ಸಾರಾಂಶ
ಮೂಡಲಗಿ: ತಾಲೂಕಿನ ತಿಗಡಿ ಗ್ರಾಮಕ್ಕೆ ಸಮರ್ಪಕ ಬಸ್ ಸಂಚಾರಕ್ಕೆ ಆಗ್ರಹಿಸಿ ಗೋಕಾಕ್ ಬಸ್ ನಿಲ್ದಾಣದ ನಿಲ್ದಾಧಿಕಾರಿ ಕೆ.ವಿ.ಜಮಾದಾರ್‌ಗೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಮನವಿ ಸಲ್ಲಿಸಿದರು. ಗೋಕಾಕ ನಗರದ ಕಾಲೇಜುಗಳಿಗೆ ತಿಗಡಿ, ಸುಣಧೋಳಿ, ತಳಕಟ್ನಾಳ, ಕಂಡರಟ್ಟಿ ತೋಟದ ಸುಮಾರು 60 ರಿಂದ 70 ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಹೋಗುತ್ತಾರೆ. ಬಸ್ ಸಮಸ್ಯೆ ಬಗ್ಗೆ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ತಿಳಿಸಿದಾಗ ಗೋಕಾಕ್ ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದರು.ಗೋಕಾಕ್ ಬಸ್ ನಿಲ್ದಾಣದ ನಿಲ್ದಾಣಾಧಿಕಾರಿ ತಿಗಡಿ ಗ್ರಾಮಕ್ಕೆ ಆಗಮಿಸಿ ಸ್ಥಳೀಯರಿಂದ ಮನವಿ ಸ್ವಿಕರಿಸಿದ್ದು, ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಬಸ್ ಬಿಡುವುದಾಗಿ ಭರವಸೆ ನೀಡಿದರು. ಕಲ್ಲುಕಣಿವೆ ಹಾಗೂ ಸುತ್ತಲಿನ ಗ್ರಾಮಗಳ ಗ್ರಾಮಸ್ಥರಿಗೆ ಮತ್ತು ವಿದ್ಯಾರ್ಥಿಗಳಿಗಾಗಿ 3-4 ದಿನಗಳಲ್ಲಿ ಬಸ್ ಬಿಡುವುದಾಗಿ ಹೇಳಿದರು. ನಾಲ್ಕು ದಿನಗಳಲ್ಲಿ ಬಸ್ಸು ಬಿಡದಿದ್ದರೆ, ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ರಸ್ತೆತಡೆ ಮಾಡಲಾಗುವುದು ಎಂದು ವಿದ್ಯಾರ್ಥಿಗಳು, ಪಾಲಕರು ಮತ್ತು ಹಿರಿಯರಾದ ಹನುಮಂತ ಅಂಬಿ, ಯಲ್ಲಪ್ಪ ಹುಲಿಕಟ್ಟಿ, ರುದ್ರಗೌಡ ಪಾಟೀಲ್, ಸಿದ್ದರಾಯ್ ಬಿರಡಿ, ರಫೀಕ್ ಲಡ್ಕಾನ, ಅಶೋಕ್ ಪೂಜಾರಿ ಇತರರು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.