Byndoor: MLAs worshipped the feet of Dalits

ಬೈಂದೂರು: ಇತ್ತೀಚೆಗಷ್ಟೇ ಕೊರಗ ಸಮುದಾಯದ ಮನೆಯಲ್ಲಿ ವಾಸ್ತವ್ಯ ಹೂಡಿ, ಕೊರಗ ಬಂಧುಗಳೊಂದಿಗೆ ಊಟೋಪಚಾರ, ಸಂವಾದ ನಡೆಸಿ ಸುದ್ದಿಯಾಗಿದ್ದ ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಅವರು ಇದೀಗ ಎಸ್‌ಸಿ ಕಾಲೊನಿಯಲ್ಲಿ ಸಹ ಭೋಜನ ಮಾಡಿದರು. ಹಟ್ಟಿಯಂಗಡಿ ಗ್ರಾಮದ ಕನ್ಯಾನ ಗುಡ್ಡೆ ಅಂಗಡಿ ಪ್ರದೇಶದ ಎಸ್‌ಸಿ ಕಾಲೊನಿಯ ಶಶಿ ಕುಮಾರ್ ಅವರ ಮನೆಗೆ ಭೇಟಿ ನೀಡಿದ ಶಾಸಕರು, ದಲಿತ ದಂಪತಿಯ ಪಾದಪೂಜೆ ನೆರವೇರಿಸಿ ಸಹಭೋಜನದಲ್ಲಿ ಭಾಗಿಯಾದರು.

ಗಂಟಿಹೊಳೆ ಅವರ ಈ ನಡೆಯ ಬಗ್ಗೆ ಪರಿಶಿಷ್ಟ ಕಾಲೊನಿ ಬಂಧುಗಳು ಸಂತಸ ವ್ಯಕ್ತಪಡಿಸಿದ್ದು, ಶಾಸಕರ ಈ ಕಾರ್ಯ ಸಮಾಜದಲ್ಲಿ ಜಾತಿ ತಾರತಮ್ಯ, ಅಶ್ಪೃಶ್ಯತೆಯ ಮನೋಭಾವನೆಯನ್ನು ತೊಡೆದುಹಾಕಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.