ಶಾಲೆಯಲ್ಲೇ ನೋಟ್‌ಬುಕ್‌ ಮಾರಾಟಕ್ಕೆ ವ್ಯಾಪಾರಸ್ಥರ ವಿರೋಧ

| Published : May 08 2025, 12:37 AM IST

ಸಾರಾಂಶ

ಪಟ್ಟಣ ಹಾಗೂ ಸುತ್ತಮುತ್ತಲಿನ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ನೋಟ್ ಬುಕ್ ಮತ್ತು ಸ್ಟೇಶನರಿ ಸಾಮಗ್ರಿಗಳನ್ನು ಶಾಲೆಯವರೇ ಮಾರಾಟ ಮಾಡುತ್ತಿದ್ದಾರೆ ಎಂದು ಫ್ಯಾನ್ಸಿ ಸ್ಟೋರ್ ಹಾಗೂ ಸ್ಟೇಶನರಿ ಅಂಗಡಿಗಳ ಮಾಲೀಕರ ಸಂಘದ ಪದಾಧಿಕಾರಿಗಳು ಆರೋಪಿಸಿದರು.

ಶಿಗ್ಗಾಂವಿ: ತಾಲೂಕಿನ ಕೆಲವು ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ನೋಟ್ ಬುಕ್ ಮತ್ತು ಸ್ಟೇಶನರಿ ಸಾಮಗ್ರಿಗಳನ್ನು ಆಯಾ ಶಾಲೆಯವರೇ ಮಾರಾಟ ಮಾಡುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿ ಇಲ್ಲಿನ ಫ್ಯಾನ್ಸಿ ಸ್ಟೋರ್ ಹಾಗೂ ಸ್ಟೇಶನರಿ ಅಂಗಡಿಗಳ ಮಾಲೀಕರ ಸಂಘದ ಪದಾಧಿಕಾರಿಗಳು ಬಿಇಒ ಎಂ.ಬಿ. ಅಂಬಗೇರ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣ ಹಾಗೂ ಸುತ್ತಮುತ್ತಲಿನ ಅನುದಾನಿತ ಹಾಗೂ ಅನುದಾತರಹಿತ ಶಾಲೆಗಳಲ್ಲಿ ನೋಟ್ ಬುಕ್ ಮತ್ತು ಸ್ಟೇಶನರಿ ಸಾಮಗ್ರಿಗಳನ್ನು ಶಾಲೆಯವರೇ ಮಾರಾಟ ಮಾಡುತ್ತಿದ್ದಾರೆ. ಇದರಿಂದ ನಮ್ಮ ಸಂಘದಲ್ಲಿ ಇರುವ ಅಂಗಡಿಗಳಿಗೆ ವ್ಯಾಪಾರ, ವಹಿವಾಟು ಇಳಿಕೆಯಾಗಿದೆ. ಅಂಗಡಿ ಬಾಡಿಗೆ ಸಹ ಕೊಡಲು ತೊಂದರೆಯಾಗಿದೆ. ಜೀವನೋಪಾಯಕ್ಕೆ ಅಂಗಡಿ ಇಟ್ಟುಕೊಂಡು ಸ್ಟೇಶನರಿ, ನೋಟ್‌ಬುಕ್‌ಗಳನ್ನು ವ್ಯಾಪಾರ ನಡೆಸುತ್ತಾ ಬಂದಿದ್ದೇವೆ. ಈಗ ನೋಟ್‌ಬುಕ್‌ ಸೇರಿದಂತೆ ಹಲವು ವಸ್ತುಗಳನ್ನು ಶಾಲೆಗಳಲ್ಲಿಯೇ ಮಾರಾಟ ಮಾಡುವುದರಿಂದ ಅಂಗಡಿಗಳ ವ್ಯಾಪಾರ ಕುಂಠಿತವಾಗಿದೆ ಎಂದರು.

ಸಂಬಂಧಿಸಿದ ಅಧಿಕಾರಿಗಳು ಸಂಘದ ಅಂಗಡಿಗಳಿಗೆ ವ್ಯಾಪಾರ ಮಾಡಿಕೊಂಡು ಹೋಗಲು ಅನುಕೂಲ ಮಾಡಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ಯಾನ್ಸಿ ಸ್ಟೋರ್ ಹಾಗೂ ಸ್ಟೇಶನರಿ ಮಾಲೀಕರ ಸಂಘದ ಪದಾಧಿಕಾರಿಗಳಾದ ಈಶ್ವರ ಕರಡಿ, ನಿಜಗುಣಿ ಕೊಟ್ರಪ್ಪನವರ, ಶಿವಕುಮಾರ ಮಡ್ಲೀಕರ, ಮುದಕಪ್ಪ ಬಿಂದಲಗಿ, ರವಿ ಕಡೆಮನಿ, ಮುತ್ತು ಕುರವತ್ತಿ, ಎಂ.ಐ. ಮುಲ್ಲಾ, ಸಂಜು ಮಾಳವದೆ ಸೇರಿದಂತೆ ಇತರರಿದ್ದರು.ಸಂಭ್ರಮದ ಶ್ರೀನಿವಾಸ ಕಲ್ಯಾಣೋತ್ಸವ

ರಾಣಿಬೆನ್ನೂರು: ಇಲ್ಲಿನ ಮೆಡ್ಲೇರಿ ರಸ್ತೆ ವಾಗೀಶನಗರದಲ್ಲಿನ ವೆಂಕಟೇಶ್ವರ ದೇವಸ್ಥಾನದಲ್ಲಿ ಬುಧವಾರ ಶ್ರೀನಿವಾಸ ಕಲ್ಯಾಣೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.ಗೋವಿಂದ ಚಿಮ್ಮಲಗಿ ನೇತೃತ್ವದ ಅರ್ಚಕರ ತಂಡ ಶ್ರೀನಿವಾಸ ಮತ್ತು ಪದ್ಮಾವತಿದೇವಿ ಕಲ್ಯಾಣೋತ್ಸವದ ಪೂಜಾ ಕಾರ್ಯಗಳನ್ನು ನೆರವೇರಿಸಿದರು.

ಕಲ್ಯಾಣೋತ್ಸವದ ಅಂಗವಾಗಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಸ್ಥಾನ ಕಮಿಟಿ ಅಧ್ಯಕ್ಷ ನಾಗರಾಜ ರಾಯಚೂರ, ನಾಗರಾಜ ಗೌಡ್ರು, ವೆಂಕಟೇಶ ಬಸ್ತಿಪಾಡ, ಅಶೋಕ ಅರೆಪಲ್ಲಿ, ಹನುಮಂತಪ್ಪ ಅರೆಪಲ್ಲಿ, ಚಂದ್ರು ರಾಯಚೂರ, ಕೆ. ಗುರುರಾಜ, ಅಜಿತ ರಾಯಚೂರ, ಅಮಿತ ರಾಯಚೂರ, ಶ್ರೀನಿವಾಸ ರಾಯಚೂರ, ಶ್ರೀಕಾಂತ ರಾಯಚೂರ ಸೇರಿದಂತೆ ಸಹಸ್ರಾರು ಭಕ್ತಾದಿಗಳು ದೇವರ ದರ್ಶನ ಪಡೆದುಕೊಂಡರು.