ಹಿಂದೂ ಜಾಗರಣ ವೇದಿಕೆ ಬೈಂದೂರು ತಾಲೂಕು ವತಿಯಿಂದ ‘ಅಖಂಡ ಭಾರತ ಸಂಕಲ್ಪ ದಿನ’ದ ಪ್ರಯುಕ್ತ ದೇಶಭಕ್ತಿ-ರಾಷ್ಟ್ರೀಯತೆಯ ಭಾವನೆಯನ್ನು ಜಾಗೃತಗೊಳಿಸುವ ಉದ್ದೇಶದಿಂದ ಭವ್ಯ ಪಂಜಿನ ಮೆರವಣಿಗೆ, ಸಭಾ ಕಾರ್ಯಕ್ರಮ ಆಯೋಜಿಸಲಾಯಿತು.

ಬೈಂದೂರು: ಹಿಂದೂ ಜಾಗರಣ ವೇದಿಕೆ ಬೈಂದೂರು ತಾಲೂಕು ವತಿಯಿಂದ ‘ಅಖಂಡ ಭಾರತ ಸಂಕಲ್ಪ ದಿನ’ದ ಪ್ರಯುಕ್ತ ದೇಶಭಕ್ತಿ-ರಾಷ್ಟ್ರೀಯತೆಯ ಭಾವನೆಯನ್ನು ಜಾಗೃತಗೊಳಿಸುವ ಉದ್ದೇಶದಿಂದ ಭವ್ಯ ಪಂಜಿನ ಮೆರವಣಿಗೆ, ಸಭಾ ಕಾರ್ಯಕ್ರಮ ಆಯೋಜಿಸಲಾಯಿತು.ಮುಖ್ಯ ಭಾಷಣಕಾರರಾಗಿದ್ದ ಹಿಂಜಾವೇ ನಾಯಕ ಕೇಶವ್ ಬಂಗೇರ ಮಾತನಾಡಿ, ಇಂದಿನ ಜೆನ್-ಜಿ ಮತ್ತು ಜೆನ್-ಆಲ್ಫಾ ಯುವ ಪೀಳಿಗೆಯು ಕೆಲವೊಮ್ಮೆ ದಾರಿ ತಪ್ಪುವ ಹಾಗೂ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವ ಸಂದರ್ಭದಲ್ಲಿ ಅವರದ್ದೇ ವಯಸ್ಸಿನಲ್ಲಿ ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ಅಮರ ಕ್ರಾಂತಿಕಾರಿ ಭಗತ್ ಸಿಂಗ್ ಮತ್ತು ಅಂದಿನ ಕಾಲದ ಇತರ ಯುವ ಹೋರಾಟಗಾರರ ಅಮೂಲ್ಯ ತ್ಯಾಗ-ಬಲಿದಾನಗಳನ್ನು ಅವರಿಗೆ ಮನದಟ್ಟು ಮಾಡುವ ಅಗತ್ಯ ಹೆಚ್ಚಾಗಿದೆ ಎಂದರು.

ವಕೀಲ ನಾಗರಾಜ್ ಗೋಳಿಹೊಳೆ ​ಅಧ್ಯಕ್ಷತೆ ವಹಿಸಿದ್ದರು. ಹಿಂಜಾವೇ ಜಿಲ್ಲಾ ಸಂಯೋಜಕ ರಾಜೇಶ್ ಉಚ್ಚೀಲ, ಸಂಘಟನೆ ಹಿರಿಯರಾದ ಅರವಿಂದ್ ಕೋಟೇಶ್ವರ್, ಶಂಕರ್ ಕೋಟ, ವಾಸು ಗಂಗೊಳ್ಳಿ, ಮಹೇಶ್ ಬೈಲೂರು, ಉಮೇಶ್ ಸೂಡ, ರತ್ನಕರ ಗಂಗೋಳ್ಳಿ, ರಾಜೇಶ್ ಆಚಾರ್ಯ ಬೈಂದೂರು,

​ಬೈಂದೂರು ತಾಲೂಕು ಸಂಯೋಜಕ ಹರೀಶ್ ಸಳ್ಕೋಡು ಉಪಸ್ಥಿತರಿದ್ದರು. ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಹೇಶ್ ವಸ್ತೆ ಪ್ರತಿಜ್ಞಾ ವಿಧಿ ಬೋಧಿಸಿದರು, ಜಾಹ್ನವಿ ವಂದೇ ಮಾತರಂ ಗೀತೆ ಹಾಡಿದರು, ವಿಜೇತ್ ಬಂಕೇಶ್ವರ್ ನಿರೂಪಿಸಿದರು.

ಪಂಜಿನ ಮೆರವಣಿಗೆಯಲ್ಲಿ ನೂರಾರು ಕಾರ್ಯಕರ್ತರು ಹಾಗೂ ದೇಶ ಪ್ರೇಮಿಗಳು ಉತ್ಸಾಹದಿಂದ ಪಾಲ್ಗೊಂಡು ಭಾರತ್ ಮಾತಾ ಕೀ ಜೈ ಘೋಷಣೆಗಳೊಂದಿಗೆ ಮೆರವಣಿಗೆಯನ್ನು ಯಶಸ್ವಿಗೊಳಿಸಿದರು.