ಮರುಹರಾಜು ಕರೆದು ಮಳಿಗೆಗಳ ದುರುಪಯೋಗ ತಡೆಯಿರಿ

| Published : Jan 10 2025, 12:46 AM IST

ಸಾರಾಂಶ

ನಗರದ ಮಹತ್ಮಾ ಗಾಂಧಿ ಕ್ರೀಡಾಂಗಣದಲ್ಲಿರುವ ಮಳಿಗೆಗಳ ಕರಾರು ಅವಧಿ ಮುಗಿದು ೫-೬ ವರ್ಷಗಳಾಗಿದ್ದು, ಕೂಡಲೇ ಮರುಹರಾಜು ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಡಾ. ಬಿ.ಎನ್. ಜಗದೀಶ್ ಹರಿಹರದಲ್ಲಿ ಮನವಿ ಮಾಡಿದರು.

- ಬೆಂಗಳೂರಿನಲ್ಲಿ ಕ್ರೀಡಾ ಇಲಾಖೆ ಆಯುಕ್ತರಿಗೆ ಜಯಕರ್ನಾಟಕ ಸಂಘಟನೆ ಮನವಿ - - - ಕನ್ನಡಪ್ರಭ ವಾರ್ತೆ ಹರಿಹರ ನಗರದ ಮಹತ್ಮಾ ಗಾಂಧಿ ಕ್ರೀಡಾಂಗಣದಲ್ಲಿರುವ ಮಳಿಗೆಗಳ ಕರಾರು ಅವಧಿ ಮುಗಿದು ೫-೬ ವರ್ಷಗಳಾಗಿದ್ದು, ಕೂಡಲೇ ಮರುಹರಾಜು ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಡಾ. ಬಿ.ಎನ್. ಜಗದೀಶ್ ಮನವಿ ಮಾಡಿದರು.

ಬೆಂಗಳೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಆಯುಕ್ತ ಆರ್. ಚೇತನ್ ಅವರಿಗೆ ಬುಧವಾರ ಮನವಿ ಸಲ್ಲಿಸಿ ಅವರು ಮಾತನಾಡಿದರು. ಹರಿಹರದ ಕ್ರೀಡಾ ಇಲಾಖೆ ಅಧೀನದಲ್ಲಿ ಸುಮಾರು ೫೦ ಮಳಿಗೆಗಳಿವೆ. ಮಳಿಗೆ ನಿರ್ಮಿಸಿದಾಗ ತಿಂಗಳಿಗೆ ₹೩-₹೪ ಸಾವಿರ ಇದ್ದ ಬಾಡಿಗೆ ಇಂದಿಗೂ ಮುಂದುವರೆಸಿಕೊಂಡು ಬರಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಹಿಂದೆ ಮಳಿಗೆ ಪಡೆದಿದ್ದವರು ಸದರಿ ಮಳಿಗೆಗಳನ್ನು ಇತರರಿಗೆ ₹೧೫-₹೨೦ ಸಾವಿರ ರು.ಗಳಿಗೆ ಬಾಡಿಗೆ ನೀಡಿದ್ದಾರೆ. ಮಳಿಗೆಗಳನ್ನು ಮರುಹರಾಜು ನಡೆಸಿದಲ್ಲಿ ಇಲಾಖೆಗೆ ಪ್ರತಿ ತಿಂಗಳು ಲಕ್ಷಾಂತರ ಹಣ ಬಾಡಿಗೆ ಬರುತ್ತದೆ. ಅದಲ್ಲದೇ, ಮಕ್ಕಳು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಅನೇಕ ಯುವಜನತೆ ಇಲ್ಲಿನ ಕ್ರೀಡಾಂಗಣದಲ್ಲಿ ವಿವಿಧ ಕ್ರೀಡೆಗಳ ಅಭ್ಯಾಸ ಮಾಡುತ್ತಾರೆ. ಇದೇ ಕ್ರೀಡಾಂಗಣದಲ್ಲಿ ಮದ್ಯ ಮಾರಾಟ ಅಂಗಡಿಯೂ ಇರುವುದು ನೋವಿನ ಸಂಗತಿ ಎಂದರು.

ಮರುಹರಾಜು ಪ್ರಕ್ರಿಯೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ, ಸಹ ಇನ್ನಿಲ್ಲದ ಸಬೂಬು ಹೇಳುತ್ತಿದ್ದಾರೆ. ಇದರಿಂದ ಸಂಘಟನೆ ವತಿಯಿಂದ ಮಹಾತ್ಮ ಗಾಂಧಿ ವೃತ್ತದಲ್ಲಿ ಕಳೆದ ೯೬ ದಿನಗಳಿಂದ ಪ್ರತಿಭಟನೆ ಮಾಡಲಾಗುತ್ತಿದೆ. ತಕ್ಷಣ ತಾವುಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ, ಆದಷ್ಟು ಬೇಗ ಮರುಹರಾಜು ಪ್ರಕ್ರಿಯೆ ನಡೆಸುವಂತೆ ಒತ್ತಾಯಿಸಿದರು.

ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಗೋವಿಂದ ಹಾಗೂ ಇನ್ನಿತರರು ಇದ್ದರು.

- - - -೦೯ಎಚ್‌ಆರ್‌ಆರ್೦೧:

ಹರಿಹರದ ಮಹಾತ್ಮಾ ಗಾಂಧಿ ಕ್ರೀಡಾಂಗಣದ ಮಳಿಗೆಗಳ ಮರುಹರಾಜು ಪ್ರಕ್ರಿಯೆಗೆ ಶೀಘ್ರ ಚಾಲನೆ ನೀಡುವಂತೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆಯಿಂದ ಕ್ರೀಡಾ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.