ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಮಲೆಮಾದೇಶ್ವರ ಬೆಟ್ಟದಿಂದ ಹುಣಸೂರಿಗೆ ತೆರಳುತ್ತಿದ್ದ ಸಾರಿಗೆ ಬಸ್‌ನ ಬ್ರೇಕ್ ವಿಫಲಗೊಂಡು 75ಕ್ಕೂ ಹೆಚ್ಚು ಮಾದಪ್ಪನ ಭಕ್ತರು ಚಾಲಕನ ಸಮಯಪ್ರಜ್ಞೆಯಿಂದ ಪಾರಾಗಿರುವ ಘಟನೆ ಭಾನುವಾರ ಮಧ್ಯಾಹ್ನ ಜರುಗಿದೆ.ಹನೂರು ತಾಲೂಕಿನ ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟಕ್ಕೆ ಹುಣಸೂರು ರಾಜ್ಯ ಸಾರಿಗೆ ಡಿಪೋದಿಂದ ಮಲೆಮಾದೇಶ್ವರ ಬೆಟ್ಟಕ್ಕೆ ಬಂದಂತ ಸಾರಿಗೆ ವಾಹನ ಬೆಟ್ಟದಲ್ಲಿ ಪೂಜೆ ಸಲ್ಲಿಸಿದ ಭಕ್ತಾದಿಗಳು ನಂತರ ವಾಪಸ್ ಬರುವಾಗ ಸಾರಿಗೆ ಬ್ರೇಕ್ ವಿಫಲಗೊಂಡು 75 ಹೆಚ್ಚು ಭಕ್ತಾದಿಗಳು ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹಾಗೂ ಚಾಲಕ ಮಾಹಿತಿ ನೀಡಿದ್ದಾರೆ.
ಘಟನೆಯ ವಿವರ:ಮಧ್ಯಾಹ್ನ ಮಲೆಮಾದೇಶ್ವರ ಬೆಟ್ಟದಿಂದ ಹೊರಟಂತ ಸಾರಿಗೆ ಬಸ್ ಬ್ರೇಕ್ ಸಮಸ್ಯೆ ಇದ್ದ ಕಾರಣ ಮಾದೇಶ್ವರ ಬೆಟ್ಟದಲ್ಲಿ ತಪಾಸಣೆಗೊಳಿಸಿ ಬಂದಿರುವ ವಾಹನ ಮತ್ತೆ ಪೊನ್ನಾಚಿ ಕ್ರಾಸ್ ಬಳಿ ಬ್ರೇಕ್ ಸಮಸ್ಯೆ ಉಂಟಾಗಿ ಚಾಲಕನ ಸಮಯಪ್ರಜ್ಞೆ ಹಾಗೂ ತುಂಬಿ ತುಳುಕಿದ ಮಾದಪ್ಪನ ಭಕ್ತಾದಿಗಳು ಬಸ್ಸಿನಲ್ಲಿದ್ದ ಕಾರಣ ಚಾಲಕ ಗಣೇಶ್ ಬಸ್ ಅಪಘಾತಕ್ಕೆ ಒಳಗಾಗುವ ಮುನ್ನ ಚಾಲಕನ ಸಮಯ ಪ್ರಜ್ಞೆಯಿಂದ ರಸ್ತೆ ಬದಿಯ ತೀವ್ರ ತಿರುವಿನ ತಡೆ ಗೋಡೆಗೆ ಬಡಿದು ವಾಹನ ನಿಲ್ಲಿಸಿ 75ಕ್ಕೂ ಹೆಚ್ಚು ಭಕ್ತರು ಪಾರಾಗಿದ್ದಾರೆ.
ಡಕೋಟಾ ಸಾರಿಗೆ ವಾಹನಗಳಿಂದ ಸರಣಿ ಅಪಘಾತ:ಮಾದೇಶ್ವರ ಬೆಟ್ಟದಿಂದ, ಆನೆಹೊಲ ಗ್ರಾಮದಿಂದ ತಾಳು ಬೆಟ್ಟದ ವರೆಗೆ ನೆಟ್ವರ್ಕ್ ಸಮಸ್ಯೆ ಜೊತೆಗೆ ಇಂತಹ ಘಟನೆಗಳು ಅಪಘಾತಗಳು ಸಂಭವಿಸಿದಾಗ ತುರ್ತು ವಾಹನಗಳಿಗೆ ಅಥವಾ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಲು ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಜೊತೆಗೆ ಡಕೋಟಾ ಬಸ್‌ಗಳನ್ನು ಮಾದೇಶ್ವರ ಬೆಟ್ಟದ ವಿಶೇಷ ದಿನಗಳಲ್ಲಿ ಬಿಡಲಾಗುತ್ತಿದೆ. ಈ ಬಗ್ಗೆ ಭಕ್ತರ ಸುರಕ್ಷಿತ ದೃಷ್ಟಿಯಿಂದ ಉತ್ತಮ ಗುಣಮಟ್ಟದ ಬಸ್‌ಗಳನ್ನು ಮಾದೇಶ್ವರ ಬೆಟ್ಟಕ್ಕೆ ವಿವಿಧ ಡಿಪೋಗಳಿಂದ ಬಿಡಲು ಕ್ರಮ ಕೈಗೊಳ್ಳಬೇಕುಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಜೀವಿ ರಾಜು ಹೇಳಿದ್ದಾರೆ.
ಮಲೆಮಾದೇಶ್ವರ ಬೆಟ್ಟದಲ್ಲಿ ವಾಹನದ ಬ್ರೇಕ್ ಸಮಸ್ಯೆ ಉಂಟಾಗಿ ಅಲ್ಲಿನ ಡಿಪೋನಲ್ಲಿ ತೋರಿಸಲಾಗಿತ್ತು. ಆದರೆ ಬರುವಷ್ಟರಲ್ಲಿ ಮತ್ತೆ ಬ್ರೇಕ್ ವಿಫಲಗೊಂಡು 75 ಹೆಚ್ಚು ಭಕ್ತರು ತುಂಬಿರುವ ಬಸ್ ಪ್ರಪಾತಕ್ಕೆ ಉರುಳಿ ಬೀಳುತ್ತದೆ ಎಂಬುದನ್ನು ಅರಿತು ಭಕ್ತರನ್ನು ರಕ್ಷಿಸಲು ತೀವ್ರ ತಿರುವಿನ ತಡೆ ಗೋಡೆಗೆ ಬಸ್ಸನ್ನು ಡಿಕ್ಕಿ ಹೊಡೆಸಿ ಬಸ್ಸನ್ನು ನಿಲ್ಲಿಸಲಾಯಿತು.ಗಣೇಶ್, ಚಾಲಕ, ರಾಜ್ಯ ಸಾರಿಗೆ ಇಲಾಖೆ.;Resize=(128,128))
;Resize=(128,128))
;Resize=(128,128))