ಬಸವರಾಜಮೂರ್ತಿ ಅವರ ಮನೆಯಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಪರೀಕ್ಷಿಸಿ ಬೆಳಗಿನ ಜಾವ ಚಿರತೆ ಬಂದಿರುವುದು ಖಚಿತ ಪಡಿಸಿದ್ದಾರೆ. ಹಸು ಕರುವಿನ ಶವ ಪರೀಕ್ಷೆ ನಡೆಸಲಾಗಿದೆ. ಪಕ್ಕದ ಗ್ರಾಮದ ಲಿಂಗನಪುರ ಗ್ರಾಮದ ವಾಸಿ ಚಂದ್ರು ಅವರಿಗೆ ಸೇರಿದ ಗರ್ಭಿಣಿ ಮೇಕೆ ತಿಂದಿದೆ.
ಹಲಗೂರು:
ಚಿರತೆ ದಾಳಿಯಿಂದ ಹಸುವಿನ ಕರು, ಸಾಕು ನಾಯಿ ಬಲಿಯಾಗಿರುವ ಘಟನೆ ಸಮೀಪದ ಗ್ರಾಮದೇವತೆಪುರ ಗ್ರಾಮದಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ.ಗ್ರಾಮದ ಬಸವರಾಜ ಮೂರ್ತಿ ವ್ಯವಸಾಯ ಮಾಡಿಕೊಂಡು ಹಸು ಸಾಕಾಣಿಕೆ ಮೂಲಕ ಜೀವನ ನಡೆಸುತ್ತಿದ್ದರು. ಎಂದಿನಂತೆ ಮನೆ ಮುಂಭಾಗದ ಅಂಗಳದಲ್ಲಿ ಹಸುಕರುಗಳನ್ನು ಕಟ್ಟಿದ್ದರು. ಶನಿವಾರ ಬೆಳಗಿನ ಜಾವ 4:40ರಲ್ಲಿ ಚಿರತೆ ದಾಳಿ ಮಾಡಿ ಹಸುವಿನ ಕರು ಮತ್ತು ಸಾಕು ನಾಯಿಯನ್ನು ತಿಂದು ಹೋಗಿದೆ.
ಅರಣ್ಯ ಇಲಾಖೆಯವರಿಗೆ ವಿಷಯ ತಿಳಿಸಿದ ಮೇರೆಗೆ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿ ಪುನೀತ್ ಪರಿಶೀಲಿಸಿ ನಮಗೆ ಮನವಿ ಪತ್ರ ನೀಡಿ ನಾವು ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಕೊಡಿಸುವುದಾಗಿ ಭರವಸೆ ನೀಡಿದರು.ಬಸವರಾಜಮೂರ್ತಿ ಅವರ ಮನೆಯಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಪರೀಕ್ಷಿಸಿ ಬೆಳಗಿನ ಜಾವ ಚಿರತೆ ಬಂದಿರುವುದು ಖಚಿತ ಪಡಿಸಿದ್ದಾರೆ. ಹಸು ಕರುವಿನ ಶವ ಪರೀಕ್ಷೆ ನಡೆಸಲಾಗಿದೆ. ಪಕ್ಕದ ಗ್ರಾಮದ ಲಿಂಗನಪುರ ಗ್ರಾಮದ ವಾಸಿ ಚಂದ್ರು ಅವರಿಗೆ ಸೇರಿದ ಗರ್ಭಿಣಿ ಮೇಕೆ ತಿಂದಿದೆ. ಇದರ ಬಗ್ಗೆ ನಮ್ಮ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿರುವುದಾಗಿ ತಿಳಿಸಿದರು.
ಹಲಗೂರು ವ್ಯಾಪ್ತಿಯ ಅರಣ್ಯಾಧಿಕಾರಿ ಆರ್ ಎಫ್ ಪ್ರಮೋದ್ ಕುಮಾರ್ ಮಾತನಾಡಿ, ಗ್ರಾಮದೇವತೆಪುರ, ಲಿಂಗನಪುರ ಮತ್ತು ಸುತ್ತಮುತ್ತ ಸರಹದ್ದಿನಲ್ಲಿ ಚಿರತೆ ಸಂಚಾರವಿದ್ದು, ಗ್ರಾಮದೇವತೆ ಪುರದಲ್ಲಿ ಚಿರತೆ ಹಿಡಿಯಲು ಬೋನ್ ಡುವುದಾಗಿ ತಿಳಿಸಿದ್ದಾರೆ.ಬಸವರಾಜ ಮೂರ್ತಿ ಮಾತನಾಡಿ, ನಾವು ರಾತ್ರಿ ವೇಳೆ ನಮ್ಮ ಹೊಲಗದ್ದೆಗಳಿಗೆ ಹೋಗುವುದಕ್ಕೆ ಭಯಪಡುವ ಪರಿಸ್ಥಿತಿ ಇದೆ, ನಾಯಿ ಮತ್ತು ಹಸುವಿನ ಕರು ಬಲಿ ಪಡೆದಿದೆ. ಇದಕ್ಕೆ ಸರ್ಕಾರದಿಂದ ಸರಿಯಾದ ಸೂಕ್ತ ಪರಿಹಾರವನ್ನು ಕೊಡಿಸಿ ಕೊಡುವಂತೆ ಮನವಿ ಮಾಡಿದ್ದಾರೆ.