ಮಹಿಳೆಯರಿಂದ ಸ್ವಯಂ ಪ್ರೇರಿತ ರಕ್ತದಾನ

| Published : Mar 11 2024, 01:21 AM IST

ಸಾರಾಂಶ

ಮಹಿಳೆಯರಿಂದಲೇ ಆಯೋಜಿಸಲ್ಪಟ್ಟಿರುವ ಇಂದಿನ ರಕ್ತದಾನ ಶಿಬಿರ ಒಂದು ವಿಶೇಷವಾದ ಕಾರ್ಯಕ್ರಮವಾಗಿದ್ದು, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಮುಂದುವರೆಯವಂತೆ ರಕ್ತದಾನ ಮಾಡುವುದರಲ್ಲೂ ಮುಂದಾಗಿರುವುದು ಸಂತಸ ತಂದಿದೆ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ನಜರ್ ಬಾದ್ ನಲ್ಲಿರುವ ನೆಕ್ಸಾಸ್ ಸೆಂಟರ್ ಸಿಟಿಯಲ್ಲಿ ಜೀವದಾರ ರಕ್ತ ನಿಧಿ ಕೇಂದ್ರ ಮತ್ತು ಬ್ಲಡ್ ಆನ್ ಕಾಲ್ ಕ್ಲಬ್ ಮತ್ತು ಕೆಎಂಪಿಕೆ ಟ್ರಸ್ಟ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ 40 ಹೆಚ್ಚು ಮಹಿಳೆಯರು ಸ್ವಯಂ ಪ್ರೇರಿತ ರಕ್ತದಾನ ಮಾಡಿದರು.

ಇದೇ ವೇಳೆ ಅತಿ ಹೆಚ್ಚು ಬಾರಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದ ಶ್ರುತಿ ಜಿ ಬೋನ್ಸೆ, ಎಂ.ಎನ್. ಬಿಂದು, ವಸುಧಾ ವಿನೋದ್, ಅರ್ಚನಾ ಎಸ್. ಭಂಡಾರಿ, ಅಶ್ವಿನಿ, ಜಂಪಾ ಲಹಸ್ಟ್ಸೋ, ಅರ್ಪಿತ, ವಿ. ರೇವತಿ, ಶೋಭಾ ರಾಜು, ಮಮತಾ, ಎಸ್. ಲತಾಮನಿ, ಕೆ. ವಿಶಾಲಾಕ್ಷಿ ಅವರಿಗೆ ಜೀವ ರಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ವೇಳೆ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ, ಮಹಿಳೆಯರಿಂದಲೇ ಆಯೋಜಿಸಲ್ಪಟ್ಟಿರುವ ಇಂದಿನ ರಕ್ತದಾನ ಶಿಬಿರ ಒಂದು ವಿಶೇಷವಾದ ಕಾರ್ಯಕ್ರಮವಾಗಿದ್ದು, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಮುಂದುವರೆಯವಂತೆ ರಕ್ತದಾನ ಮಾಡುವುದರಲ್ಲೂ ಮುಂದಾಗಿರುವುದು ಸಂತಸ ತಂದಿದೆ ಎಂದರು.

ನೆಕ್ಸಸ್ ಸೆಂಟರ್ ಸಿಟಿಯ ಶ್ರೀಕುಮಾರ್, ಮನು, ಮೋಹನ್ ಕುಮಾರ್, ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಬಳ್ಳಾರಿ ಮೊರಾರ್ಜಿ ಶಾಲೆಯ ಪ್ರಾಂಶುಪಾಲೆ ಅನುಸೂಯ, ಬ್ಲಡ್ ಆನ್ ಕಾಲ್ ಕ್ಲಬ್ ಸಂಸ್ಥಾಪಕ ದೇವೇಂದ್ರ ಪರಿಹಾರಿಯಾ, ಆನಂದ್ ಮಾಂಡೋತ, ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಆನಂದ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ರಶ್ಮಿ, ಪ್ರಭು, ಸುರೇಶ್ ಮೊದಲಾದವರು ಇದ್ದರು.