ಪಾಂಡವಪುರ:
ತಾಲೂಕಿನ ತಿರುಮಲಾಪುರ (ತಿರ್ಲಾಪುರ) ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಟ್ಟಡ ನಿರ್ಮಾಣ ಕಾಮಗಾರಿಗೆ ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಭೂಮಿಪೂಜೆ ನೆರವೇರಿಸಿದರು.ಬಳಿಕ ಮಾತನಾಡಿ, ಸಂಘದ ಸ್ವಂತ ಕಟ್ಟಡ ನಿರ್ಮಾಣಕ್ಕೆ ಒಕ್ಕೂಟದಿಂದ 5.50 ಲಕ್ಷ ಅನುದಾನ ನೀಡಲಾಗುತ್ತಿದೆ. ಜೊತೆಗೆ ಧರ್ಮಸ್ಥಳ ಸಂಘ ಹಾಗೂ ಸ್ಥಳೀಯರ ಸಹಕಾರ ಪಡೆಯಲಾಗಿದೆ. ನಾನು ನಿರ್ದೇಶಕನಾದ ಬಳಿಕ ಡೇರಿ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡುತ್ತಿರುವುದು ಇದೇ ಮೊದಲ ಕಟ್ಟಡ. ಹೀಗಾಗಿ ಹೆಚ್ಚಿನ ಆದ್ಯತೆ ನೀಡಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಡೇರಿ ದೇವಸ್ಥಾನ ಇದ್ದಂತೆ. ಇಲ್ಲಿ ಕಲಬೆರಕೆ, ರಾಜಕೀಯ ಮಾಡದೆ ಎಲ್ಲರೂ ಜತೆಗೂಡಿ ಅಭಿವೃದ್ಧಿಪಡಿಸಬೇಕು. ನಮ್ಮ ಗ್ರಾಮ, ನಮ್ಮ ಡೇರಿ ಎಂಬ ಭಾವನೆ ಮೂಡಿಸಿಕೊಳ್ಳಬೇಕು. ಯುವಕರು ಹೆಚ್ಚು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು ಎಂದು ಮನವಿ ಮಾಡಿದರು.ಈ ವೇಳೆ ಡೇರಿ ಅಧ್ಯಕ್ಷೆ ರಾಧಮ್ಮ, ಉಪಾಧ್ಯಕ್ಷೆ ಭಾಗ್ಯಮ್ಮ, ನಿರ್ದೇಶಕರಾದ ಜಯಲಕ್ಷ್ಮಮ್ಮ, ಶಿವರತ್ನಮ್ಮ, ಶ್ವೇತಾ, ಸುಶೀಲಮ್ಮ, ಲೀಲಾವತಿ, ಸಾವಿತ್ರಮ್ಮ, ಮಂಗಳಮ್ಮ, ಕಾರ್ಯದರ್ಶಿ ಶೋಭಾ ಅಶೋಕ್, ವಿಸ್ತರ್ಣಾಧಿಕಾರಿ ಉಷಾ, ಡಾ.ಸಂತೋಷ್, ಮುಖಂಡ ದೇಶವಳ್ಳಿ ಪ್ರಭಾಕರ್, ಯಜಮಾನರಾದ ಕರಿಗಿರೀಗೌಡ, ತಿಮ್ಮೇಗೌಡ, ಕೃಷ್ಣೇಗೌಡ, ನಾಗಣ್ಣ, ಲೋಕೇಶ್, ಟಿ.ಎಂ.ಚಲುವೇಗೌಡ, ರಾಮೇಗೌಡ, ವಿಜಯೇಂದ್ರ, ಟಿ.ಎಂ.ತಿಮ್ಮೇಗೌಡ, ವನರಾಜು, ಬೆಟ್ಟಯ್ಯ ಸೇರಿದಂತೆ ಗ್ರಾಮದ ಮುಖಂಡರು, ಯುವಕರು ಹಾಜರಿದ್ದರು.ರೈಲ್ವೆ ಸೌಕರ್ಯ ನೀಡುವಂತೆ ಸಚ್ಚಿದಾನಂದ ಪತ್ರಕ್ಕೆ ವಿ.ಸೋಮಣ್ಣ ಸ್ಪಂದನೆ
ಮಂಡ್ಯ:ಜಿಲ್ಲೆಯಲ್ಲಿ ಹಾದು ಹೋಗಿರುವ ರೈಲು ಸಂಚಾರ ಮಾರ್ಗಗಳಲ್ಲಿ ಸೌಕರ್ಯ ಕಲ್ಪಿಸಿಕೊಡುವಂತೆ ಬಿಜೆಪಿ ಯುವ ನಾಯಕ ಇಂಡುವಾಳು ಸಚ್ಚಿದಾನಂದ ಅವರು ಬರೆದಿರುವ ಪತ್ರಕ್ಕೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸ್ಪಂದಿಸಿದ್ದಾರೆ.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿದಂತೆ ಪ್ರತ್ಯೇಕವಾರು ಪತ್ರ ಬರೆದು ಕೊತ್ತತ್ತಿ ಹೋಬಳಿ ನೊದೆಕೊಪ್ಪಲು ಗ್ರಾಮದ ಸಮೀಪವಿರುವ ಅಂಡರ್‌ಪಾಸ್ ಕಿರಿದಾಗಿದೆ. ಇಲ್ಲಿ ಲಾರಿ ಸೇರಿದಂತೆ ಎತ್ತರದ ವಾಹನಗಳ ಓಡಾಟ ಕಷ್ಟಕರವಾಗಿದೆ. ಮಾತ್ರವಲ್ಲದೆ ಮಳೆ ಬಂದರೆ ನೀರು ನಿಲ್ಲುತ್ತದೆ. ಜತೆಗೆ ವಿದ್ಯುತ್ ದೀಪವೂ ಇಲ್ಲ. ಪರಿಣಾಮ ಮಕ್ಕಳು, ಮಹಿಳೆಯರ ಓಡಾಟಕ್ಕೂ ಕಷ್ಟವಾಗಿದೆ. ಈ ಸಮಸ್ಯೆ ಬಗಹರಿಸಲು ಮೇಲ್ಸೇತುವೆ ನಿರ್ಮಾಣ ಮಾಡಿಕೊಡುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.ಶ್ರೀರಂಗಪಟ್ಟಣದ ರೈಲ್ವೆ ನಿಲ್ದಾಣವನ್ನು ತುರ್ತಾಗಿ ಮೇಲ್ದರ್ಜೆಗೇರಿಸಬೇಕಿದೆ. ಜೊತೆಗೆ ಪ್ಲಾಟ್ ಫಾರ್ಮ್ ವಿಸ್ತರಣೆ, ಕೆಲ ರೈಲುಗಳ ನಿಲುಗಡೆಗೆ ಕ್ರಮ ವಹಿಸಬೇಕು. ಇಂಡುವಾಳು ಗ್ರಾಮದಲ್ಲಿ ಕೆಳ ಸೇತುವೆ ಮಾಡಿಕೊಡಬೇಕು. ಯಲಿಯೂರು ಗ್ರಾಮದಲ್ಲಿ ಶಾಲಾ ಮಕ್ಕಳಿಗೆ ಆಟವಾಡಲು ಅನುಕೂಲವಾಗುವಂತೆ ರೈಲ್ವೆ ಜಾಗ ಬಿಟ್ಟುಕೊಡಬೇಕು. ಜೊತೆಗೆ ರೈಲ್ವೆ ಗೂಡ್ಸ್ ಸ್ಟೇಷನ್ ಯಲಿಯೂರು ಗ್ರಾಮದಲ್ಲಿಯೇ ಸ್ದಾಪಿಸಬೇಕೆಂದು ಸಚ್ಚಿದಾನಂದ ಮನವಿ ಮಾಡದ್ದು, ಇದಕ್ಕೆ ಉತ್ತರ ನೀಡಿರುವ ಸಚಿವ ವಿ.ಸೋಮಣ್ಣ, ಸಮಸ್ಯೆಗೆ ಸಂಬಂಧಿಸಿದಂತೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.