ಯುರೋಪಿಯನ್ ಒಕ್ಕೂಟದ ‘ಅರಣ್ಯ ನಾಶ ತಡೆ’-‘ಇಯುಡಿಆರ್’ ಅನುಸಾರ ಇಂಡಿಯಾ ಕಾಫಿ ಆ್ಯಪ್ ಮೂಲಕ ನೋಂದಣಿ ಮಾಡಲು ಕಾಫಿ ಮಂಡಳಿ ಮುಖ್ಯಸ್ಥರು ಕರೆ ನೀಡಿದ್ದಾರೆ.
ಕುಶಾಲನಗರ: ಯುರೋಪಿಯನ್ ಒಕ್ಕೂಟದ ‘ಅರಣ್ಯ ನಾಶ ತಡೆ’-‘ಇಯುಡಿಆರ್’ ಅನುಸಾರ ಇಂಡಿಯಾ ಕಾಫಿ ಆ್ಯಪ್ ಮೂಲಕ ನೋಂದಣಿ ಮಾಡಲು ಕಾಫಿ ಮಂಡಳಿ ಮುಖ್ಯಸ್ಥರು ಕರೆ ನೀಡಿದ್ದಾರೆ.
ಕುಶಾಲನಗರ ಸಮೀಪದ ಕೂಡು ಮಂಗಳೂರುನಲ್ಲಿ ಭಾರತೀಯ ಕಾಫಿ ಮಂಡಳಿ ಆಯೋಜಿಸಿದ್ದ ಟ್ರೇಡರ್ಸ್ ಮತ್ತು ಕಾಫಿ ಬೆಳೆಗಾರರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್, ಯುರೋಪಿಯನ್ ಒಕ್ಕೂಟವು ಹಸಿರು ಕಾಫಿ, ರೋಸ್ಟ್ ಗ್ರೌಂಡ್ ಕಾಫಿ, ಗ್ರೌಂಡ್ ಕಾಫಿ ಮತ್ತು ತ್ವರಿತ ಕಾಫಿ ಸೇರಿದಂತೆ ಎಲ್ಲ ವಿಧದ ಕಾಫಿ ಉತ್ಪನ್ನಗಳ ಮೇಲೆ ವಿಶ್ವದ ಅತಿ ದೊಡ್ಡ ಆಮದುದಾರರು ಮತ್ತು ಮರು ರಫ್ತುದಾರರಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.29 ಕಾಫಿ ಬೆಳೆಯುವ ಯುರೋಪಿಯನ್ ರಾಷ್ಟ್ರಗಳು ಒಂದಾಗಿ ಜಾಗತಿಕ ತಾಪಮಾನವನ್ನು ಆಧಾರವಾಗಿಟ್ಟುಕೊಂಡು ಪರಿಸರ ಸಂರಕ್ಷಣೆ ಕಾಪಾಡುವ ಉದ್ದೇಶದಿಂದ ‘ಇಯುಡಿಆರ್’ ನಿಯಮವನ್ನು ಜಾರಿಗೆ ತಂದಿವೆ. ಇದರಲ್ಲಿ ರಿಸ್ಕ್, ಲೋ-ರಿಸ್ಕ್, ಹೈ- ರಿಸ್ಕ್ ಎಂಬ ಅಂಶವಿದ್ದು, ಭಾರತದ ಕಾಫಿ ಲೋ- ರಿಸ್ಕ್‌ನಲ್ಲಿದೆ. ಭಾರತದ ಕಾಫಿಯ ಗುಣಮಟ್ಟವನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚು ಪರಿಶೀಲನೆ ಮಾಡುವುದಿಲ್ಲ. ನಮ್ಮ ದೇಶದ ಕಾಫಿ ರಫ್ತು ಮಾಡುವ ಪ್ರಮಾಣದ ಶೇ. ಒಂದರಷ್ಟನ್ನು ಮಾತ್ರ ಚೆಕ್ ಮಾಡಲಾಗುತ್ತದೆ. ಕಾಫಿ ಮಂಡಳಿಯು ನಮ್ಮ ಕಾಫಿ ಬೆಳೆಗಾರರಿಗಾಗಿ ಹಾಗೂ ದೇಶ ಭದ್ರತೆಯ ಉದ್ದೇಶವನ್ನು ಮನಗಾಣುವ ಮೂಲಕ ‘ಇಂಡಿಯ ಕಾಫಿ ಆ್ಯಪ್’ ಸಿದ್ದಪಡಿಸಿದ್ದು, ಇದು ಇಸ್ರೋ ಜೊತೆಯಲ್ಲಿ ಒಪ್ಪಂದ ಮಾಡಿಕೊಂಡಿದೆ. ಈ ವ್ಯವಸ್ಥೆ ಮೂಲಕ ಕಾಫಿ ಬೆಳೆಗಾರರು ತಮ್ಮ ಮಾಹಿತಿಗಳನ್ನು ಅಭಿವೃದ್ಧಿಪಡಿಸಿಕೊಂಡರೆ ಅದನ್ನು ಕಾಫಿ ಮಂಡಳಿ ಮೂಲಕ ಅನುಮೋದನೆ ಮಾಡಲು ಸಾಧ್ಯ ಎಂದರು.
ದೇಶದ ಕಾಫಿ ರಫ್ತು ಪ್ರಮಾಣ ಶೇ. 45 ಇರುವುದರಿಂದ ಪ್ರತಿ ಕಾಫಿ ಬೆಳಗಾರರು ಈ ಆ್ಯಪ್ ಮೂಲಕ ತಮ್ಮ ಬೆಳೆ, ಗುಣಮಟ್ಟ ಗಮನಿಸಿಕೊಳ್ಳಬಹುದು ಎಂದು ಬೆಳೆಗಾರರಿಗೆ ಸಲಹೆ ನೀಡಿದರು.ಕೇಂದ್ರ ಸರ್ಕಾರದ ವಿದೇಶಾಂಗ ಇಲಾಖೆ ಮೂಲಕ ಭಾರತೀಯ ಕಾಫಿ ಮಂಡಳಿ ಆ್ಯಪ್ ಅಭಿವೃದ್ಧಿಪಡಿಸಿದೆ. ಯುರೋಪಿಯನ್ ಒಕ್ಕೂಟದ ದೇಶಗಳ ಬೆಳೆಗಳಿಗಿಂತ ನಮ್ಮ ದೇಶದಲ್ಲಿ ನೆರಳಿನಲ್ಲಿ ಬೆಳೆಯುವ ಕಾಫಿಗೆ ಉತ್ತಮ ಗುಣಮಟ್ಟ ಇದೆ. ಭಾರತೀಯ ಕಾಫಿ ಮಂಡಳಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದಂತೆ ಸರ್ಕಾರ ಸ್ಪಂದಿಸಿ ಸುಮಾರು 50 ಲಕ್ಷ ವೆಚ್ಚ ಮಾಡಿ ಕೆನಡಾ ಜರ್ಮನಿ, ಚೀನಾ, ಪೆರು, ಚಿಲಿ, ಬೆಹರೈನ್ ದೇಶಗಳಲ್ಲಿ ತಜ್ಞರ ಮೂಲಕ ಅಧ್ಯಯನ ಮಾಡಿಸಿದೆ. ಅದರಂತೆ ಕಾಫಿ ಬೆಳೆಗಾರರು, ಮಂಡಳಿಗೆ ಅಧಿಕಾರಿಗಳು ಮತ್ತು ಕಾಫಿ ಉದ್ದಿಮೆಗೆ ಸಂಬಂಧಪಟ್ಟವರ ಜೊತೆ ಸಂಪರ್ಕ ಸಂವಹನ ನಡೆಸಲಾಗಿದೆ. ನಮ್ಮ ‘ಇಂಡಿ ಕಾಫಿ’ ಭಾರತದ ಹೆಗ್ಗುರುತಾಗಿದ್ದು, ಬ್ರಾಂಡ್ ಕೂಡ ಆಗಿದೆ ಎಂದರು.
ಕಾಫಿ ಮಂಡಳಿ ಕಾರ್ಯದರ್ಶಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೂರ್ಮರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಯುರೋಪಿಯನ್ ಒಕ್ಕೂಟವು ಭಾರತದ ಕಾಫಿ ರಫ್ತುಗಳಿಗೆ ಅತಿ ದೊಡ್ಡ ಗಮ್ಯ ಸ್ಥಾನವಾಗಿದ್ದು, ಭಾರತದ ಒಟ್ಟು ಕಾಫಿ ರಫ್ತಿನ ಶೇ. ಶೇ. 45 ಪಾಲನ್ನು ಹೊಂದಿದೆ ಎಂದರು.ಭಾರತೀಯ ಕಾಫಿ ಮಂಡಳಿಯ ಸಂಶೋಧನಾ ವಿಭಾಗದ ಉಪ ನಿರ್ದೇಶಕ ಡಾ. ಪ್ರದೀಪ್ ಬಾಬು ಟ್ರೇಡರ್ಸ್, ಕಾಫಿ ಬೆಳೆಗಾರರಿಗೆ ಉಪನ್ಯಾಸ ನೀಡಿ ನಂತರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಕಾಫಿ ಮಂಡಳಿಯ ಹಣಕಾಸು ವಿಭಾಗದ ಅಧಿಕಾರಿ ಅಮೂಲ್ಯ, ಕಾಫಿ ಮಂಡಳಿ ಸಂಶೋಧನಾ ವಿಭಾಗದ ನಿರ್ದೇಶಕ ಸೆಂಥಿಲ್ ಕುಮಾರ್, ಕೊಡಗು ಜಿಲ್ಲಾ ಪರಿಷತ್ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಕೊಡಗು ಜಿಲ್ಲಾ ಕಾಫಿ ಮಂಡಳಿ ಉಪ ನಿರ್ದೇಶಕ ವೆಂಕಟರೆಡ್ಡಿ ಹಾಗೂ ಸ್ಥಳೀಯ ಕಾಫಿ ಸಂಸ್ಕರಣಾ ಘಟಕಗಳ ಕೈಗಾರಿಕೋದ್ಯಮಿಗಳು, ಕಾಫಿ ಬೆಳೆಗಾರರು ಇದ್ದರು.