ಬನ್ನಿಮಂಟಪದ ಸರ್ಕಾರಿ ಅಂಧ ಶಾಲೆಗೆ ಓವರ್‌ ಹೆಡ್ ಟ್ಯಾಂಕ್, ಬ್ರೇಲ್ ಶೀಟುಗಳ ದಾನ

| Published : Aug 27 2025, 01:00 AM IST

ಬನ್ನಿಮಂಟಪದ ಸರ್ಕಾರಿ ಅಂಧ ಶಾಲೆಗೆ ಓವರ್‌ ಹೆಡ್ ಟ್ಯಾಂಕ್, ಬ್ರೇಲ್ ಶೀಟುಗಳ ದಾನ
Share this Article
  • FB
  • TW
  • Linkdin
  • Email

ಸಾರಾಂಶ

ಒಂದೇ ವೇದಿಕೆಯ ಹೆಚ್ಚು ಮುಖಂಡರು ಸೇರಿದ್ದು, ಪ್ರಭಾವಶಾಲಿ ಪ್ರಾಜೆಕ್ಟಿಗೆ ಮಹತ್ವ ನೀಡಿತು

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ಎಲೈಟ್ ರೌಂಡ್ ಟೇಬಲ್ 256 ಮತ್ತು ಮೈಸೂರು ಎಲೈಟ್ ಲೇಡಿಸ್ ಸರ್ಕಲ್ ವತಿಯಿಂದ ಬನ್ನಿಮಂಟಪದಲ್ಲಿರುವ ಸರ್ಕಾರಿ ಅಂಧ ಶಾಲೆ ಮತ್ತು ವಿಭಿನ್ನ ಶಕ್ತಿಯ ಮಕ್ಕಳ ಶಾಲೆಗೆ ಓವರ್‌ ಹೆಡ್ ಟ್ಯಾಂಕ್ ಮತ್ತು ಬ್ರೇಲ್ ಶೀಟುಗಳನ್ನು ದಾನವಾಗಿ ನೀಡಿದರು.

ಲೇಡಿಸ್ ಸರ್ಕಲ್ ಇಂಡಿಯಾನ ರಾಷ್ಟ್ರೀಯ ಅಧ್ಯಕ್ಷೆ ಸಿ.ಆರ್. ಸೀಷಮ್ ಶಬರ್‌ ವಾಲ್ ಅವರ ನಗರದ ಏರಿಯಾ 13 ಎಜಿಎಂ ಗೆ ಆಗಮಿಸಿದ ಸಂದರ್ಭದಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಏರಿಯಾ 13 ಅಧ್ಯಕ್ಷೆ ನಾಗಶ್ರೀ ನಿಕಿಲೇಶ್, ಎಂಎಲ್‌ಸಿ 09 ಅಧ್ಯಕ್ಷೆ ಶ್ರೀನಿಜಾ, ಎಂಎಎಲ್‌ಸಿ 108 ಅಧ್ಯಕ್ಷೆ ನಿಶಾ ದರ್ಶನ್, ಎಂಇಎಲ್‌ಸಿ 141 ಅಧ್ಯಕ್ಷೆ ಪ್ರತಿಭಾ ನಾಯಕ್ ಮತ್ತು ಅವರ ಮಂಡಳಿ ಸದಸ್ಯರು ಹಾಗೂ ಎಂಇಆರ್‌ಟಿ 256 ಅಧ್ಯಕ್ಷ ಟಿ.ಆರ್. ಶಿವಸ್ವರೂಪ್ ಮತ್ತು ಟೇಬಲರ್‌ ಗಳು ಇದ್ದರು.ಒಂದೇ ವೇದಿಕೆಯ ಹೆಚ್ಚು ಮುಖಂಡರು ಸೇರಿದ್ದು, ಪ್ರಭಾವಶಾಲಿ ಪ್ರಾಜೆಕ್ಟಿಗೆ ಮಹತ್ವ ನೀಡಿತು. ಅಂಧ ಮಕ್ಕಳು ನೀಡಿದ ಕಲಾತ್ಮಕ ಪ್ರದರ್ಶನವು ಎಲ್ಲರ ಹೃದಯ ತಟ್ಟಿದ ಕ್ಷಣವಾಯಿತು.

ಶಾಲಾ ಮುಖ್ಯೋಪಾಧ್ಯಾಯರು ಕಳೆದ ಹಲವಾರು ವರ್ಷಗಳಿಂದ ನೀಡುತ್ತಿರುವ ಆಹಾರ ಸಹಾಯ, ಹೆರಿಂಗ್ ಎಯ್ಡ್ ಮತ್ತು ಮೂಲಸೌಕರ್ಯಗಳಿಗಾಗಿ ಧನ್ಯವಾದ ವ್ಯಕ್ತಪಡಿಸಿದರು.