ಹತ್ತು ಗ್ರಾಪಂಗಳಿಗೆ 23ರಂದು ಉಪಚುನಾವಣೆ

| Published : Nov 06 2024, 11:52 PM IST

ಸಾರಾಂಶ

ನ. 6ರಿಂದ ನ. 12ರ ಬೆಳಗ್ಗೆ 11ರಿಂದ ಮಧ್ಯಾಹ್ನ 3ರ ವರೆಗೆ (ಸಾರ್ವತ್ರಿಕ ರಜಾದಿನ ಹೊರತುವಡಿಸಿ) ನಾಮಪತ್ರ ಸಲ್ಲಿಸಬಹುದು. ನ. 9ರಂದು ರಜಾ ದಿನವಾಗಿದ್ದು ನಾಮಪತ್ರ ಸ್ವೀಕರಿಸುವುದಿಲ್ಲ. 13ರಂದು ನಾಮಪತ್ರಗಳ ಪರಿಶೀಲನೆ, ಹಿಂಪಡೆಯಲು ನ. 15 ಕೊನೆಯ ದಿನವಾಗಿದೆ.

ಧಾರವಾಡ:

ರಾಜ್ಯ ಚುನಾವಣಾ ಆಯೋಗದ ಆದೇಶದನ್ವಯ ಜಿಲ್ಲೆಯ ಹತ್ತು ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ, ಖಾಲಿ ಇರುವ ಗ್ರಾಪಂ ಸದಸ್ಯ ಸ್ಥಾನಗಳಿಗೆ ನ. 23ರಂದು ಉಪ ಚುನಾವಣೆ ನಡೆಯಲಿದೆ.

ಧಾರವಾಡ ತಾಲೂಕಿನ ಬೇಲೂರ ಕ್ಷೇತ್ರದ ಒಂದು (ಸಾಮಾನ್ಯ-1) ಖಾಲಿ ಸ್ಥಾನ ಹಾಗೂ ಮಾರಡಗಿ ಗ್ರಾಪಂನ ಸೋಮಾಪುರ ಕ್ಷೇತ್ರದ ಒಂದು (ಹಿಂದುಳಿದ ‘ಅ’ ಪ್ರವರ್ಗ) ಖಾಲಿ ಸ್ಥಾನ ಮತ್ತು ನವಲಗುಂದ ತಾಲೂಕಿನ ಯಮನೂರ ಗ್ರಾಪಂ ಆರೇಕುರಹಟ್ಟಿ 1ನೇ ಕ್ಷೇತ್ರದ (ಸಾಮಾನ್ಯ ಮಹಿಳೆ-1) ಮತ್ತು (ಸಾಮಾನ್ಯ-1) ಒಟ್ಟು ಎರಡು ಖಾಲಿ ಸ್ಥಾನ, ಆರೇಕುರಹಟ್ಟಿ 2ನೇ ಕ್ಷೇತ್ರದ (ಅನುಸೂಚಿತ ಜಾತಿ ಮಹಿಳೆ-1) ಮತ್ತು (ಹಿಂದುಳಿದ ‘ಅ’ ಪ್ರವರ್ಗ) ಒಟ್ಟು 2 ಖಾಲಿ ಸ್ಥಾನ, ಆರೇಕುರಹಟ್ಟಿ 3ನೇ ಕ್ಷೇತ್ರದ (ಹಿಂದುಳಿದ ‘ಬ’ ಪ್ರವರ್ಗ ಮಹಿಳೆ, ಹಿಂದುಳಿದ ‘ಅ’ ಪ್ರವರ್ಗ, ಸಾಮಾನ್ಯ ಮಹಿಳೆ ಹಾಗೂ ಸಾಮಾನ್ಯ) ಒಟ್ಟು ನಾಲ್ಕು ಖಾಲಿ ಸ್ಥಾನಗಳಿಗೆ ಉಪ ಚುನಾವಣೆ ಜರುಗಲಿದೆ. ಇನ್ನು, ಕಲಘಟಗಿ ತಾಲೂಕಿನ ಮುತ್ತಗಿ ಕ್ಷೇತ್ರದ ಒಂದು (ಅನುಸೂಚಿತ ಜಾತಿ) ಖಾಲಿ ಸ್ಥಾನ ಹಾಗೂ ಭೋಗೇನಾಗರಕೊಪ್ಪ ಗ್ರಾಪಂಯ ಬಗಡಗೇರಿ ಕ್ಷೇತ್ರದ ಒಂದು (ಸಾಮಾನ್ಯ) ಖಾಲಿ ಸ್ಥಾನ ಮತ್ತು ಸೂರಶೆಟ್ಟಿಕೊಪ್ಪ 2ನೇ ಕ್ಷೇತ್ರಕ್ಕೆ ಒಂದು (ಸಾಮಾನ್ಯ) ಖಾಲಿ ಸ್ಥಾನ, ಕುಂದಗೋಳ ತಾಲೂಕಿನ ಸಂಶಿ 3ನೇ ಕ್ಷೇತ್ರಕ್ಕೆ ಒಂದು (ಹಿಂದುಳಿದ ‘ಅ’ ಪ್ರವರ್ಗ ಮಹಿಳೆ) ಖಾಲಿ ಸ್ಥಾನ ಹಾಗೂ ಬರದ್ವಾಡ ಗ್ರಾಪಂ ಕೊಡ್ಲಿವಾಡ ಕ್ಷೇತ್ರದ ಒಂದು (ಸಾಮಾನ್ಯ) ಖಾಲಿ ಸ್ಥಾನ, ಅಣ್ಣಿಗೇರಿ ತಾಲೂಕಿನ ನಲವಡಿ 2ನೇ ಕ್ಷೇತ್ರಕ್ಕೆ ಒಂದು (ಸಾಮಾನ್ಯ) ಖಾಲಿ ಸ್ಥಾನ ಹಾಗೂ ಅಳ್ನಾವರ ತಾಲೂಕಿನ ಹೊನ್ನಾಪೂರ ಗ್ರಾಪಂ ಕಂಬಾರಗಣವಿ 2ನೇ ಕ್ಷೇತ್ರದ ಒಂದು (ಹಿಂದುಳಿದ ‘ಅ’ ಪ್ರವರ್ಗ ಮಹಿಳೆ) ಖಾಲಿ ಸ್ಥಾನಗಳಿಗೆ ಉಪ ಚುನಾವಣೆ ಜರುಗಲಿದೆ.

ವೇಳಾಪಟ್ಟಿ:

ನ. 6ರಿಂದ ನ. 12ರ ಬೆಳಗ್ಗೆ 11ರಿಂದ ಮಧ್ಯಾಹ್ನ 3ರ ವರೆಗೆ (ಸಾರ್ವತ್ರಿಕ ರಜಾದಿನ ಹೊರತುವಡಿಸಿ) ನಾಮಪತ್ರ ಸಲ್ಲಿಸಬಹುದು. ನ. 9ರಂದು ರಜಾ ದಿನವಾಗಿದ್ದು ನಾಮಪತ್ರ ಸ್ವೀಕರಿಸುವುದಿಲ್ಲ. 13ರಂದು ನಾಮಪತ್ರಗಳ ಪರಿಶೀಲನೆ, ಹಿಂಪಡೆಯಲು ನ. 15 ಕೊನೆಯ ದಿನವಾಗಿದೆ. ಮತದಾನ ಅವಶ್ಯವಿದ್ದರೆ ನ. 23ರಂದು ಬೆಳಗ್ಗೆ 7ರಿಂದ ಸಂಜೆ 5ರ ವರೆಗೆ ನಡೆಯಲಿದೆ. ಮತಗಳ ಎಣಿಕೆಯನ್ನು ಆಯಾ ತಾಲೂಕು ಕೇಂದ್ರಗಳಲ್ಲಿ ನ. 26ರಂದು ಬೆಳಗ್ಗೆ 8ಕ್ಕೆ ನಡೆಸಲಾಗುತ್ತದೆ. ಈ ಉಪ ಚುನಾವಣೆ ಹಿನ್ನೆಲೆಯಲ್ಲಿ ನ. 6ರಿಂದ 26ರ ವರೆಗೆ ಈ ಗ್ರಾಪಂಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ತಿಳಿಸಿದ್ದಾರೆ.