ಶಿವಮೊಗ್ಗ ನಗರದ ಕುವೆಂಪು ರಂಗ ಮಂದಿರದಲ್ಲಿ ಆಯೋಜಿಸಿದ್ದ ಕೆನರಾ ಬ್ಯಾಂಕ್ ರಿಟೇಲ್ ಉತ್ಸವಕ್ಕೆ ಶಿವಮೊಗ್ಗ ಪ್ರಾದೇಶಿಕ ಕಚೇರಿಯ ರೀಜನಲ್ ಮ್ಯಾನೇಜರ್ ಸಂಜೀವ್ ಕುಮಾರ್ ಶನಿವಾರ ಚಾಲನೆ ನೀಡಿದರು. ಈ ರಿಟೇಲ್ ಉತ್ಸವದಲ್ಲಿ ಎಲ್ಲಾ ಬ್ರಾಂಡ್‌ನ ಕಾರ್‌ಗಳ ಪ್ರದರ್ಶನ ಹಾಗೂ ಅತ್ಯಂತ ಕಡಿಮೆ ಸಂಸ್ಕಾರಣಾ ಶುಲ್ಕದೊಂದಿಗೆ ಸ್ಥಳದಲ್ಲಿ ಸಾಲ ಸೌಲಭ್ಯ ದ ವ್ಯವಸ್ಥೆ ಮಾಡಲಾಗಿತ್ತು.

ಶಿವಮೊಗ್ಗ ನಗರದ ಕುವೆಂಪು ರಂಗ ಮಂದಿರದಲ್ಲಿ ಆಯೋಜಿಸಿದ್ದ ಕೆನರಾ ಬ್ಯಾಂಕ್ ರಿಟೇಲ್ ಉತ್ಸವಕ್ಕೆ ಶಿವಮೊಗ್ಗ ಪ್ರಾದೇಶಿಕ ಕಚೇರಿಯ ರೀಜನಲ್ ಮ್ಯಾನೇಜರ್ ಸಂಜೀವ್ ಕುಮಾರ್ ಶನಿವಾರ ಚಾಲನೆ ನೀಡಿದರು. ಈ ರಿಟೇಲ್ ಉತ್ಸವದಲ್ಲಿ ಎಲ್ಲಾ ಬ್ರಾಂಡ್‌ನ ಕಾರ್‌ಗಳ ಪ್ರದರ್ಶನ ಹಾಗೂ ಅತ್ಯಂತ ಕಡಿಮೆ ಸಂಸ್ಕಾರಣಾ ಶುಲ್ಕದೊಂದಿಗೆ ಸ್ಥಳದಲ್ಲಿ ಸಾಲ ಸೌಲಭ್ಯ ದ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಗೃಹ ಸಾಲ, ಪಿಎಂ ವಿದ್ಯಾ ಲಕ್ಷ್ಮಿ ಎಜುಕೇಶನ್ ಲೋನ್ ಹಾಗೂ ಕೆನರಾ ಬ್ಯಾಂಕಿನ ಹಬ್ಬಗಳ ಪ್ರಯುಕ್ತ ಹಮ್ಮಿಕೊಂಡಿರುವಂತಹ ವಿಶೇಷವಾದಂತಹ ಸಾಲ ಸೌಲಭ್ಯದ ಮಾಹಿತಿಯನ್ನು ಗ್ರಾಹಕರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್‌ನ ಎಜಿಎಂ ಶೈಜು ಅಬ್ರಾಹಮ್, ಮುಖ್ಯ ವ್ಯವಸ್ಥಾಪಕರಾದ ರಾಜುಅಣಜಿ ಹಾಗೂ ಬ್ಯಾಂಕಿನ ವಿವಿಧ ಶಾಖೆಯ ವ್ಯವಸ್ಥಾಪಕರು ಉಪಸ್ಥಿತರಿದ್ದರು.

----------------------

ಪೊಟೋ: 05ಎಸ್‌ಎಂಜಿಕೆಪಿ05