ಮುಖ್ಯ.. ರಾಜ್ಯಮಟ್ಟದ ಓಪನ್‌ ಬ್ಯಾಡ್‌ಮಿಂಟನ್‌ ಸ್ಪರ್ಧಾ ಕೂಟಕ್ಕೆ ಚಾಲನೆ

| Published : Feb 14 2024, 02:18 AM IST

ಮುಖ್ಯ.. ರಾಜ್ಯಮಟ್ಟದ ಓಪನ್‌ ಬ್ಯಾಡ್‌ಮಿಂಟನ್‌ ಸ್ಪರ್ಧಾ ಕೂಟಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ಕ್ರೀಡೆಯಿಂದ ಶಿಸ್ತು, ತಾಳ್ಮೆ, ಕ್ರಿಯಾಶೀಲತೆ, ವ್ಯಕ್ತಿತ್ವ ನಿರ್ಮಾಣ ಹಾಗೂ ಯಂಗ್‌ಇಂಡಿಯಾ ನಿರ್ಮಾಣದ ಕಡೆಗೆ ಸಹಕಾರಿಯಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಮೈಸೂರು

ಕ್ರೀಡಾ ಭಾರತಿ ವತಿಯಿಂದ ಫೆ. 11ರಂದು ರಾಜ್ಯಮಟ್ಟದ ಓಪನ್‌ ಬ್ಯಾಡ್‌ಮಿಂಟನ್‌ ಸ್ಪರ್ಧಾ ಕೂಟವನ್ನು ಕ್ರೀಡಾ ಭಾರತಿಯ ಜಿಲ್ಲಾಧ್ಯಕ್ಷ ಅಮೃತ್ ಪುರೋಹಿತ್ ನೇತೃತ್ವದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಮೈಸೂರಿನ ಮುಖ್ಯಸ್ಥ ಡಾ. ಸದಾನಂದ ಚಾಲನೆ ನೀಡಿದರು.

ನಂತರ ಅವರು ಮಾತನಾಡಿ, ಈ ಕ್ರೀಡೆಯಿಂದ ಶಿಸ್ತು, ತಾಳ್ಮೆ, ಕ್ರಿಯಾಶೀಲತೆ, ವ್ಯಕ್ತಿತ್ವ ನಿರ್ಮಾಣ ಹಾಗೂ ಯಂಗ್‌ಇಂಡಿಯಾ ನಿರ್ಮಾಣದ ಕಡೆಗೆ ಸಹಕಾರಿಯಾಗಿದೆ ಎಂದರು.

ಪ್ರಯೋಜಕರಾದ ಜಿಎಸ್‌ಎಸ್‌ ಮಾಧ್ಯಮ ಯುಟ್ಯೂಬ್ ಚಾನೆಲ್‌ಮುಖ್ಯ ನಿರ್ದೇಶಕಿ ರೂಪಶ್ರೀ, ಆಯೋಜಕರಾದ ಮಗ್ಗದ ಮನೆಯ ಪ್ರಶಾಂತ್, ರೆಡ್‌ ಎಫ್‌.ಎಂ 93.5 ನ ಶ್ರೀರಾಘವ ಮೈಸೂರು, ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಹೇಂದ್ರ ಪ್ರಸಾದ್, ಸ್ಪೋಟ್ಸ್‌ಸ್ಪಾರ್ಕ್‌ ಮಾಲೀಕರು ಶ್ರೀಕಾಂತ್ ಅವರು ನೆರವೇರಿಸಿಕೊಟ್ಟರು.

ಭಾರತಮಾತೆ ಹಾಗೂ ಆಂಜನೇಯನಿಗೆ ಪೂಜೆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಒಟ್ಟು ದಕ್ಷಿಣ ಪ್ರಾಂತ್ಯದಿಂದ 70 ತಂಡಗಳು ಬಂದಿದ್ದವು. ಅದರಲ್ಲಿ ತಂಡಗಳನ್ನ 4 ವಿಭಾಗಗಳಾಗಿ ವಿಂಗಡಿಸಲಾಗಿದೆ.

ಮೆನ್ಸ್ ಓಪನ್ ಡಬಲ್ಸ್, ಮೆನ್ಸ್ 75+ ಡಬಲ್ಸ್, ಮಿಕ್ಸ್ ಡಬಲ್ಸ್ ವಿಮೆನ್ಸ್ ಡಬಲ್ಸ್. ಇದರಲ್ಲಿ ಭಾಗವಹಿಸಿದ ಎಲ್ಲಾ ಆಟಗಾರರಿಗೂ ಪ್ರಮಾಣ ಪತ್ರ ವಿತರಿಸಲಾಯಿತು. ಮೊದಲು ಬಂದ ಎರಡು ತಂಡಗಳಿಗೆ ನಾಲ್ಕು ವಿಭಾಗಗಳಲ್ಲಿ ಜಿಎಸ್ಎಸ್ ಮಾಧ್ಯಮದ ಪ್ರಾಯೋಜಕತ್ವದಲ್ಲಿ 40 ಸಾವಿರ ನಗದು ಬಹುಮಾನ ಹಾಗೂ ಟ್ರೋಫಿ ವಿತರಿಸಲಾಯಿತು.

ಪುರುಷ ಡಬ್ಬಲ್ಸ್‌ ಓಪನ್‌- ವಿಜೇತರು - 8 ಸಾವಿರ, ರನ್ನರ್ಸ್‌ - 6 ಸಾವಿರ.

ಪುರುಷ 75+ - ವಿಜೇತರು - 6 ಸಾವಿರ, ರನ್ನರ್ಸ್‌ - 5 ಸಾವಿರ. - ಮಿಕ್ಸ್‌ ಡಬ್ಬಲ್ಸ್‌- ವಿಜೇತರು - 5 ಸಾವಿರ, ರನ್ನರ್ಸ್ - 3 ಸಾವಿರ. ಮಹಿಳಾ ಡಬ್ಬಲ್ಸ್‌- ವಿಜೇತರು - 4 ಸಾವಿರ, ರನ್ನರ್ಸ್‌ - 2 ಸಾವಿರ.