ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ ತಡೆ ಹಿಡಿಯಲಾಗಿರುವ ಸಿದ್ಧಾಪುರ ಏತ ನೀರಾವರಿ ಯೋಜನೆಯನ್ನು ಈ ಹಿಂದೆ ಅನುಮೋದನೆಯಾದ ವಿನ್ಯಾಸದಂತೆಯೇ ಮುಂದುವರಿಸಲು ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕ ಎಂದು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಪತ್ರ
ಉಡುಪಿ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ ತಡೆ ಹಿಡಿಯಲಾಗಿರುವ ಸಿದ್ಧಾಪುರ ಏತ ನೀರಾವರಿ ಯೋಜನೆಯನ್ನು ಈ ಹಿಂದೆ ಅನುಮೋದನೆಯಾದ ವಿನ್ಯಾಸದಂತೆಯೇ ಮುಂದುವರಿಸಲು ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕ ಎಂದು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಪತ್ರ ಮೂಲಕ ಆಗ್ರಹಿಸಿದ್ದಾರೆ.
ಈ ಹಿಂದೆ ಈ ಯೋಜನೆಯು ತಜ್ಞರಿಂದ ವರದಿ ಪಡೆದ ಬಳಿಕ, ಸರ್ಕಾರದಿಂದ ಅನುಮೋದನೆಗೊಂಡು ಕಾರ್ಯಾರಂಭವಾಗಿತ್ತು. ಈ ಯೋಜನೆಯಿಂದ ಬೈಂದೂರು ಕ್ಷೇತ್ರದ 7 ರಿಂದ 8 ಗ್ರಾಮಗಳ 1200 ಹೆಕ್ಟೇರ್ ಕೃಷಿ ಭೂಮಿಗೆ ನೀರು ದೊರಕಲಿದೆ.ಈಗಾಗಲೇ ಕಾಮಗಾರಿಯು ಆರಂಭವಾಗಿದ್ದು ಶೇ 50 ರಷ್ಟು ಮುಗಿದಿರುತ್ತದೆ. ಆದರೆ ಬೈಂದೂರಿನ ಮಾಜಿ ಶಾಸಕರು ಖಾಸಗಿ ಒಡೆತನ ಕಿರು ಜಲವಿದ್ಯುತ್ ಉತ್ಪಾದನೆ ಘಟಕದವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ತಪ್ಪು ಮಾಹಿತಿ ನೀಡಿ ಈ ಯೋಜನೆಯ ಕಾಮಗಾರಿಗೆ ಸರಕಾರದ ಮೂಲಕ ತಡೆ ತಂದಿರುತ್ತಾರೆ. ವಾರಾಹಿ ನದಿಯ ನೀರಿನ ಹರಿವು 3000 ಕ್ಯೂಸೆಕ್ಸ್ ಇದ್ದು ಸಿದ್ದಾಪುರ ಏತ ನೀರಾವರಿ ಯೋಜನೆಗೆ ಕೇವಲ 86 ಕ್ಯೂಸೆಕ್ಸ್ ಬಳಕೆ ಆಗುತ್ತದೆ. ಇದರಿಂದ ಬೇರೆ ಯಾವುದೇ ಯೋಜನೆಗಳಿಗೆ ತೊಂದರೆಯಾಗುವುದಿಲ್ಲ ಎಂದವರು ಪತ್ರದಲ್ಲಿ ತಿಳಿಸಿದ್ದಾರೆ.ಅಆದ್ದರಿಂದ ಸಮಸ್ತ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ಸರ್ಕಾರದಿಂದ ತಡೆ ಹಿಡಿಲಾಗಿರುವ ಸಿದ್ದಾಪುರ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಈ ಹಿಂದಿನ ವಿನ್ಯಾಸದಲ್ಲಿ ಪುನರಾರಂಭಿಸಬೇಕು ಎಂದವರು ಮನವಿ ಮಾಡಿದ್ದಾರೆ.
