ತುರ್ತು ಘಟನೆಗಳು ನಡೆದರೆ ಇಲಾಖೆಗಳಿಗೆ ಕರೆ ಮಾಡಿ

| Published : May 24 2024, 12:55 AM IST

ಸಾರಾಂಶ

ತುರ್ತು ಘಟನೆಗಳು ನಡೆದರೆ ಇಲಾಖೆಗಳಿಗೆ ಕರೆ ಮಾಡಿ ಎಂದು ಅಗ್ನಿ ಅವಘಡಗಳ ಮುಂಜಾಗೃತ ಕ್ರಮಗಳ ಕುರಿತ ಸಭೆಯಲ್ಲಿ ಠಾಣಾಧಿಕಾರಿ ತಿಪ್ಪಣ್ಣ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲಅಗ್ನಿ ಅನಾಹುತ ಸೇರಿದಂತೆ ಇತರೇ ಅವಘಡಗಳು ಸಂಭವಿಸಿದ್ದಲ್ಲಿ ಕೂಡಲೇ ಎಚ್ಚೆತ್ತುಕೊಂಡು ಪ್ರಾಣ ಹಾನಿಗಳಾಗದಂತೆ ಪ್ರತಿಯೊಬ್ಬರು ಜಾಗೃತಿ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಅಗ್ನಿ ಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಠಾಣಾಧಿಕಾರಿ ತಿಪ್ಪಣ್ಣ ನಾವದಗಿ ಹೇಳಿದರು.

ಪಟ್ಟಣದ ಧಾರವಾಡ ರಸ್ತೆಯಲ್ಲಿನ ರಾಜ್ಯ ಅಗ್ನಿಶಾಮಕ ದಳದ ಶಾಖೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಹಮ್ಮಿಕೊಂಡ ಜ್ಞಾನ ವಿಕಾಸ ಕೇಂದ್ರದ ಮಹಿಳೆಯರಿಗೆ ಅಗ್ನಿ ಅವಘಡಗಳ ಮುಂಜಾಗೃತ ಕ್ರಮಗಳ ಕುರಿತು ಸಭೆಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಯಾವುದೇ ಸಂದರ್ಭದಲ್ಲಿ ಪ್ರಾಣ ಹಾನಿಯಾಗುವಂತಹ ತುರ್ತು ಘಟಣೆಗಳು ನಡೆದರೆ ಕೂಡಲೇ ಸಂಬಂಧಪಟ್ಟಂತ ಇಲಾಖೆಗಳಿಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.

ಎಸ್‌ಕೆಡಿಆರ್‌ಡಿಪಿಯ ಜ್ಞಾನ ವಿಕಾಸ ಕೇಂದ್ರದ ಮೇಲ್ವಚಾರಕಿ ಶೈಲಾ ಜಕ್ಕನ್ನವರ, ಕಜಾಪ ವಕ್ತಾರ ಮಹಾಂತೇಶ ರಾಜಗೋಳಿ, ಅಗ್ನಿ ಶ್ಯಾಮಕ ಠಾಣೆಯ ಸಿಬ್ಬಂದಿಯರಾದ ಬಿ.ಬಿ.ತಿಳಿಗಂಜಿ, ಕಲ್ಲಪ್ಪ ಹುಚ್ಚನವರ, ಸಿ.ಬಿ.ಉಳ್ಳೇಗಡ್ಡಿ, ಬಿ.ಬಿ.ನಾಗನೂರ, ಎಸ್.ಸಿ.ಅಂಬಗಿ, ಎ.ಸಿ.ಅಂಗಡಿ, ಎಸ್.ಎಸ್.ಸೊಗಲದ, ರಾಹುಲ ಹೋಮಕರ, ಎಸ್.ಎಲ್.ಸುಣದೋಳಿ, ಚನ್ನಬಸಯ್ಯ ಮಠದ ಮುಂತಾದವರು ಉಪಸ್ಥಿತರಿದ್ದರು. ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಪಾಲ್ಗೊಂಡಿದ್ದರು.