ಬೈಂದೂರು: ವಿವಿಧ ಕಾಮಗಾರಿಗಳಿಗೆ ಬಿ.ವೈ. ರಾಘವೇಂದ್ರ ಗುದ್ದಲಿ ಪೂಜೆ

| Published : Sep 04 2025, 01:01 AM IST

ಬೈಂದೂರು: ವಿವಿಧ ಕಾಮಗಾರಿಗಳಿಗೆ ಬಿ.ವೈ. ರಾಘವೇಂದ್ರ ಗುದ್ದಲಿ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಬೈಂದೂರು ವಿಧಾನಸಭಾ ಕ್ಷೇತ್ರದ ಹಲವು ಕಡೆಗಳಲ್ಲಿ ಕೇಂದ್ರ ಸರ್ಕಾರದ ಅನುದಾನದಲ್ಲಿ ಅನುಷ್ಠಾನಗೊಳ್ಳಲಿರುವ ವಿವಿಧ ಯೋಜನೆಗಳ ಕಾಮಗಾರಿಗಳಿಗೆ ಸಂಸದ ಬಿ.ವೈ.ರಾಘವೇಂದ್ರ ಗುದ್ದಲಿ ಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಕುಂದಾಪುರಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಸ್ತಾವನೆ ಸಲ್ಲಿಸಿರುವ ಅನೇಕ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಅನೇಕ ಯೋಜನೆಗಳು ಈಗಾಗಲೇ ಅನುಷ್ಠಾನಗೊಂಡಿದೆ. ಇನ್ನೂ ಕೆಲವು ಯೋಜನೆಗಳು ಕಾರ್ಯಾರಂಭಗೊಳ್ಳಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಬುಧವಾರ ಬೈಂದೂರು ವಿಧಾನಸಭಾ ಕ್ಷೇತ್ರದ ಹಲವು ಕಡೆಗಳಲ್ಲಿ ಕೇಂದ್ರ ಸರ್ಕಾರದ ಅನುದಾನದಲ್ಲಿ ಅನುಷ್ಠಾನಗೊಳ್ಳಲಿರುವ ವಿವಿಧ ಯೋಜನೆಗಳ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಪ್ರಧಾನಮಂತ್ರಿ ಜನ್‌ಮನ್ ಯೋಜನೆಯಡಿ 93.90 ಲಕ್ಷ ವೆಚ್ಚದ ಇಡೂರು-ಕುಂಜ್ಞಾಡಿಯ ಮಕ್ಕಿಮನೆ ರಸ್ತೆ, 94.36 ಲಕ್ಷ ರು. ವೆಚ್ಚದ ಆಲೂರು-ಹರ್ಕೂರು ರಸ್ತೆ, 53 ಲಕ್ಷ ರು. ವೆಚ್ಚದ ನೂಜಾಡಿ-ಕಟ್ಟಿನಮಕ್ಕಿ, 198.48 ಲಕ್ಷ ರು. ವೆಚ್ಚದ ವಂಡ್ಸೆ-ಆತ್ರಾಡಿ ರಸ್ತೆ ಹಾಗೂ 60 ಲಕ್ಷ ರು. ವೆಚ್ಚದಲ್ಲಿ ಬೆಳ್ಳಾಲ, ನಾಡಾ ಹಾಗೂ 74 ಉಳ್ಳೂರಿನಲ್ಲಿ ನಿರ್ಮಾಣವಾಗಲಿರುವ ವಿವಿಧ ಉದ್ದೇಶ ಕೇಂದ್ರಗಳ ಕಟ್ಟಡ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷೆ ಅನಿತಾ, ಪ್ರಧಾನ ಕಾರ್ಯದರ್ಶಿಗಳಾದ ಕರಣ್ ಪೂಜಾರಿ, ಗೋಪಾಲ್ ಪೂಜಾರಿ, ಮಾಜಿ ಮಂಡಲ ಅಧ್ಯಕ್ಷ ಎನ್. ದೀಪಕ್ ಕುಮಾರ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯ ರೋಹಿತ್‌ ಕುಮಾರ ಶೆಟ್ಟಿ, ಪ್ರಮುಖರಾದ ಡಾ.ಅತುಲ್‌ ಕುಮಾರ ಶೆಟ್ಟಿ, ಶರತ್ ಶೆಟ್ಟಿ ಉಪ್ಪುಂದ, ಸಾಮ್ರಾಟ್ ಶೆಟ್ಟಿ, ಮಾಲತಿ ನಾಯಕ್, ದೀಪಕ್ ಶೆಟ್ಟಿ ವಂಡ್ಸೆ, ನಿರ್ಮಲಾ ವಂಡ್ಸೆ ಇದ್ದರು.

-----------------ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಜನರಿಗೆ ಅನುಕೂಲವಾಗುವ ಅನೇಕ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಬೈಂದೂರು ವಿಧಾನಸಭಾ ಕ್ಷೇತ್ರದ ಜನರೂ ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು.

। ಬಿ.ವೈ. ರಾಘವೇಂದ್ರ, ಸಂಸದರು ಶಿವಮೊಗ್ಗ