ಕೋವಿಡ್ ಸಂಕಷ್ಟದಲ್ಲಿ ಬಿ.ವಿ.ಶ್ರೀನಿವಾಸ್ ಸೇವೆ ಅನನ್ಯ: ಶ್ರೀಜಿತ್ ದಂಡಿನ ಮಕ್ಕಿ

| Published : Nov 09 2025, 01:45 AM IST

ಕೋವಿಡ್ ಸಂಕಷ್ಟದಲ್ಲಿ ಬಿ.ವಿ.ಶ್ರೀನಿವಾಸ್ ಸೇವೆ ಅನನ್ಯ: ಶ್ರೀಜಿತ್ ದಂಡಿನ ಮಕ್ಕಿ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಕೋವಿಡ್ ಸಂದರ್ಭದಲ್ಲಿ ಆಗ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಭದ್ರಾವತಿಯ ಬಿ.ವಿ.ಶ್ರೀನಿವಾಸ್ ಅವರ ಸೇವೆ ಅನನ್ಯವಾಗಿತ್ತು ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಜಿತ್ ದಂಡಿನ ಮಕ್ಕಿ ತಿಳಿಸಿದರು.

- ಕಾಂಗ್ರೆಸ್ ಕಚೇರಿಯಲ್ಲಿ ಬಿ.ವಿ.ಶ್ರೀನಿವಾಸ್ ಹುಟ್ಟು ಹಬ್ಬದ ಪ್ರಯುಕ್ತ ಯುವ ಕಾಂಗ್ರೆಸ್ ನೇತೃತ್ವದ ರಕ್ತದಾನ ಶಿಬಿರ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಕೋವಿಡ್ ಸಂದರ್ಭದಲ್ಲಿ ಆಗ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಭದ್ರಾವತಿಯ ಬಿ.ವಿ.ಶ್ರೀನಿವಾಸ್ ಅವರ ಸೇವೆ ಅನನ್ಯವಾಗಿತ್ತು ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಜಿತ್ ದಂಡಿನ ಮಕ್ಕಿ ತಿಳಿಸಿದರು.

ಶನಿವಾರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಯುವ ಕಾಂಗ್ರೆಸ್ ನೇತಾರ ಬಿ.ವಿ.ಶ್ರೀನಿವಾಸ್ ಹುಟ್ಟು ಹಬ್ಬದ ಅಂಗವಾಗಿ ಜಿಲ್ಲಾ ಯುವ ಕಾಂಗ್ರೆಸ್, ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಶಿವಮೊಗ್ಗ ಆಶಾ ಜ್ಯೋತಿ ಬ್ಲಡ್ ಬ್ಯಾಂಕಿನ ಸಹಕಾರದೊಂದಿಗೆ ನಡೆದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ಕೋವಿಡ್ ಸಂದರ್ಭದಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಭದ್ರಾವತಿಯ ಬಿ.ವಿ.ಶ್ರೀನಿವಾಸ್ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಸಂಘಟಿಸಿ ಸಾವಿರಾರು ಜನರಿಗೆ ಆಕ್ಸಿಜನ್ ಒದಗಿಸಿ ಜೀವ ಉಳಿಸಲು ನೆರವಾಗಿದ್ದರು.

ಕೇಂದ್ರ ಸರ್ಕಾರ ಮಾಡದ ಕೆಲಸವನ್ನು ಯುವ ಕಾಂಗ್ರೆಸ್ ಮಾಡಿತ್ತು. ಆಗ ರಾಹುಲ್ ಗಾಂಧಿಯವರು ಬಿ.ವಿ.ಶ್ರೀನಿವಾಸ್ ಅವರನ್ನು ರಾಜ್ಯ ಸಭಾ ಸದಸ್ಯರನ್ನಾಗಿ ಮಾಡುತ್ತೇವೆ ಎಂದಿದ್ದರು. ಆದರೆ, ಆ ಹುದ್ದೆ ನಿರಾಕರಿಸಿ ಪಕ್ಷದ ಸೇವೆ ಮಾಡಿದ್ದರು. ಆದ್ದರಿಂದ ಇಂದು ಯುವ ಕಾಂಗ್ರೆಸ್ ನೇತೃತ್ವದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದೇವೆ ಎಂದರು.

ಪಟ್ಟಣ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ ಮಾತನಾಡಿ, ಭದ್ರಾವತಿ ತಾಲೂಕಿನ ಬಿ.ವಿ.ಶ್ರೀನಿವಾಸ್ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ದೇಶದಾದ್ಯಂತ ಯುವ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ತಾವೂ ಬೆಳೆದು ಪಕ್ಷವನ್ನು ಬೆಳೆಸಿದ್ದರು. ಕೋವಿಡ್ ಸಮಯದಲ್ಲಿ ಆಕ್ಸಿಜನ್‌ ಕೊರತೆ ಇದ್ದಾಗ ಹೋರಾಟ ಮಾಡಿ ಆಕ್ಸಿಜನ್ ತಂದು ರೋಗಿ ಗಳ ನೀಡಿ ಜೀವ ಉಳಿಸಿದ್ದರಿಂದ ಅವರಿಗೆ ಆಕ್ಸಿಜನ್ ಮ್ಯಾನ್ ಎಂದು ಕರೆಯಲಾಗಿತ್ತು. ಇಂದು ಅವರ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಮಾಡುತ್ತಿದ್ದೇವೆ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ಮಾತನಾಡಿ, ಯುವ ಕಾಂಗ್ರೆಸ್ ಕೇವಲ ರಾಜಕಾರಣಕ್ಕೆ ಮಾತ್ರ ಸೀಮಿತವಾಗದೆ ಸಾಮಾಜಿಕ ಕೆಲಸ ಮಾಡುತ್ತಿದೆ. ಶಿವಮೊಗ್ಗದ ಆಶಾ ಜ್ಯೋತಿ ಬ್ಲಡ್ ಬ್ಯಾಂಕ್ ಜೊತೆ ಸೇರಿ ಬಿ.ವಿ.ಶ್ರೀನಿವಾಸ್ ಹುಟ್ಟು ಹಬ್ಬ ವನ್ನು ರಕ್ತದಾನ ಶಿಬಿರದ ಮೂಲಕ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ರತನ್ ಗೌಡ ಮಾತನಾಡಿ, 5 ವರ್ಷಗಳ ಕಾಲ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಬಿ.ವಿ.ಶ್ರೀನಿವಾಸ್ ಭದ್ರಾವತಿ ತಾಲೂಕಿನ ಸಣ್ಣ ಹಳ್ಳಿಯಿಂದ ಬಂದವರು. ಅವರ ಚತುರತೆ ಗುರುತಿಸಿದ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಕೂರಿಸಿದ್ದರು. ಸಿಕ್ಕಿದ ಅವಕಾಶದಲ್ಲಿ ಬಿ.ವಿ.ಶ್ರೀನಿವಾಸ್ ಅದ್ಭುತವಾಗಿ ಪಕ್ಷ ಸಂಘಟಿಸಿದ್ದರು ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಬಿಳಾಲು ಮನೆ ಉಪೇಂದ್ರ, ಕಾಂಗ್ರೆಸ್ ಮುಖಂಡರಾದ ದೇವಂತ ರಾಜ್, ಬಿನು, ಕಾರ್ತಿಕ್ ಕಾರ್ಗದ್ದೆ, ಯುವ ಕಾಂಗ್ರೆಸ್ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಕ್ಷಿರ, ಮಂಜೇಶ್ ಬಿಳುವ, ಕೌಸಿಕ್ ಪಟೇಲ್, ಎಂ.ಪಿ.ಅಭಿಲಾಶ್, ಯುವ ಕಾಂಗ್ರೆಸ್ ಮುಖಂಡ ನಂದನ್, ವಿಜಯ್, ನಿತಿನ್, ಸುಜಿತ್, ಶಿವಮೊಗ್ಗ ಆಶಾ ಜ್ಯೋತಿ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ಡಾ.ಮಲ್ಲಿಕಾರ್ಜುನ ಹುಲ್ಲಾ ಮನಿ, ಬ್ಲಡ್ ಬ್ಯಾಂಕಿನ ಪಿ.ಆರ್.ಒ ರವಿ,ಹಿರಿಯ ತಜ್ಞ ಎ.ಎಂ.ಸ್ವಾಮಿ ಮತ್ತಿತರರು ಇದ್ದರು.