ಸಾರಾಂಶ
ಮತ ಎಣಿಕೆಯ ದಿನದಂದು ಗಣೇಶ ಮೂರ್ತಿಗೆ ಬೆಣ್ಣೆ ಅಲಂಕಾರ ಮಾಡುವಂತೆ ಒಂದು ತಿಂಗಳ ಮುಂಚಿತವಾಗಿಯೇ ದೇವಸ್ಥಾನದ ಪೂಜಾ ಬಳಗದವರಲ್ಲಿ ಕೇಳಿಕೊಂಡಿದ್ದರು.
ಕೊಟ್ಟೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಮೂರನೇ ಬಾರಿಗೆ ಮತ್ತೆ ಅಧಿಕಾರದ ಗದ್ದುಗೆ ಪಡೆಯಲು ವಿನಾಯಕ ಕೃಪೆ ತೋರಿ ಕರುಣಿಸಲಿ ಎಂದು ಪಟ್ಟಣದ ಬಿಜೆಪಿ ಕಾರ್ಯಕರ್ತ ಎಪಿಎಂಸಿ ಮಾಜಿ ಸದಸ್ಯ ಎಂ.ಎಂ.ಜೆ. ವಾಗೀಶ್ ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿರುವ ಗಣೇಶ ದೇವಸ್ಥಾನದ ಮೂರ್ತಿಗೆ ಬೆಣ್ಣೆ ಅಲಂಕಾರದ ಸೇವೆಯನ್ನು ಲೋಕಸಭೆ ಚುನಾವಣೆಯ ಮತ ಎಣಿಕೆಯ ದಿನವಾದ ಮಂಗಳವಾರ ಸಲ್ಲಿಸಿದರು.
ಮತ ಎಣಿಕೆಯ ದಿನದಂದು ಗಣೇಶ ಮೂರ್ತಿಗೆ ಬೆಣ್ಣೆ ಅಲಂಕಾರ ಮಾಡುವಂತೆ ಒಂದು ತಿಂಗಳ ಮುಂಚಿತವಾಗಿಯೇ ದೇವಸ್ಥಾನದ ಪೂಜಾ ಬಳಗದವರಲ್ಲಿ ಕೇಳಿಕೊಂಡಿದ್ದರು. ಅದರಂತೆ 5 ಕೆಜಿ ಬೆಣ್ಣೆಯನ್ನು ದೇವಸ್ಥಾನಕ್ಕೆ ವಾಗೀಶ್ ಅರ್ಪಿಸಿ ಗಣೇಶ ಮೂರ್ತಿಗೆ ಅಲಂಕರಿಸಿ ಪೂಜೆ ಸಲ್ಲಿಸಲು ಅನುವು ಮಾಡಿಕೊಟ್ಟರು. ಮಂಗಳವಾರ ಬೆಳಿಗ್ಗೆ 5-30 ರಿಂದ 6.00 ಗಂಟೆಯ ಸುಮಾರಿಗೆ ಗಣೇಶ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಿದ ದೇವಸ್ಥಾನದ ಪೂಜಾ ಬಳಗದ ಹರೀಶ್ ಮತ್ತು ಗಿರೀಶ್ ನಂತರ ಭಕ್ತರಿಗೆ ಮೂರ್ತಿಯ ದರ್ಶನ ಮಾಡಿಕೊಳ್ಳಲು ಅನುವು ಮಾಡಿಕೊಟ್ಟರು.ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಂತೆ ಹಾಗೂ ನರೇಂದ್ರ ಮೊದಿ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವಂತೆ ಗಣೇಶ ಆರ್ಶೀವಾದ ಕರುಣಿಸುವಂತೆ ಪ್ರಾರ್ಥಿಸಿ ಬಿಜೆಪಿಯ ಕಾರ್ಯಕರ್ತ ವಾಗೀಶ್ ಈ ಸೇವೆ ಸಲ್ಲಿಸಿದರು.