ಫೌಂಡ್ರಿ ಉದ್ಯಮದಲ್ಲಿ ಐಐಎಫ್ ಮಹತ್ತರ ಪಾತ್ರ: ಚಂದ್ರಶೇಖರ್

| Published : Feb 14 2024, 02:18 AM IST

ಫೌಂಡ್ರಿ ಉದ್ಯಮದಲ್ಲಿ ಐಐಎಫ್ ಮಹತ್ತರ ಪಾತ್ರ: ಚಂದ್ರಶೇಖರ್
Share this Article
  • FB
  • TW
  • Linkdin
  • Email

ಸಾರಾಂಶ

ಐಐಎಫ್ ವತಿಯಿಂದ ಮಂಗಳವಾರ ಶಿವಮೊಗ್ಗದಲ್ಲಿ 72ನೇ ಇಂಡಿಯನ್ ಫೌಂಡ್ರಿ ಸಮ್ಮೇಳನ ಮತ್ತು ಅಂತಾರಾಷ್ಟ್ರೀಯ ಫೌಂಡ್ರಿ ವಸ್ತು ಪ್ರದರ್ಶನ ನಡೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಫೌಂಡ್ರಿ ಉದ್ಯಮದ ಬೆಳವಣಿಗೆಯಲ್ಲಿ ದಿ ಇನ್ಸಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮನ್ ಮಹತ್ತರ ಪಾತ್ರ ವಹಿಸಿದೆ ಎಂದು ಐಐಎಫ್ ರಾಷ್ಟ್ರೀಯ ಅಧ್ಯಕ್ಷ ಡಿ.ಎಸ್. ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಐಐಎಫ್ ವತಿಯಿಂದ ಮಂಗಳವಾರ ಆಯೋಜಿಸಿದ್ದ 72ನೇ ಇಂಡಿಯನ್ ಫೌಂಡ್ರಿ ಸಮ್ಮೇಳನ ಮತ್ತು ಅಂತರಾಷ್ಟ್ರೀಯ ಫೌಂಡ್ರಿ ವಸ್ತು ಪ್ರದರ್ಶನದಲ್ಲಿ ಮಾತನಾಡಿ, ಸರ್ಕಾರಿ ಸಂಸ್ಥೆಗಳೊಂದಿಗೆ ಉದ್ಯಮಕ್ಕೆ ಬೇಕಾದಂತಹ ಸವಲತ್ತುಗಳ ಬಗ್ಗೆ ಗಮನ ಸೆಳೆಯುವುದು ಹಾಗೂ ಕೈಗಾರಿಕೆಗಳಿಗೆ ಸರ್ಕಾರದಿಂದ ದೊರೆಯುವ ಸವಲತ್ತುಗಳು ಹಾಗೂ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಐಐಎಫ್ ಕಾರ್ಯತತ್ಪರವಾಗಿದೆ ಎಂದು ತಿಳಿಸಿದರು.

ದಿ ಇನ್ಸಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮನ್ ಸ್ವಾಯತ್ತ ಸಂಸ್ಥೆ ಆಗಿದ್ದು, ಕೋಲ್ಕತ್ತಾ ನಗರದಲ್ಲಿ ಮುಖ್ಯ ಕಚೇರಿ ಇದೆ. ಸಂಸ್ಥೆಯು 4 ವಲಯ, 3 ಶ್ರೇಷ್ಠತಾ ಘಟಕ ಹಾಗೂ 24 ಶಾಖೆಗಳನ್ನು ದೇಶಾದ್ಯಂತ ಹೊಂದಿದೆ. “ಅವಕಾಶಗಳನ್ನು ಅನಾವರಣಗೊಳಿಸುವುದು” ಎಂಬ ಘೋಷವಾಕ್ಯದೊಂದಿಗೆ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದರು.

ದೇಶ ವಿದೇಶಗಳಿಂದ 1500ಕ್ಕೂ ಹೆಚ್ಚು ನೊಂದಾಯಿತ ಪ್ರತಿನಿಧಿಗಳು ಹಾಗೂ 20 ಸಾವಿರಕ್ಕೂ ಹೆಚ್ಚು ಸಂದರ್ಶಕರು ಭಾಗವಹಿಸಿದ್ದರು. 350 ಪ್ರದರ್ಶಕರು ಉತ್ಪನ್ನಗಳನ್ನು ಪ್ರದರ್ಶಿಸಲು ಮಳಿಗೆಗಳನ್ನು ಪಡೆದಿದ್ದರು. ಅಂತರರಾಷ್ಟ್ರೀಯ ಗುಣಮಟ್ಟದ ಮಳಿಗೆಗಳನ್ನು ತಯಾರಿಸಿದ್ದ ಪ್ರದರ್ಶಕರು ಉತ್ಪನ್ನಗಳನ್ನು ಪ್ರದರ್ಶಿಸಿದರು.

ಉದ್ಘಾಟನಾ ಕಾರ್ಯಕ್ರಮದ ನಂತರ ತಾಂತ್ರಿಕ ಅಧಿವೇಶನ, ಮಾರಾಟಗಾರರ ಭೇಟಿ ಕಾರ್ಯಕ್ರಮ, ಸಂವಾದ, ಹೊಸ ತಾಂತ್ರಿಕತೆಯ ಅನಾವರಣ, ಯುವ ಉದ್ಯಮಿ ಗಳೊಂದಿಗೆ ಮಾತುಕತೆ, ವಿಜಯ ಪ್ರಕಾಶ್ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು.

ಒಲ್ವೋ ಸಂಸ್ಥೆ ಮುಖ್ಯಸ್ಥ ಡಿ.ಎಂ.ಗಿರೀಶ್, ಆಟೋಮೊಟೀವ್ ಆಕ್ಸೆಲ್ ಲಿಮಿಟೆಡ್ ಸಂಸ್ಥೆ ಮುಖ್ಯ ನಿರ್ವಾಹಕ ಅಧಿಕಾರಿ ಎನ್‌.ಕುಮಾರ್, ಫ್ಲೋಸರ್ವ್ ಸಂಸ್ಥೆ ಜಾಗತಿಕ ವರ್ಗದ ನಿರ್ದೆಶಕ ಶ್ರೀರಾಂ ಸತೀಶ್, ಐಐಎಫ್ ರಾಷ್ಟ್ರೀಯ ಗೌರವ ಕಾರ್ಯದರ್ಶಿ ಎಸ್‌.ಕುಮಾರ್, ಸಂಘಟನಾ ಸಮಿತಿಯ ಅಧ್ಯಕ್ಷ ಎಸ್‌.ರುದ್ರೇಗೌಡ, ಮಾರ್ಗದರ್ಶಕ ಎಸ್.ಆರ್. ವಿ.ರಮಣನ್, ಉಪಾಧ್ಯಕ್ಷ ಸಂಜಯ್ ಶ್ರಾಫ್, ಸಿದ್ದರಾಜು.ಸಿ, ಬೆನಕಪ್ಪ.ಡಿ.ಜಿ, ಗೌರವ ಕಾರ್ಯದರ್ಶಿ ಅಂಕಿತ್.ಎಸ್.ದಿವೇಕರ್, ವಿಶ್ಲೇಶ್ ರಮಣನ್, ಉಪಕಾರ್ಯದರ್ಶಿ ಎನ್‌.ಗೋಪಾಲ್, ರಾಘವೇಂದ್ರ, ಗೌರವ ಖಜಾಂಚಿ ಕುಪ್ಪುಸಾಮಿ, ಐಫೆಕ್ಸ್ 2024 ಅಧ್ಯಕ್ಷ ಯೋಗೀಶ್‌ಕುಮಾರ್ ಹಾಗೂ ಉಪಾಧ್ಯಕ್ಷ ಮಹಾವೀರ್ ಜೈನ್, ಉಪ ಸಮಿತಿಯ ಎಲ್ಲಾ ಸದಸ್ಯರು, ಐಐಎಫ್ ಶಿವಮೊಗ್ಗ ಶಾಖೆಯ ಅಧ್ಯಕ್ಷ ಟಿ.ಎನ್‌.ಪರಮಶೇಖರ್ , ಎಚ್.ಬಿ.ನಂಜುಂಡೇಶ್ವರ ಮತ್ತಿತರು ಇದ್ದರು.13ಎಸ್ಎಂಜಿಕೆಪಿ06: ಶಿವಮೊಗ್ಗದ ಐಐಎಫ್ ವತಿಯಿಂದ ಮಂಗಳವಾರ ಆಯೋಜಿಸಿದ್ದ 72ನೇ ಇಂಡಿಯನ್ ಫೌಂಡ್ರಿ ಸಮ್ಮೇಳನ ಮತ್ತು ಅಂತರಾಷ್ಟ್ರೀಯ ಫೌಂಡ್ರಿ ವಸ್ತು ಪ್ರದರ್ಶನವನ್ನು ಐಐಎಫ್ ರಾಷ್ಟ್ರೀಯ ಅಧ್ಯಕ್ಷ ಡಿ.ಎಸ್.ಚಂದ್ರಶೇಖರ್ ಉದ್ಘಾಟಿಸಿದರು.