ಮಿರಗಿ ಗ್ರಾಮಕ್ಕೆ ಬಸ್‌ ಸಂಚಾರ ಆರಂಭ

| Published : Mar 31 2024, 02:06 AM IST

ಸಾರಾಂಶ

ಮಿರಗಿ ಗ್ರಾಮಕ್ಕೆ ಅಫಜಲಪುರ ಘಟಕದಿಂದ ನಿತ್ಯ ಬಸ್‌ ಸಂಚಾರ ಆರಂಭಗೊಂಡಿದೆ.

ಇಂಡಿ: ತಾಲೂಕಿನ ಮಿರಗಿ ಗ್ರಾಮಕ್ಕೆ ಅಫಜಲಪುರ ಘಟಕದಿಂದ ನಿತ್ಯ ಬಸ್‌ ಸಂಚಾರ ಆರಂಭಗೊಂಡಿದೆ. ಪ್ರತಿನಿತ್ಯ ಅಫಜಲಪುರದಿಂದ ಸಂಜೆ 7 ಗಂಟೆಗೆ ಹೊರಡುವ ಬಸ್‌ ಕರಜಗಿ, ಉಡಚಣ, ರೋಡಗಿ, ಶಿವಾಪುರ, ಗೋಳಸಾರ ಮಾರ್ಗವಾಗಿ ಸಂಜೆ 8.30ಕ್ಕೆ ಮಿರಗಿ ಗ್ರಾಮಕ್ಕೆ ತಲುಪುತ್ತದೆ. ಮರುದಿನ ಬೆಳಗ್ಗೆ 6ಕ್ಕೆ ಹೊರಡುವ ಬಸ್‌ ಗೋಳಸಾರ, ಉಡಚಣ, ಕರಜಗಿ ಮಾರ್ಗವಾಗಿ ಅಫಜಲಪುರ ತಲುಪುತ್ತದೆ. ಬಸ್‌ ಸಂಚಾರದ ಸದುಪಯೋಗವನ್ನು ಪ್ರಯಾಣಿಕರು ಪಡೆದುಕೊಳ್ಳಬೇಕು ಘಟಕ ವ್ಯವಸ್ಥಾಪಕರು ತಿಳಿಸಿದ್ದಾರೆ.