ಸಾರಾಂಶ
ಜೋಡಿ ತಿಪ್ಪನಹಳ್ಳಿಯಲ್ಲಿ ನಿಗಮದ ಚಿಕ್ಕಮಗಳೂರು ವಿಭಾಗೀಯ ವ್ಯವಸ್ಥಾಪಕರ ಆದೇಶದ ಮೇರೆಗೆ ಕೋರಿಕೆಯ ನಿಲುಗಡೆ ನೀಡಲಾಗುತ್ತಿದೆ. ಈ ಹಳ್ಳಿಗೆ ಸೇರಿದ ಸುಮಾರು ಹತ್ತು ಹದಿನೈದು ಹಳ್ಳಿಗಳ ಸೇರ್ಪಡೆಯಾದ ದೊಡ್ಡ ಕೇಂದ್ರ. ಈ ಸ್ಥಳದಲ್ಲಿ ಬಸ್ಸುಗಳನ್ನು ನಿಲ್ಲಿಸದೆ ಹಾಗೆ ಹೋಗುತ್ತಿದ್ದರು. ಈ ಭಾಗದ ರೈತಾಪಿ ಜನರಿಗೆ ತುಂಬಾ ತೊಂದರೆ ಆಗುತ್ತಿತ್ತು. ಅದರ ಜೊತೆಗೆ ಆಸ್ಪತ್ರೆಗೆ ಹೋಗುವ ಜನತೆಗೆ ತೊಂದರೆಯಾಗಿತ್ತು. ಸ್ವಂತ ಆಟೋ ಮಾಡಿಕೊಂಡು ಹೋಗಬೇಕಾಗಿತ್ತು. ಆದ ಕಾರಣ ಸ್ಥಳೀಯ ಮುಖಂಡರು ಬಂದು ನನ್ನನ್ನು ಸಂಪರ್ಕಿಸಿ ಈ ಸ್ಥಳದಲ್ಲಿ ಕೋರಿಕೆ ನಿಲ್ದಾಣ ಕೇಳಿದರು.
ಕನ್ನಡಪ್ರಭ ವಾರ್ತೆ ಹಳೇಬೀಡು
ಸಮೀಪದ ರಾಷ್ಟ್ರೀಯ ಹೆದ್ದಾರಿ ೨೩೪ ಕ್ಕೆ ಹೊಂದಿಕೊಂಡಿರುವ ಜೋಡಿ ತಿಪ್ಪನಹಳ್ಳಿಯಲ್ಲಿ ನಿಗಮದ ಚಿಕ್ಕಮಗಳೂರು ವಿಭಾಗೀಯ ವ್ಯವಸ್ಥಾಪಕರ ಆದೇಶದ ಮೇರೆಗೆ ಕೋರಿಕೆಯ ನಿಲುಗಡೆ ನೀಡಲಾಗುತ್ತಿದೆ.ಈ ಸಂದರ್ಭದಲ್ಲಿ ಬೇಲೂರು ಕ್ಷೇತ್ರ ಶಾಸಕ ಎಚ್. ಕೆ. ಸುರೇಶ್ ಮಾತನಾಡುತ್ತ, ಈ ಹಳ್ಳಿಗೆ ಸೇರಿದ ಸುಮಾರು ಹತ್ತು ಹದಿನೈದು ಹಳ್ಳಿಗಳ ಸೇರ್ಪಡೆಯಾದ ದೊಡ್ಡ ಕೇಂದ್ರ. ಈ ಸ್ಥಳದಲ್ಲಿ ಬಸ್ಸುಗಳನ್ನು ನಿಲ್ಲಿಸದೆ ಹಾಗೆ ಹೋಗುತ್ತಿದ್ದರು. ಈ ಭಾಗದ ರೈತಾಪಿ ಜನರಿಗೆ ತುಂಬಾ ತೊಂದರೆ ಆಗುತ್ತಿತ್ತು. ಅದರ ಜೊತೆಗೆ ಆಸ್ಪತ್ರೆಗೆ ಹೋಗುವ ಜನತೆಗೆ ತೊಂದರೆಯಾಗಿತ್ತು. ಸ್ವಂತ ಆಟೋ ಮಾಡಿಕೊಂಡು ಹೋಗಬೇಕಾಗಿತ್ತು. ಆದ ಕಾರಣ ಸ್ಥಳೀಯ ಮುಖಂಡರು ಬಂದು ನನ್ನನ್ನು ಸಂಪರ್ಕಿಸಿ ಈ ಸ್ಥಳದಲ್ಲಿ ಕೋರಿಕೆ ನಿಲ್ದಾಣ ಕೇಳಿದರು. ತಕ್ಷಣವೇ ಚಿಕ್ಕಮಗಳೂರು ವಿಭಾಗದ ವ್ಯವಸ್ಥಾಪಕರೊಂದಿಗೆ ಮಾತನಾಡಿದಾಗ ತಕ್ಷಣವೇ ಆದೇಶವನ್ನು ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹಳೇಬೀಡಿನ ಟ್ರಾಫಿಕ್ ಅಧಿಕಾರಿ ಅರಣ್ ಕುಮಾರ್ ಹಾಗೂ ಪಕ್ಷದ ಮುಖಂಡರು ಗ್ರಾಮಸ್ಥರು ಹಾಜರಿದ್ದರು.