ಸಾರಾಂಶ
ಬಿಜೆಪಿ ಬೈಂದೂರು ಮಂಡಲ ವತಿಯಿಂದ ಉಪ್ಪುಂದದ ಕಚೇರಿಯಲ್ಲಿ ‘ಸೇವಾ ಪಾಕ್ಷಿಕ’ ಅಭಿಯಾನದ ‘ಮಂಡಲ ಕಾರ್ಯಾಗಾರ’ ಸಭೆ ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷೆ ಅನಿತಾ ಆರ್. ಕೆ. ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಬೈಂದೂರು
ಬಿಜೆಪಿ ಬೈಂದೂರು ಮಂಡಲ ವತಿಯಿಂದ ಉಪ್ಪುಂದದ ಕಚೇರಿಯಲ್ಲಿ ‘ಸೇವಾ ಪಾಕ್ಷಿಕ’ ಅಭಿಯಾನದ ‘ಮಂಡಲ ಕಾರ್ಯಾಗಾರ’ ಸಭೆ ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷೆ ಅನಿತಾ ಆರ್. ಕೆ. ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಸೇವಾ ಪಾಕ್ಷಿಕ ಮೋದಿ ಅವರ ಜನ್ಮದಿನ ಸೆ.17ರಿಂದ ಆರಂಭವಾಗಿ ಅ.2 ಗಾಂಧಿ ಜಯಂತಿ ತನಕ ವಿವಿಧ ಸೇವಾ ಕಾರ್ಯಕ್ರಮಗಳ ಮೂಲಕ ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತರು ವಿವಿಧ ಸೇವಾ ಕಾರ್ಯಕ್ರಮ ನಡೆಸುವರು ಎಂದರು .ಮಂಡಲ ಅಧ್ಯಕ್ಷ ಅನಿತಾ ಆರ್.ಕೆ., ಬಿಜೆಪಿ ಮಂಡಲದ ವಿವಿಧ ಸ್ತರದ ಪದಾಧಿಕಾರಿಗಳಿಗೆ ಸೇವಾ ಪಾಕ್ಷಿಕ ಜವಾಬ್ದಾರಿಗಳನ್ನು ಹಂಚಿಕೆ ಮಾಡಿದರು.ಜಿಲ್ಲಾ ಕಾರ್ಯದರ್ಶಿ, ಸೇವಾ ಪಾಕ್ಷಿಕದ ಸಹ ಸಂಚಾಲಕ ಶ್ರೀಕಾಂತ್ ನಾಯಕ್, ಸೇವಾ ಪಾಕ್ಷಿಕ ಕಾರ್ಯಕ್ರಮವು ಹೇಗೆ ನಡೆಯುತ್ತದೆ ಎಂದು ವಿವರಣಾತ್ಮಕವಾಗಿ ಪದಾಧಿಕಾರಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಬೈಂದೂರು ಮಂಡಲ ಪ್ರಧಾನ ಕಾರ್ಯದರ್ಶಿ ಕರಣ್ ಪೂಜಾರಿ, ಗೋಪಾಲ್ ಪೂಜಾರಿ, ಸೇವಾ ಪಾಕ್ಷಿಕದ ಮಂಡಲ ಸಂಚಾಲಕ ಗಣೇಶ್ ಗಾಣಿಗ, ಶಿಲ್ಪಾ ಶೆಟ್ಟಿ, ಹಾಗೂ ಮಂಡಲದ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾಗಳ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು .