ಮಾಹೆಯನ್ನು ಪರಿಚಯಿಸುವ ಕ್ಯಾಂಪಸ್‌ ಟೂರ್‌: ‘ಡೆಸ್ಟಿನೇಶನ್‌ ಮಣಿಪಾಲ್‌’

| Published : Aug 05 2024, 12:45 AM IST

ಮಾಹೆಯನ್ನು ಪರಿಚಯಿಸುವ ಕ್ಯಾಂಪಸ್‌ ಟೂರ್‌: ‘ಡೆಸ್ಟಿನೇಶನ್‌ ಮಣಿಪಾಲ್‌’
Share this Article
  • FB
  • TW
  • Linkdin
  • Email

ಸಾರಾಂಶ

ಸಾಂಪ್ರದಾಯಿಕ ಕ್ಯಾಂಪಸ್ ಭೇಟಿಗಳಿಗಿಂತ ಭಿನ್ನವಾಗಿ, ಈ ಡೆಸ್ಟಿನೇಶನ್ ಮಣಿಪಾಲ್ ವಿಹಾರವು ವಿದ್ಯಾರ್ಥಿಗಳಿಗೆ ಮತ್ತು ಅವರ ಹೆತ್ತವರಿಗೆ ಮಾಹೆಯ ಕ್ಯಾಂಪಸ್‌ನ ಪರಿಚಯ ಮಾಡುವ, ಮಣಿಪಾಲದ ದಿನಚರಿಯನ್ನು ಸನಿಹದಿಂದ ನೋಡುವ ಅವಕಾಶವನ್ನು ಒದಗಿಸುತ್ತಿದೆ

ಕನ್ನಡಪ್ರಭ ವಾರ್ತೆ ಮಣಿಪಾಲ

ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ಇದರ ವಿವಿಧ ವಿಭಾಗಗಳಲ್ಲಿ ಪ್ರವೇಶ ಪಡೆಯಲಿಚ್ಛಿಸುವ ವಿದ್ಯಾರ್ಥಿಗಳಿಗೆ ‘ಡೆಸ್ಟಿನೇಶನ್‌ ಮಣಿಪಾಲ್‌’ ಎಂಬ ಕಾಲೇಜು ಆವರಣ ಪ್ರವಾಸ (ಕ್ಯಾಂಪಸ್‌ ಟೂರ್‌) ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಸಾಂಪ್ರದಾಯಿಕ ಕ್ಯಾಂಪಸ್ ಭೇಟಿಗಳಿಗಿಂತ ಭಿನ್ನವಾಗಿ, ಈ ಡೆಸ್ಟಿನೇಶನ್ ಮಣಿಪಾಲ್ ವಿಹಾರವು ವಿದ್ಯಾರ್ಥಿಗಳಿಗೆ ಮತ್ತು ಅವರ ಹೆತ್ತವರಿಗೆ ಮಾಹೆಯ ಕ್ಯಾಂಪಸ್‌ನ ಪರಿಚಯ ಮಾಡುವ, ಮಣಿಪಾಲದ ದಿನಚರಿಯನ್ನು ಸನಿಹದಿಂದ ನೋಡುವ ಅವಕಾಶವನ್ನು ಒದಗಿಸುತ್ತಿದೆ. ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಲು ಮತ್ತು ಹಿರಿಯ ವಿದ್ಯಾರ್ಥಿಗಳಿಂದ ನೈಜವಾದ ಉತ್ತರಗಳನ್ನು ಪಡೆಯಲು, ಅವರ ಭವಿಷ್ಯದ ಬಗ್ಗೆ ತಿಳುವಳಿಕೆಯ ನಿರ್ಧಾರಗಳನ್ನು ಮಾಡಲು ಅವರಿಗೆ ಸಹಾಯ ಮಾಡುತ್ತದೆ.

ಮಣಿಪಾಲದ ಕ್ಯಾಂಪಸ್‌ ಬದುಕನ್ನು ಸಂಭ್ರಮಿಸುವಂಥ ‘ಕ್ಯಾಂಪಸ್‌ ಟೂರ್‌’ನ್ನು ಆಯೋಜಿಸುವ ಉದ್ದೇಶದ ಬಗ್ಗೆ ಮಾಹೆಯ ಸಹಉಪಕುಲಪತಿಗಳಾದ ಲೆ.ಜ. ಡಾ. ಎಂ.ಡಿ. ವೆಂಕಟೇಶ್ ಮಾಹಿತಿ ನೀಡಿ, ನಮ್ಮ ಕ್ಯಾಂಪಸ್‌ ಪ್ರವಾಸವು ಕೇವಲ ವೀಕ್ಷಣೆಯ ಚಟುವಟಿಕೆಯಲ್ಲ, ಹೊಸದಾಗಿ ಮಾಹೆ ಕ್ಯಾಂಪಸ್‌ಗೆ ಬರುವ ವಿದ್ಯಾರ್ಥಿಗಳು ಅತ್ಯಾಧುನಿಕ ಎಕ್ಸ್‌ಪೀರಿಯನ್ಸ್‌ ಥಿಯೇಟರ್‌, ಫುಡ್‌ ಕೋರ್ಟ್ಸ್‌, ಮರೇನಾ ಕ್ರೀಡಾ ಸಂಕೀರ್ಣ, ಸುಸಜ್ಜಿತ ವಿದ್ಯಾರ್ಥಿನಿಲಯಗಳು ಮುಂತಾದ ಅತ್ಯಾಧುನಿಕ ಸೌಕರ್ಯಗಳನ್ನು ವೀಕ್ಷಿಸಲು ಸಾಧ್ಯವಾಗುವಂಥ ಸಂದರ್ಭವನ್ನು ಇದು ಒದಗಿಸುತ್ತದೆ. ಮಣಿಪಾಲದ ಕ್ಯಾಂಪಸ್‌ನೊಳಗಿನ ಸ್ಪಂದನಶೀಲ ಸಂಸ್ಕೃತಿ ಮತ್ತು ಚೈತನ್ಯಯುತವಾದ ಜೀವನ ಶೈಲಿಯನ್ನು ವಿದ್ಯಾರ್ಥಿಗಳು ಅರಿತುಕೊಳ್ಳುವುದಕ್ಕೆ ಕೂಡ ಇದು ಸಹಕಾರಿ ಎಂದು ಹೇಳಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಅಥವಾ ಪ್ರವಾಸವನ್ನು ಮುಂಗಡ ಕಾದಿರಿಸಲು , https://destination.manipal.edu ಗೆ ಭೇಟಿ ನೀಡಬಹುದು ಅಥವಾ ಉಪ ನಿರ್ದೇಶಕರು ಸಾರ್ವಜನಿಕ ಸಂಪರ್ಕ ಮತ್ತು ಸಂವಹನ, ದೂರವಾಣಿ: 7338625909, ಇಮೇಲ್: sachin.karanth@manipal.edu ಇಲ್ಲಿಗೂ ಸಂಪರ್ಕಿಸಬಹುದು.