ಸಿಎ ಇಂಟರ್‌ಮೀಡಿಯೇಟ್‌: ಆಳ್ವಾಸ್‌ನ ಸುಶಾಂತ್‌ಗೆ 36ನೇ ರ‍್ಯಾಂಕ್

| Published : Nov 06 2024, 12:48 AM IST

ಸಿಎ ಇಂಟರ್‌ಮೀಡಿಯೇಟ್‌: ಆಳ್ವಾಸ್‌ನ ಸುಶಾಂತ್‌ಗೆ 36ನೇ ರ‍್ಯಾಂಕ್
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಸಿ.ಎ. ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಬಿ.ಕಾಂ. ವಿದ್ಯಾರ್ಥಿ ಸುಶಾಂತ್ ೩೮೦ ಅಂಕಗಳೊಂದಿಗೆ ರಾಷ್ಟ್ರೀಯ ಮಟ್ಟದಲ್ಲಿ ೩೬ನೇ ರ‍್ಯಾಂಕ್ ಗಳಿಸಿರುತ್ತಾರೆ. ಇವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ದತ್ತು ಶಿಕ್ಷಣ ಯೋಜನೆಯಡಿ ಪದವಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಸಿ.ಎ. ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಬಿ.ಕಾಂ. ವಿದ್ಯಾರ್ಥಿ ಸುಶಾಂತ್ ೩೮೦ ಅಂಕಗಳೊಂದಿಗೆ ರಾಷ್ಟ್ರೀಯ ಮಟ್ಟದಲ್ಲಿ ೩೬ನೇ ರ‍್ಯಾಂಕ್ ಗಳಿಸಿರುತ್ತಾರೆ. ಇವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ದತ್ತು ಶಿಕ್ಷಣ ಯೋಜನೆಯಡಿ ಪದವಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ರಿತ್ವಿಕ್ ಜೆ ಶೆಟ್ಟಿ (೩೨೭), ಸ್ಮಿತಾ ಎಸ್ ಹೆಗ್ಡೆ (೩೦೧) ಮತ್ತು ಜ್ಯೋತಿ(೩೦೦) ಇವರು ಗ್ರೂಪ್ -೦೧ ಮತ್ತು ಗ್ರೂಪ್ -೦೨ ವಿಭಾಗದಲ್ಲಿ ಮೊದಲ ಪ್ರಯತ್ನದಲ್ಲಿ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ.

ಇಂಟರ್‌ಮೀಡಿಯಟ್ ಗ್ರೂಪ್ -೦೧ ವಿಭಾಗದಲ್ಲಿ ಕಿರಣ್ (೧೬೭), ಶ್ರೀರಕ್ಷಾ (೧೬೫) ಮತ್ತು ಪ್ರೀತಮ್ ವಿ ನಾಯ್ಕ್ (೧೫೦) ಇವರು ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ.

ಇಂಟರ್ ಮೀಡಿಯಟ್ ಗ್ರೂಪ್ -೦೨ ವಿಭಾಗದಲ್ಲಿ ಮಯೂರಿ (೧೭೩), ಕಲ್ಪನಾ ಗಜಾನನಾ ಹೆಗಡೆ (೧೭೦), ಸಿ ಶ್ರೇಯಾಂಕ್ ನಾಯಕ್ (೧೬೪), ಪಲ್ಲವಿ ಆರ್ (೧೬೦), ವಿಕ್ರಾಂದ್ ಪುಂಡಲೀಕ್ (೧೫೯), ಪಾಯಲ್ ಜೆ ಬಂಗೇರಾ (೧೫೫), ಅನನ್ಯ ಕೆ (೧೫೧), ಸ್ಪರ್ಶ ಹೆಗ್ಡೆ (೧೫೦) ಮತ್ತು ಸಿದ್ದಾರ್ಥ್ ಪಿ (೧೧೦) ಇವರು ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ.

ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮತ್ತು ಪ್ರಾಂಶುಪಾಲ ಡಾ.ಕುರಿಯನ್ ಹಾಗೂ ಸಿ.ಎ. ಸಂಯೋಜಕರು ಅಭಿನಂದಿಸಿದ್ದಾರೆ.