ಸಾರಾಂಶ
ಮುಂಡಗೋಡ: ಹಣಕ್ಕಾಗಿ ಪಟ್ಟಣದ ಎನ್‌ಎಂಡಿ ಗ್ರೂಪ್ ಮಾಲೀಕ ಜಮೀರ್ ಅಹ್ಮದ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣದ ಮತ್ತಿಬ್ಬರು ಆರೋಪಿಗಳನ್ನು ಮುಂಬೈಯಲ್ಲಿ ಬಂಧಿಸಿ ಕರೆತಂದಿದ್ದಾರೆ.
ಫಯಾಜ್ ಬಿಜಾಪುರ್ ಹಾಗೂ ಸಾಧಿಕ್ ವಾಲಿಕಾರ್ ಬಂಧಿತರು. ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಮುಂಡಗೋಡ ಪೊಲೀಸರು ಮಂಬೈಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಅಲ್ಲಾಹುದ್ದೀನ್ ರಹೀಮ್ ಮಹಮ್ಮದ್ ಜಾಫರ್ ರಜ್ಜಬ್ ಅಲಿ, ಅಜಯ ಅಜ್ಯಾ ಫಕ್ಕೀರಪ್ಪ ಮಡ್ಡಿ, ಸಾಗರ ನಾಗರಾಜ ಕಲಾಲ್, ಹಸನ್ ಮೈನುದ್ದಿನ ಕಿಲ್ಲೆದಾರ, ದಾದಾಪೀರ ಅಲ್ಲಾಭಕ್ಷ ಬಿಜಾಪೂರ, ಖಾಜಾಮೊಹಿದ್ದಿನ ಮಹಮ್ಮದಹನೀಪ್ ಬಿಜಾಪೂರ, ಉಮೇಜ್‌ವುಲ್ಲಾ ಫೈಜುಲ್ಲಾ ಬೇಪಾರಿ, ಅಲ್ತಾಫ್ ರಿಯಾಜ್ ಅಹ್ಮದ್ ಬೇಪಾರಿ, ರೆಹಮತ್ ಮೆಹಬೂಬಸಾಬ ಧಾರವಾಡ, ಅವೇಜ್ ಫೈಜುಲ್ಲಾ ಬೇಪಾರಿ, ಸಂಜು ಅರ್ಜುನ ಸೇರಿದಂತೆ ಒಟ್ಟು ೧೩ ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಆರೋಪಿತರಿಂದ ₹೧೭,೭೫,೫೦೦ ಹಣವನ್ನು ಜಪ್ತಿ ಮಾಡಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್, ಶಿರಸಿ ಡಿವೈಎಸ್ಪಿ ಗಣೇಶ ಕೆ.ಎಲ್. ಮಾರ್ಗದರ್ಶನದಲ್ಲಿ ಪಿಐ ರಂಗನಾಥ್ ನೀಲಮ್ಮನವರ್ ನೇತೃತ್ವದಲ್ಲಿ ಪಿಎಸ್‌ಐಗಳಾದ ಪರಶುರಾಮ ಮಿರ್ಜಗಿ, ಹನುಮಂತ ಕುಡಗುಂಟಿ ಹಾಗೂ ಸಿಬ್ಬಂದಿಗಳಾದ ಅನ್ವರಖಾನ ಇಸ್ಮಾಯಿಲ್ ಖಾನ, ಕೋಟೇಶ್ವರ ನಾಗರವಳ್ಳಿ, ಮಹಾಂತೇಶ ಮುಧೋಳ, ತಿರುಪತಿ ಚೌಡಣ್ಣನವರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಪ್ರಕರಣ ಹಿನ್ನೆಲೆ: ಕಳೆದ ಜ. 9ರಂದು ₹60 ಲಕ್ಷ ಹಣಕ್ಕಾಗಿ ಎನ್‌ಎಂಡಿ ಗ್ರೂಪ್ ಮಾಲೀಕ ಜಮೀರ್ ಅಹ್ಮದ ಎಂಬವರನ್ನು ಪಟ್ಟಣದಲ್ಲಿ ಅಪಹರಣ ಮಾಡಲಾಗಿತ್ತು. ಬಳಿಕ ಆರೋಪಿಗಳು 18,20 ಲಕ್ಷವನ್ನುಜಮೀರ್ ಅಹ್ಮದ್ ಅವರಿಂದ ಪಡೆದು ಅವರನ್ನು ಹುಬ್ಬಳ್ಳಿಯ ಹೊರವಲಯದಲ್ಲಿ ಬಿಟ್ಟು ಪರಾರಿಯಾಗಿದ್ದರು. ಪ್ರಕರಣ ಬೆನ್ನತ್ತಿದ ಪೊಲೀಸರು ಇಲ್ಲಿಯವರೆಗೆ ಒಟ್ಟು 13 ಆರೋಪಿಗಳನ್ನು ಬಂಧಿಸಿದ್ದಾರೆ.ಮೀಟರ್ ಬಡ್ಡಿ ದಂಧೆಕೋರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಮುಂಡಗೋಡ: ಪಟ್ಟಣದಲ್ಲಿ ಮೀಟರ್ ಬಡ್ಡಿ ದಂಧೆಕೋರರಿಂದ ಯಾರಿಗಾದರೂ ತೊಂದರೆಯಾಗಿದ್ದಲ್ಲಿ ತಮ್ಮ ಗಮನಕ್ಕೆ ತಂದರೆ ಯಾವುದೇ ಮುಲಾಜಿಲ್ಲದೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ನೊಂದವರಿಗೆ ನೆರವು ನೀಡಲಾಗುವುದು ಎಂದು ಸಿಪಿಐ ರಂಗನಾಥ ನೀಲಮ್ಮನವರ ತಿಳಿಸಿದರು.ಸೋಮವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೀಟರ್ ಬಡ್ಡಿ ದಂದೆಯಲ್ಲಿ ತೊಗಿದವರು ತಕ್ಷಣ ಅದನ್ನೆಲ್ಲ ಬಿಟ್ಟು ಸರಳ ಜೀವನಕ್ಕೆ ಮರಳಬೇಕು. ಇಲ್ಲದೆ ಹೋದಲ್ಲಿ ಅಂಥವರ ಮೇಲೆ ಯಾವುದೇ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಬಡ್ಡಿ ವ್ಯವಹಾರದಲ್ಲಿ ತೊಡಗಿದ ಹಾಗೂ ರೌಡಿಶೀಟರ್‌ಗಳ ಗಡಿಪಾರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಮನವಿ ಮಾಡಿದ್ದೇವೆ ಎಂದರು.
ಇತ್ತೀಚೆಗೆ ದರೋಡೆಕೋರರನ್ನು ಬಂಧಿಸಲು ಹೋದ ಸಂದರ್ಭದಲ್ಲಿ ನಮ್ಮ ಮೇಲೆಯೇ ದಾಳಿ ನಡೆಸಿದವರ ಮೇಲೆ ಗುಂಡು ಹಾರಿಸಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳಿಂದ ದರೋಡೆ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಇನ್ನು ಮುಂದೆ ಇಂತಹ ಕೃತ್ಯಗಳು ನಡೆಯದಂತೆ ನೋಡಿಕೊಳ್ಳಲಾಗುವುದು ಎಂದರು.