ಬೆಂ-ಮೈ ಎಕ್ಸ್ ಪ್ರೆಸ್ ವೇನಲ್ಲಿ ಹೊತ್ತಿ ಉರಿದ ಹೂ ಗಿಡಗಳು

| Published : Feb 03 2024, 01:48 AM IST

ಬೆಂ-ಮೈ ಎಕ್ಸ್ ಪ್ರೆಸ್ ವೇನಲ್ಲಿ ಹೊತ್ತಿ ಉರಿದ ಹೂ ಗಿಡಗಳು
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಬೆಂಕಿ ಕಿಡಿಯಿಂದಾಗಿ ಹೂ, ಗಿಡಗಳು ಹೊತ್ತಿ ಉರಿದಿರುವಂತಹ ಘಟನೆ ಬೆಂ-ಮೈ ಎಕ್ಸ್​ಪ್ರೆಸ್ ವೇನಲ್ಲಿ ಮಾಯಗಾನಹಳ್ಳಿ ಸಮೀಪ ನಡೆದಿದೆ.

ರಾಮನಗರ: ಬೆಂಕಿ ಕಿಡಿಯಿಂದಾಗಿ ಹೂ, ಗಿಡಗಳು ಹೊತ್ತಿ ಉರಿದಿರುವಂತಹ ಘಟನೆ ಬೆಂ-ಮೈ ಎಕ್ಸ್​ಪ್ರೆಸ್ ವೇನಲ್ಲಿ ಮಾಯಗಾನಹಳ್ಳಿ ಸಮೀಪ ನಡೆದಿದೆ. ಎಕ್ಸ್ ಪ್ರೆಸ್ ವೇ ಸುಂದರವಾಗಿ ಕಾಣಿಸಲೆಂದು ಹೆದ್ದಾರಿಯ ವಿಭಜಕ (ಡಿವೈಡರ್ )ನಲ್ಲಿ ಹೂ ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ. ಈ ಹೂವಿನ ಗಿಡಗಳು ಬೆಂಕಿಗಾಹುತಿಯಾಗಿವೆ. ಸಿಗರೇಟ್ ಸೇದಿ ಬಿಸಾಕಿದ ಪರಿಣಾಮ ಕಿಡಿ ಹತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಗಿಡಗಳಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಗೆ ಆವರಿಸಿಕೊಂಡಿತ್ತು. ನೀರಿನ ವಾಹನ ಬರಲು ತಡವಾದ ಹಿನ್ನೆಲೆಯಲ್ಲಿ ಪೊಲೀಸರು ಸಾರ್ವಜನಿಕರ ವಾಹನ ತಡೆದು ಬಾಟಲ್​ ನೀರು ಹಾಕಿ ಬೆಂಕಿ ನಂದಿಸಿದರು.