಿ ರೂಮನಲ್ಲಿದ್ದ ಟ್ರಜರಿಯ ಬಾಗಿಲು ಮುರಿದು ಕಳ್ಳತನ ಮಾಡಿಕೊಂಡು ಹೋಗಿದ್ದನು. ₹೯೬ ಸಾವಿರ ಮೌಲ್ಯದ ೬ ಗ್ರಾಂ ಬಂಗಾರದ ಗುಂಡಿನ ಸರ, ₹೬೪ ಸಾವಿರ ಮೌಲ್ಯದ ೪ ಗ್ರಾಂ ಬಂಗಾರದ ಕಿವಿಯೋಲೆ, ₹೧೬ ಸಾವಿರ ಮೌಲ್ಯದ ೧ ಗ್ರಾಂ ಬಂಗಾರದ ಲಕ್ಷ್ಮೀ ಲಾಕೆಟ್, ₹೪೮ ಸಾವಿರ ಮೌಲ್ಯದ ೩ ಗ್ರಾಂ ಬಂಗಾರದ ಉಂಗುರ, ₹೧೬ ಸಾವಿರ ಮೌಲ್ಯದ ೧ ಗ್ರಾಂ ಬಂಗಾರದ ಸೈಡ್ ರಿಂಗ್, ₹೪ ಸಾವಿರ ಮೌಲ್ಯದ ಬೆಳ್ಳಿಯ ಚೈನ್ ಸೇರಿದಂತೆ ಒಟ್ಟೂ ₹೨,೪೪,೦೦೦ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಎಸ್ಪಿ ದೀಪನ್ ಎಂ.ಎನ್., ಅಡಿಶನಲ್ ಎಸ್ಪಿ ಕೃಷ್ಣಮೂರ್ತಿ ಹಾಗೂ ಜಗದೀಶ ಎಂ., ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಮಾರ್ಗದರ್ಶನದಲ್ಲಿ ಮುಂಡಗೋಡ ಪಿಐ ರಂಗನಾಥ ನೀಲಮ್ಮನವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು.ಮುಂಡಗೋಡ ಪಿಐ ರಂಗನಾಥ ನೀಲಮ್ಮನವರ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಮಂಜುನಾಥ ಚಿಂಚಲಿ, ಕೊಟೇಶ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ, ತಿರುಪತಿ ಚೌಡಣ್ಣನವರ, ಬಸವರಾಜ ಲಂಬಾಣಿ ಮತ್ತು ಕಲ್ಲಪ್ಪ ಹೊನ್ನಿಹಳ್ಳಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.