'15 ದಿನಗಳಿಂದ ಎಡಬಿಡದೇ ಸುರಿಯುತ್ತಿರುವ ಮಳೆಗೆ ಪರಿಹಾರ ನೀಡದ ಸರ್ಕಾರಕ್ಕೆ ಉಪ ಚುನಾವಣೆಯೇ ಮುಖ್ಯ'

| Published : Oct 22 2024, 01:23 AM IST / Updated: Oct 22 2024, 11:19 AM IST

'15 ದಿನಗಳಿಂದ ಎಡಬಿಡದೇ ಸುರಿಯುತ್ತಿರುವ ಮಳೆಗೆ ಪರಿಹಾರ ನೀಡದ ಸರ್ಕಾರಕ್ಕೆ ಉಪ ಚುನಾವಣೆಯೇ ಮುಖ್ಯ'
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ಉಪ ಚುನಾವಣೆಗಳಿಗೆ 10 ಸಚಿವರು ಹಾಗೂ 30 ಶಾಸಕರನ್ನು ಮೂರು ಕ್ಷೇತ್ರಗಳಿಗೆ ನೇಮಿಸಿದ್ದಾರೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗೆ ರಾಜ್ಯದ ರೈತರ ಹಿತಕ್ಕಿಂತ 3 ಉಪ ಚುನಾವಣೆಗಳೇ ಮುಖ್ಯವಾಗಿವೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ರಾಜ್ಯ ಸರ್ಕಾರವನ್ನು ತರಾಟೆ

 ಹೊನ್ನಾಳಿ : ರಾಜ್ಯದಲ್ಲಿ ಕಳೆದ 15 ದಿನಗಳಿಂದ ಎಡಬಿಡದೇ ಸುರಿಯುತ್ತಿರುವ ಮಳೆಗೆ ಆಹಾರ ಬೆಳೆಗಳು, ವಾಣಿಜ್ಯ ಬೆಳೆಗಳು ಹಾಗೂ ಆಸ್ತಿ ಪಾಸ್ತಿಗಳು ಹಾನಿಯಾಗಿವೆ. ಇದರಿಂದ ರೈತರು ಕೋಟ್ಯಂತರ ರು.ಗಳ ಆರ್ಥಿಕ ನಷ್ಟ ಹೊಂದಿದ್ದಾರೆ. ಆದರೆ, ರಾಜ್ಯ ಸರ್ಕಾರ ಗಂಭಿರವಾಗಿ ಪರಿಗಣಿಸದೇ ಮೂರು ಉಪ ಚುನಾವಣೆಗಳಿಗೆ 10 ಸಚಿವರು ಹಾಗೂ 30 ಶಾಸಕರನ್ನು ಮೂರು ಕ್ಷೇತ್ರಗಳಿಗೆ ನೇಮಿಸಿದ್ದಾರೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗೆ ರಾಜ್ಯದ ರೈತರ ಹಿತಕ್ಕಿಂತ 3 ಉಪ ಚುನಾವಣೆಗಳೇ ಮುಖ್ಯವಾಗಿವೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಸೋಮವಾರ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುರಿದ ಧಾರಾಕಾರ ಮಳೆಗೆ ಬಾಳೆ, ಅಡಕೆ, ಭತ್ತ, ಮೆಕ್ಕೆಜೋಳ ಸೇರಿದಂತೆ ತರಕಾರಿ ಬೆಳೆಗಳು ಸಂಪೂರ್ಣ ನೆಲಕಚ್ಚಿವೆ. ಈ ಹಿಂದೆ ಬಿದ್ದ ಭಾರಿ ಮಳೆ ಹಾನಿಯ ಪರಿಹಾರವೇ ಇನ್ನೂ ನೀಡಿಲ್ಲ. ಈಗ ಮತ್ತೆ ಹಿಂಗಾರು ಮಳೆಯಲ್ಲೂ ಸಾಕಷ್ಟು ಹಾನಿಯಾಗಿದೆ. ಸರ್ಕಾರ ಮಾತ್ರ ರೈತರ ಗೋಳು ಆಲಿಸದೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸರ್ಕಾರ ಶೀಘ್ರ ಎಚ್ಚೆತ್ತು ರೈತರ ಸಮಸ್ಯೆ ಆಲಿಸಿ, ಮಳೆಯಿಂದ ಹಾನಿಯಾದ ಮನೆಗಳು ಹಾಗೂ ಬೆಳೆಗಳಿಗೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ನೀಡಬೇಕು ಎಂದರು.

ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್, ಪುರಸಭೆ ಮಾಜಿ ಅಧ್ಯಕ್ಷರಾದ ಕೆ.ವಿ.ಶ್ರೀಧರ್, ಬಾಬು ಹೋಬಳದಾರ್, ರಂಗನಾಥ್, ಪುರಸಭೆ ಮಾಜಿ ಉಪಾಧ್ಯಕ್ಷೆ ರಂಜಿತಾ ಚನ್ನಪ್ಪ, ಮುಖಂಡರಾದ ಅರಕೆರೆ ನಾಗರಾಜ್, ಶಿವಾನಂದ್, ನವೀನ್ ಇಂಚರ, ಮಹೇಶ್ ಹುಡೇದ್, ಪೇಟೆ ಪ್ರಶಾಂತ್, ಸತೀಶ್ ಸೇರಿದಂತೆ ಇತರರು ಇದ್ದರು.