ಬಮೂಲ್ ಚುನಾವಣೆಗೆ ಬೈರೇಗೌಡ ನಾಮಪತ್ರ

| Published : May 20 2025, 01:06 AM IST

ಸಾರಾಂಶ

ದಾಬಸ್‍ಪೇಟೆ: ಬೆಂಗಳೂರು ಹಾಲು ಒಕ್ಕೂಟದ ನೆಲಮಂಗಲ ಕ್ಷೇತ್ರದ ನಿರ್ದೇಶಕರ ಚುನಾವಣೆಯ ಮೈತ್ರಿಕೂಟ ಅಭ್ಯರ್ಥಿಯಾಗಿ ಭವಾನಿಶಂಕರ್ ಬೈರೇಗೌಡ ನಾಮಪತ್ರ ಸಲ್ಲಿಸಿದರು.

ದಾಬಸ್‍ಪೇಟೆ: ಬೆಂಗಳೂರು ಹಾಲು ಒಕ್ಕೂಟದ ನೆಲಮಂಗಲ ಕ್ಷೇತ್ರದ ನಿರ್ದೇಶಕರ ಚುನಾವಣೆಯ ಮೈತ್ರಿಕೂಟ ಅಭ್ಯರ್ಥಿಯಾಗಿ ಭವಾನಿಶಂಕರ್ ಬೈರೇಗೌಡ ನಾಮಪತ್ರ ಸಲ್ಲಿಸಿದರು. ಅಭ್ಯರ್ಥಿ ಭವಾನಿಶಂಕರ್ ಬೈರೇಗೌಡ ಪ್ರತಿಕ್ರಿಯಿಸಿ ತಂದೆಯ ಕಾಲದಿಂದಲೂ ಕೃಷಿ ನಮ್ಮನ್ನು ಕೈಹಿಡಿದು ಬೆಳೆಸಿದೆ. ಇಂದಿಗೂ ಹಸುವಿನ ಒಡನಾಟ ಹಾಗೂ ಹಾಲು ಮಾರಾಟದಿಂದಲೇ ಬೆಳೆದಿದ್ದೇವೆ. ಆದ್ದರಿಂದ ಬಮೂಲ್ ಮೂಲಕ ರೈತರಿಗೆ ಸೇವೆ ಸಲ್ಲಿಸುವ ಅವಕಾಶ ಎಲ್ಲಾ ಡೈರಿಗಳ ಅಧ್ಯಕ್ಷರು ಅವಕಾಶ ಮಾಡಿಕೊಡುತ್ತಾರೆಂಬ ನಂಬಿಕೆಯಿದೆ. ಎರಡೂ ಪಕ್ಷದ ಮುಖಂಡರ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದ್ದು ಸೇವೆಗಾಗಿ ಮಾತ್ರ ನಾನು ಬಮೂಲ್ ಚುನಾವಣೆಗೆ ಬಂದಿದ್ದೇನೆ ಎಂದರು. ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಪ್ರತಿಕ್ರಿಯಿಸಿ ಬೈರೇಗೌಡರು ಹುಟ್ಟು ರೈತರು, ದೇವರು ಎಲ್ಲವನ್ನೂ ನೀಡಿದ್ದರೂ ಇಂದಿಗೂ ವ್ಯವಸಾಯ, ಹೈನುಗಾರಿಕೆ ಬಿಟ್ಟಿಲ್ಲ, ರೈತರೇ ಬಮೂಲ್ ಗೆ ನಿರ್ದೇಶಕರಾಗಬೇಕು ಎಂದರು. ಬಮೂಲ್ ನಿರ್ದೇಶಕರ ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ, ಮಾಜಿ ಶಾಸಕರಾದ ಎಂ.ವಿ ನಾಗರಾಜು, ಡಾ.ಕೆ.ಶ್ರೀನಿವಾಸಮೂರ್ತಿ, ಕುವೆಂಪು ಪತ್ತಿನ ಬ್ಯಾಂಕ್ ಅಧ್ಯಕ್ಷ ನಟರಾಜು, ಹಂಚೀಪುರ ಡೈರಿ ಮಾಜಿ ಅಧ್ಯಕ್ಷ ವಿಜಯಕುಮಾರ್, ಎಂಪಿಎಂಸಿ ಮಾಜಿ ನಿರ್ದೇಶಕ ಗಂಗಣ್ಣ, ಮುಖಂಡ ಕರವೇ ಮಂಜುನಾಥ್ ಮತ್ತಿತರರಿದ್ದರು.ಪೋಟೋ 12 :

ನೆಲಮಂಗಲ ತಾಲೂಕಿನ ಬಮೂಲ್ ನಿರ್ದೇಶಕ ಸ್ಥಾನದ ಮೈತ್ರಿ ಅಭ್ಯರ್ಥಿ ಭವಾನಿಶಂಕರ್ ಬೈರೇಗೌಡ ನಾಮಪತ್ರ ಸಲ್ಲಿಸಿದರು. ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ, ಮಾಜಿ ಶಾಸಕರಾದ ನಾಗರಾಜು, ಡಾ.ಶ್ರೀನಿವಾಸಮೂರ್ತಿ, ಕುವೆಂಪು ಪತ್ತಿನ ಬ್ಯಾಂಕ್ ಅಧ್ಯಕ್ಷ ನಟರಾಜು ಇತರರಿದ್ದರು.