ಸ್ಟಾರ್ ಚಂದ್ರು ಪರ ಸ್ಥಳೀಯ ‘ಕೈ’ ಮುಖಂಡರಿಂದ ಪ್ರಚಾರ ಆರಂಭ

| Published : Apr 13 2024, 01:04 AM IST

ಸ್ಟಾರ್ ಚಂದ್ರು ಪರ ಸ್ಥಳೀಯ ‘ಕೈ’ ಮುಖಂಡರಿಂದ ಪ್ರಚಾರ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಸೋಮನಹಳ್ಳಿ ಮತ್ತು ಆಲಂಬಾಡಿ ಕಾವಲು ಗ್ರಾಪಂ ವ್ಯಾಪ್ತಿಯ ಸಂಗಾಪುರ, ಪುರ, ಅಂಬಿಗರಹಳ್ಳಿ, ಸೋಮನಹಳ್ಳಿ, ಬೆಳತೂರು, ಕಟ್ಟೆಕ್ಯಾತನಹಳ್ಳಿ, ಗುಡುಗನಹಳ್ಳಿ, ಆಲಂಬಾಡಿ, ಆಲಂಬಾಡಿ ಕಾವಲು, ಮಾಂಬಳ್ಳಿ, ಸೋಮನಾಥಪುರ, ಐಪನಹಳ್ಳಿ ಮುಂತಾದ ಗ್ರಾಮಗಳಲ್ಲಿ ಮನೆ ಮನೆ ಪ್ರಚಾರ ನಡೆಸಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮಂಡ್ಯ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ತಾಲೂಕು ಕಾಂಗ್ರೆಸ್ ಪಕ್ಷ ಮನೆಮನೆ ಪ್ರಚಾರ ಆರಂಭಿಸಿದೆ.

ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮತ್ತು ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಸೋಮನಹಳ್ಳಿ ಮತ್ತು ಆಲಂಬಾಡಿ ಕಾವಲು ಗ್ರಾಪಂ ವ್ಯಾಪ್ತಿಯ ಸಂಗಾಪುರ, ಪುರ, ಅಂಬಿಗರಹಳ್ಳಿ, ಸೋಮನಹಳ್ಳಿ, ಬೆಳತೂರು, ಕಟ್ಟೆಕ್ಯಾತನಹಳ್ಳಿ, ಗುಡುಗನಹಳ್ಳಿ, ಆಲಂಬಾಡಿ, ಆಲಂಬಾಡಿ ಕಾವಲು, ಮಾಂಬಳ್ಳಿ, ಸೋಮನಾಥಪುರ, ಐಪನಹಳ್ಳಿ ಮುಂತಾದ ಗ್ರಾಮಗಳಲ್ಲಿ ಮನೆ ಮನೆ ಪ್ರಚಾರ ನಡೆಸಿದರು. ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿ ಯೋಜನೆಗಳನ್ನು ಒಳಗೊಂಡ ಕರಪತ್ರಗಳನ್ನು ಮನೆ ಮನೆಗೆ ಹಂಚಿ ಕೋಮುವಾದಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಯಾವುದೇ ಕಾರಣಕ್ಕೂ ಮತ ಹಾಕದಂತೆ ಮನವಿ ಮಾಡಿದರು.

ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಹಾಗೂ ಮುಖಂಡ ಬಿ.ಎಲ್.ದೇವರಾಜು ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ತೀವ್ರ ಬರಗಾಲದ ಸನ್ನಿವೇಶದಲ್ಲಿಯೂ ಗ್ರಾಮೀಣ ಜನ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗುತ್ತದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಪನಹಳ್ಳಿ ಬಿ.ನಾಗೇಂದ್ರ ಕುಮಾರ್, ಮುಖಂಡರಾದ ವಕೀಲ ಚಟ್ಟಂಗೆರೆ ನಾಗೇಶ್, ರಾಜು, ಚೌಡಸಮುದ್ರ ಚಂದ್ರು, ಗುಡುಗನಹಳ್ಳಿ ಶ್ರೀನಿವಾಸ್, ರಾಯಪ್ಪ, ಮಾಂಬಳ್ಳಿ ಮೀಸೆ ಸ್ವಾಮಣ್ಣ, ರಾಮಣ್ಣ, ಕಟ್ಟೆಕ್ಯಾತನಹಳ್ಳಿ ಜಗದೀಶ್, ಪ್ರಕಾಶ್, ಬೆಳತೂರು ಲೋಕೇಶ್, ಪುರ ಸುರೇಶ್ ಸೇರಿ ಹಲವರು ಇದ್ದರು.