ಅರುಣಾಚಲದಿಂದ ಬೈಕಿನಲ್ಲಿ ಬಂದು ಗೀತಾಲೇಖನ ದೀಕ್ಷೆ ಪಡೆದ ಸಾಹಸಿ

| Published : Jan 09 2025, 12:46 AM IST

ಅರುಣಾಚಲದಿಂದ ಬೈಕಿನಲ್ಲಿ ಬಂದು ಗೀತಾಲೇಖನ ದೀಕ್ಷೆ ಪಡೆದ ಸಾಹಸಿ
Share this Article
  • FB
  • TW
  • Linkdin
  • Email

ಸಾರಾಂಶ

ಕುಮಾರ ಅಭಿಘ್ಯಾ ಅವರು ಬುಧವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದರು. ಈ ಸಂದರ್ಭ ಅವರು ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದರು.

ಕನ್ನಡಪ್ರಭ ವಾರ್ತೆ ಉಡುಪಿ

ಕೊರೋನಾ ಕಾಲಘಟ್ಟದಲ್ಲಿ ಸಾಂಕ್ರಾಮಿಕ ರೋಗ ಹಾವಳಿ ಬಗ್ಗೆ ಜ್ಯೋತಿಷ್ಯಾಧಾರದಲ್ಲಿ ಖಚಿತವಾಗಿ ಪರಿಹಾರ ನೀಡಿ, ಯೂಟ್ಯೂಬ್ ಮುಂತಾದ ಸಾಮಾಜಿಕ ಜಾಲ ತಾಣಗಳ ಮೂಲಕ ಲಕ್ಷಾಂತರ ಸದಸ್ಯರನ್ನು ಹೊಂದಿರುವ, ತನ್ನ ಕಿರು ವಯಸ್ಸಿನಲ್ಲಿಯೇ ಅತ್ಯಂತ ಪ್ರಸಿದ್ದಿಯನ್ನು ಪಡೆದಿರುವ ಕುಮಾರ ಅಭಿಘ್ಯಾ ಅವರು ಬುಧವಾರ ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದರು. ಈ ಸಂದರ್ಭ ಅವರು ಸ್ವಯಂಪ್ರೇರಿತರಾಗಿ ಪರ್ಯಾಯ ಪೀಠಾಧೀಶ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞ ದ ದೀಕ್ಷೆ ಪಡೆದರು.

ಈ ದೀಕ್ಷೆಯನ್ನು ಪಡೆಯುವುದಕ್ಕಾಗಿಯೇ ಅವರು ಅರುಣಾಚಲ ಪ್ರದೇಶದ ತನ್ನ ಊರಿನಿಂದ ಉಡುಪಿಗೆ ಬೈಕ್ ಮೂಲಕ ಬರುವ ಸಾಹಸವನ್ನು ಮಾಡಿದ್ದಾರೆ.

ಶ್ರೀಕೃಷ್ಣನ ಪರಮ ಭಕ್ತನಾಗಿರುವ ಅವರು ಪೂಜ್ಯ ಪುತ್ತಿಗೆ ಶ್ರೀಪಾದರು ಹಮ್ಮಿಕೊಂಡಿರುವ ಕೋಟಿ ಗೀತಾ ಲೇಖನ ಯಜ್ಞದ ಮಾಹಿತಿಯನ್ನು ಸಾಮಾಜಿಕ ಜಾಲತಾಣದಿಂದ ಪಡೆದು, ತಾವೂ ಈ ದೀಕ್ಷೆಯನ್ನು ಪಡೆಯಬೇಕು ಎಂದು ಉಡುಪಿಗೆ ಆಗಮಿಸಿದ್ದು ವಿಶೇಷವಾಗಿದೆ.

ಪೂಜ್ಯ ಪರ್ಯಾಯ ಪುತ್ತಿಗೆ ಶ್ರೀಪಾದರು ಈತನಿಗೆ ಇನ್ನಷ್ಟು ಸಮಾಜ ಸೇವೆ ಮಾಡುವಂತಾಗಲಿ ಎಂದು ಹರಸಿ ಭಗವದ್ಗೀತಾ ಲೇಖನ ದೀಕ್ಷೆ ಯನ್ನಿತ್ತು ಹರಸಿದರು.