ಹಳ್ಳಕ್ಕೆ ಇಳಿದ ಬಸ್: ಓರ್ವ ವಿದ್ಯಾರ್ಥಿಗೆ ಗಾಯ

| Published : Nov 26 2023, 01:15 AM IST

ಹಳ್ಳಕ್ಕೆ ಇಳಿದ ಬಸ್: ಓರ್ವ ವಿದ್ಯಾರ್ಥಿಗೆ ಗಾಯ
Share this Article
  • FB
  • TW
  • Linkdin
  • Email

ಸಾರಾಂಶ

ಹಾರೋಹಳ್ಳಿ: ಆನೇಕಲ್ ರಸ್ತೆಯ ಚಿಕ್ಕನದೊಡ್ಡಿ ಬಳಿ ಗ್ರೀನ್ ಬೆಲ್ ಹೈ ಸ್ಕೂಲ್‌ ಗೆ ಸೇರಿದ ಶಾಲಾ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಇಳಿದ ಪರಿಣಾಮ ಓರ್ವ ವಿದ್ಯಾರ್ಥಿಯ ತಲೆಗೆ ಪೆಟ್ಟಾಗಿದೆ.

ಹಾರೋಹಳ್ಳಿ: ಆನೇಕಲ್ ರಸ್ತೆಯ ಚಿಕ್ಕನದೊಡ್ಡಿ ಬಳಿ ಗ್ರೀನ್ ಬೆಲ್ ಹೈ ಸ್ಕೂಲ್‌ ಗೆ ಸೇರಿದ ಶಾಲಾ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಇಳಿದ ಪರಿಣಾಮ ಓರ್ವ ವಿದ್ಯಾರ್ಥಿಯ ತಲೆಗೆ ಪೆಟ್ಟಾಗಿದೆ. ಗೊಟ್ಟಿಗೆಹಳ್ಳಿ ಗ್ರಾಮದ ರೋಹಿತ್ ಗಾಯಾಳು. ಹಾರೋಹಳ್ಳಿ ಮತ್ತು ಆನೇಕಲ್ ಮಾರ್ಗವಾಗಿ ಶಾಲೆಯ ಬಸ್ ವಿದ್ಯಾರ್ಥಿಗಳನ್ನು ಮನೆಗೆ ತಲುಪಿಸಿ ಬರುತ್ತಿತ್ತು. ಈ ವೇಳೆ ಬಸ್ಸಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಸ್ ನಿಯಂತ್ರಣ ತಪ್ಪಿ ಹಳ್ಳಕ್ಕೆ ಇಳಿದಿದೆ. ಇನ್ನು ಅದೃಷ್ಟವಶಾತ್ ದೊಡ್ಡ ಅನಾಹುತವೊಂದು ತಪ್ಪಿದ್ದು ಬಸ್ಸಿನಲ್ಲಿ 10-15 ಮಂದಿ ವಿದ್ಯಾರ್ಥಿಗಳು ಚಲಿಸುತ್ತಿದ್ದರು ಎನ್ನಲಾಗಿದೆ. ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.25ಕೆಆರ್ ಎಂಎನ್ 8,9.ಜೆಪಿಜಿ

ಹಾರೋಹಳ್ಳಿಯ ಚಿಕ್ಕನದೊಡ್ಡಿ ಗೇಟ್ ಬಳಿ ಗ್ರೀನ್ ಬೆಲ್ ಶಾಲೆಯ ಬಸ್ ಹಳ್ಳಕ್ಕೆ ಇಳಿದಿರುವುದು.