ಶೃಂಗೇರಿ ನಿಯಂತ್ರಣ ತಪ್ಪಿಉರುಳಿದ ಬಸ್: 8 ಪ್ರಯಾಣಿಕರಿಗೆ ಗಾಯ

| Published : May 18 2025, 01:33 AM IST

ಶೃಂಗೇರಿ ನಿಯಂತ್ರಣ ತಪ್ಪಿಉರುಳಿದ ಬಸ್: 8 ಪ್ರಯಾಣಿಕರಿಗೆ ಗಾಯ
Share this Article
  • FB
  • TW
  • Linkdin
  • Email

ಸಾರಾಂಶ

ಶೃಂಗೇರಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮಂಗಳೂರು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 169 ರ ಕೆರೆಕಟ್ಟೆ ಸಮೀಪ ಪ್ರವಾಸಿ ಬಸ್ ನಿಯಂತ್ರಣ ತಪ್ಪಿ ಹೊಂಡಕ್ಕುರುಳಿದ ಘಟನೆ ಶನಿವಾರ ಸಂಜೆ ಸಂಭವಿಸಿದೆ.

ಶೃಂಗೇರಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮಂಗಳೂರು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 169 ರ ಕೆರೆಕಟ್ಟೆ ಸಮೀಪ ಪ್ರವಾಸಿ ಬಸ್ ನಿಯಂತ್ರಣ ತಪ್ಪಿ ಹೊಂಡಕ್ಕುರುಳಿದ ಘಟನೆ ಶನಿವಾರ ಸಂಜೆ ಸಂಭವಿಸಿದೆ.

ಮಂಗಳೂರು ಕಡೆಯಿಂದ ಶೃಂಗೇರಿಯತ್ತ ಸಂಚರಿಸುತ್ತಿದ್ದ ತುಮಕೂರು ಕೊರಟಗೆರೆ ಮೂಲದ ಬಸ್ ಗಣಪತಿಕಟ್ಟೆ ತಿರುವಿ ನಲ್ಲಿ ನಿಯಂತ್ರಣ ತಪ್ಪಿ ಹೊಂಡಕ್ಕೆ ಉರುಳಿ ಬಿದ್ದಿದೆ. ಬಸ್ ನಲ್ಲಿ ಸುಮಾರು 34 ಪ್ರಯಾಣಿಕರಿದ್ದು, 8 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಷಯ ತಿಳಿದ ಶೃಂಗೇರಿ ಪೋಲೀಸರು, ಅಗ್ನಿಶಾಮಕದಳದ ಸಿಬ್ಬಂದಿ ಆಂಬುಲೆನ್ಸ್ ಸಹಿತ ಘಟನಾ ಸ್ಥಳಕ್ಕೆ ದೌಡಾಯಿಸಿ ಕಾರ್ಯಪ್ರವೃತರಾಗಿ ಗಾಯಾಳುಗಳನ್ನು ಶೃಂಗೇರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಇದು ಅಪಘಾತ ವಲಯವಾಗಿದ್ದು, ಅಪಾಯಕಾರಿ ತಿರುವಿನಿಂದ ಕೂಡಿದೆ. ರಸ್ತೆ ಕಿರಿದಾಗಿದ್ದು, ಅನೇಕ ಅಪಘಾತಗಳು ಆಗಾಗ ಅಪಘಾತಗಳು ಸಂಭವಿಸುತ್ತಿವೆ.

17 ಶ್ರೀ ಚಿತ್ರ 2-

ಶೃಂಗೇರಿ ಕೆರೆಕಟ್ಟೆ ರಾ.ಹೆ 169 ರ ಕೆರೆಕಟ್ಟೆ ಸಮೀಪ ಪ್ರವಾಸಿ ಬಸ್ ನಿಯಂತ್ರಣ ತಪ್ಪಿ ಹೊಂಡಕ್ಕುರುಳಿ ಬಿದ್ದಿರುವುದು.