ಸಾರಾಂಶ
ಕನ್ನಡಪ್ರಭ ವಾರ್ತೆ ಧಾರವಾಡ
ರಸ್ತೆ ಬದಿ ನಿಂತಿದ್ದ ಬಾಲಕನಿಗೆ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಮೃತಪಟ್ಟ ಘಟನೆ ಶನಿವಾರ ಧಾರವಾಡ-ಹಳಿಯಾಳ ರಸ್ತೆಯಲ್ಲಿನ ಸಲಕಿನಕೊಪ್ಪದ ಬಳಿ ಸಂಭವಿಸಿದೆ.ಮುಧೋಳ ಮೂಲದ ಅರ್ಷದ ಅಹ್ಮದ ಸಲೀಂ ಚೌಧರಿ (8) ಮೃತಪಟ್ಟಿದ್ದು, ದಾಂಡೇಲಿಗೆ ತೆರಳುತ್ತಿದ್ದ ಸಮಯದಲ್ಲಿ ಸಲಕಿನಕೊಪ್ಪದ ಬಳಿ ಉಪಹಾರಕ್ಕಾಗಿ ಹೊಟೆಲ್ ಬಳಿ ಕಾರು ನಿಲ್ಲಿಸಿದಾಗ ಈ ಅವಘಡ ಸಂಭವಿಸಿದೆ.
ಉಪಹಾರ ಮುಗಿಸಿ ಬಾಲಕ ಕಾರು ಬಳಿ ನಿಂತ ಸಮಯದಲ್ಲಿ ದಾಂಡೇಲಿಯಿಂದ ಸೊಲ್ಲಾಪುರಕ್ಕೆ ತೆರಳುತ್ತಿದ್ದ ಬಸ್ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೇ ಆತ ಕೊನೆಯುದಿರೆಳೆದಿದ್ದಾನೆ.ಘಟನಾ ಸ್ಥಳಕ್ಕೆ ಪಿಎಸೈ ಬಸನಗೌಡ ಮಳೆಪ್ಪನವರ ಭೇಟಿ ನೀಡಿ, ಪರಿಶೀಲನೆ ನಡೆಸಿ ಘಟನೆ ಕುರಿತು ಮಾಹಿತಿ ಕಲೆ ಹಾಕಿದರು. ಈ ಸಂಬಂಧ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿರ್ಲಕ್ಷ್ಯವಾಯುವ್ಯ ಸಾರಿಗೆ ಸಂಸ್ಥೆ ಬಸ್ಸುಗಳ ಚಾಲಕರ ನಿರ್ಲಕ್ಷ್ಯ ಹೆಚ್ಚಾಗುತ್ತಿದೆ. ಅತಿಯಾದ ವೇಗವಾಗಿ ಬಸ್ ಚಲಾಯಿಸುವ ಚಾಲಕರು ಮಕ್ಕಳು-ದನಕರು, ವಯೋವೃದ್ಧರು, ಬೈಕ್ ಸವಾರರು ಅವರ ಕಣ್ಣಿಗೆ ಕಾಣೋದಿಲ್ಲ. ನಗರ ಪ್ರದೇಶದಲ್ಲಿ ನಿಧಾನವಾಗಿ ಚಲಿಸಬೇಕು ಎಂಬ ಸಾಮಾನ್ಯ ಜ್ಞಾನವೂ ಇಲ್ಲದೇ ಹೊರ ಜಿಲ್ಲೆಗಳಿಂದ ಧಾರವಾಡಕ್ಕೆ ಆಗಮಿಸುವ ಬಸ್ಸುಗಳು ಬೈಪಾಸ್ ರಸ್ತೆ ಇಳಿದು ಹೊಸ ಬಸ್ ನಿಲ್ದಾಣಕ್ಕೆ ಹೋಗುವಾಗ ಹಾರ್ನ್ ಹಾಕುತ್ತಾ ಅತಿಯಾದ ವೇಗದಲ್ಲಿ ಬಸ್ ಚಲಾಯಿಸುವುದು ಸಾಮಾನ್ಯವಾಗಿದೆ. ಈ ಬಗ್ಗೆ ಹಲವು ಬಾರಿ ಸಾರಿಗೆ ಇಲಾಖೆಗೆ ದೂರು ಸಲ್ಲಿಸಿದರೂ ಚಾಲಕರು ಮಾತ್ರ ತಮ್ಮ ಚಾಳಿ ಮಾತ್ರ ಕಡಿಮೆ ಮಾಡಿಲ್ಲ. ಹೀಗಾಗಿ ಅನಾಹುತ ನಡೆಯುವ ಮುಂಚೆಯೇ ಇಲಾಖೆ ಅಧಿಕಾರಿಗಳು ಬಸ್ ಚಾಲಕರಿಗೆ ನಗರದಲ್ಲಿ ವೇಗ ನಿಯಂತ್ರಿಸಲು ಸೂಚನೆ ನೀಡಬೇಕು ಎಂದು ಸಾಧನಕೇರಿ ನಿವಾಸಿಗಳು ಆಗ್ರಹಿಸುತ್ತಾರೆ.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))