ಸಾರಾಂಶ
ಕನ್ನಡಪ್ರಭ ವಾರ್ತೆ ಟಿ. ನರಸೀಪುರಪುರಸಭೆಗೆ ಸಲ್ಲಿಕೆಯಾಗಬೇಕಾದ ನಾಗರೀಕರ ಸ್ವಯಂ ಘೋಷಿತ ಆಸ್ತಿ ತೆರಿಗೆ ಹಣವನ್ನು ದುರುಪಯೋಗ ಮಾಡಿಕೊಳ್ಳುವ ಜೊತೆಗೆ ಬ್ಯಾಂಕಿನ ಸೀಲನ್ನು ನಕಲಿ ಮಾಡಿ ವಂಚಿಸಿರುವ ಪ್ರಕರಣದಡಿ ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಟಿ.ಎಂ. ನಂಜುಂಡಸ್ವಾಮಿಯ ಸದಸ್ಯತ್ವ ಕೂಡಲೇ ರದ್ದುಗೊಳಿಸುವಂತೆ ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್ ಒತ್ತಾಯಿಸಿದರು.ರಾಜ್ಯ ಸರ್ಕಾರವು ಅಧಿಕಾರದ ಮದದಿಂದ ಇಂತಹ ಘೋಮುಖ ವ್ಯಾಘ್ರಗಳಿಗೆ ಪುರಸಭೆಯಲ್ಲಿ ಅಧಿಕಾರ ನೀಡಿ ದಂಧೆ ಮಾಡುವಂತೆ ಪ್ರೆರೇಪಣೆ ನೀಡಿದೆ. ಕ್ಷೇತ್ರದ ಶಾಸಕರು ಹಾಗೂ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಬೆಂಬಲ ಹಾಗೂ ಆಶೀರ್ವಾದ ಈತನ ಮೇಲೆ ಇರುವುದು ಸ್ಪಷ್ಟವಾಗಿದ್ದು, ಪುರಸಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹದೇವಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಘಟಕದ ವತಿಯಿಂದ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಆಗ್ರಹಿಸಿದರು. ಪುರಸಭೆ ಸೂಪರ್ ಸೀಡ್ ಮಾಡಿಜಿಲ್ಲಾ ಮಾಧ್ಯಮ ವಕ್ತಾರ ದಯಾನಂದ ಪಟೇಲ್ ಮಾತನಾಡಿ, ಪುರಸಭೆಯಲ್ಲಿ ಮಾಜಿ ಅಧ್ಯಕ್ಷರು ನಡೆಸಿರುವ ಹಗರಣಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಆಶೀರ್ವಾದ ಇರುವಂತೆ ಕಾಣುತ್ತಿದೆ. ಸ್ವಯಂ ಘೋಷಿತ ಆಸ್ತಿ ತೆರಿಗೆ ಕಟ್ಟಲು ಜನರಿಂದ ಹಣ ಪಡೆದಿರುವ ನಂಜುಂಡಸ್ವಾಮಿ ಬ್ಯಾಂಕಿನ ಸೀಲನ್ನೇ ನಕಲಿ ಮಾಡಿ ಖಾತೆದಾರರಿಗೆ ರಶೀದಿ ನೀಡುತ್ತಾನೆಂದರೆ ನಿಮಗೆ ನಾಚಿಕೆಯಾಗುವುದಿಲ್ಲವೇ, , ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಸ್ತುವಾರಿ ಸಚಿವರ ಕೃಪಾ ಕಟಾಕ್ಷದಿಂದಲೇ ಈ ಹಗರಣ ನಡೆದಿದೆ. ಉಸ್ತುವಾರಿ ಸಚಿವರು ಬಹಳ ಅಧ್ಯಯನ ಮಾಡಿದವರಂತೆ ಮಾತನಾಡುತ್ತಾರೆ, ಪುರಸಭೆಯಲ್ಲಿ ಮಾಡಿದ ಹಗರಣದ ಆರೋಪಿ ನಿಮ್ಮ ಬೆಂಬಲಿಗರಲ್ಲವೇ, ನಿಮ್ಮ ಬೆಂಬಲಇಲ್ಲದೇ ಇಂತಹ ಘಟನೆ ನಡೆದಿದೆಯೇ, ಈತನನ್ನು ಅಧ್ಯಕ್ಷರನ್ನು ಮಾಡಿದ್ದು ನೀವೇ ಅಲ್ಲವೇ, ಈತ ಹಿಂದೊಮ್ಮೆ ಲೋಕಾಯುಕ್ತ ಬಲೆಗೆ ಸಿಲುಕಿದ್ದು ನಿಮಗೆ ಗೊತ್ತಿಲ್ಲವೇ, ಗೊತ್ತಿದ್ದು ಲೂಟಿ ಮಾಡಲಿ ಎಂದು ಅಧ್ಯಕ್ಷರನ್ನಾಗಿ ಮಾಡಿದ್ದೀರೇನು ಎಂದು ಕಿಡಿಕಾರಿದರು.ಈಗ ಪುರಸಭೆಯಲ್ಲಿ ಸಚಿವರ ಬೆಂಬಲಿಗರೇ ಅಧ್ಯಕ್ಷರಾಗಿದ್ದಾರೆ, ಕಾಂಗ್ರೆಸ್ ದೊಡ್ಡ ಪಡೆಯೇ ಪುರಸಭೆಯಲ್ಲಿ ಅಧಿಕಾರ ಮಾಡುತ್ತಿದೆ. ಮುಖ್ಯಾಧಿಕಾರಿಯೇ ಖುದ್ದು ಆಸ್ತಿ ತೆರಿಗೆ ವಂಚನೆ ಮಾಡಿದ್ದಾರೆಂದು ಮಾಜಿ ಅಧ್ಯಕ್ಷರ ಮೇಲೆ ದೂರು ನೀಡುತ್ತಾರೆಂದರೆ, ಈ ಹಗರಣದಲ್ಲಿ ಹಲವಾರು ಮಂದಿ ಇರುವಂತೆ ಕಾಣುತ್ತಿದೆ. ಪುರಸಭೆಯಲ್ಲಿ ನಿಮ್ಮ ಕುಮ್ಮಕ್ಕಿನಿಂದಲೇ ಭ್ರಷ್ಟಾಚಾರ ನಡೆದಿದೆ. ಹಾಗಾಗಿ ಕೂಡಲೇ ವಿಶೇಷವಾದ ತನಿಖಾ ತಂಡ ರಚಿಸಿ ಪ್ರಕರಣ ತನಿಖೆ ನಡೆಸಬೇಕು. ನಿಮಗೆ ಸಿಬಿಐ, ಇಡಿ ಮೇಲೆ ನಂಬಿಕೆ ಇಲ್ಲ. ನಿಮ್ಮದೇ ಸರ್ಕಾರದ ಸಿಐಡಿ ತಂಡದಿಂದ ತನಿಖೆಗೆ ಆದೇಶ ನೀಡಿ, ಕಳೆದ 8 ವರ್ಷಗಳ ಹಳೆಯ ಕಡತಗಳ ಪರಿಶೀಲನೆ ನಡೆಸಿ ಯಾವುದೇ ಪಕ್ಷದ ತಪ್ಪಿತಸ್ಥರಿದ್ದರೂ ಮುಲಾಜಿಲ್ಲದೇ ಕ್ರಮ ಜರುಗಿಸಬೇಕು ಹಾಗೂ ಪುರಸಭೆಯನ್ನು ಸೂಪರ್ ಸೀಡ್ ಮಾಡಿ ಆಡಳಿತಾಧಿಕಾರಿ ನೇಮಿಸುವಂತೆ ಅವರು ಒತ್ತಾಯಿಸಿದರು.ಬಿಜೆಪಿ ಮುಖಂಡ ಡಾ. ರೇವಣ್ಣ ಮಾತನಾಡಿ, ಪ್ರಾಮಾಣಿಕವಾಗಿ ಆಡಳಿತ ನಡೆಸುತ್ತೇವೆ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುರಸಭೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಗಮನಹರಿಸಬೇಕು, ಉಸ್ತುವಾರಿ ಸಚಿವರು ಸ್ವಕ್ಷೇತ್ರದಲ್ಲಿ ನಡೆದಿರುವ ವ್ಯಾಪಕ ದಂಧೆಯ ಬಗ್ಗೆ ತನಿಖೆ ಮಾಡಿಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದರು.ಗೂಂಡಾ ಕಾಯ್ದೆಯಡಿ ದೂರು ದಾಖಲು ಮಾಡಿಪುರಸಭೆ ಸದಸ್ಯ ಎಸ್.ಕೆ. ಕಿರಣ್ ಮಾತನಾಡಿ, ಕಳೆದ 8 ವರ್ಷಗಳಿಂದ ಈತ ಪುರಸಭೆಯಲ್ಲಿ ಮಾಡಿಸಿರುವ ಸಾವಿರಾರು ಖಾತೆಗಳ ಬಗ್ಗೆ ತನಿಖೆ ಮಾಡಬೇಕು ಹಾಗೂ ಈತನಮೇಲೆ ಲೋಕಾಯುಕ್ತ ಸೇರಿದಂತೆ 8ಕ್ಕೂ ಹೆಚ್ಚು ಕೇಸ್ ಗಳಿರುವುದರಿಂದ ಗೂಂಡಾ ಕಾಯ್ದೆಯಡಿ ದೂರು ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.ಬಿಜೆಪಿ ಕ್ಷೇತ್ರಾಧ್ಯಕ್ಷ ಶಿವಕುಮಾರ್, ಮುಖಂಡ ಎನ್. ಲೋಕೇಶ್ ಮಾತನಾಡಿದರು. ಕ್ಷೇತ್ರ ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಕೆ.ಸಿ. ಲೋಕೇಶ್ ನಾಯಕ್, ನಂಜುಂಡಸ್ವಾಮಿ, ಸಿದ್ದರಾಜು, ರಾಜಶೇಖರ್ ಇದ್ದರು.