ಕೆನರಾ ಬ್ಯಾಂಕ್‌ನ ಹುಬ್ಬಳ್ಳಿ ವೃತ್ತ ಕಚೇರಿ ವತಿಯಿಂದ ಈಚೆಗೆ ಆಯೋಜಿಸಿದ್ದ ಕೆನರಾ ಪ್ರೀಮಿಯರ್ ಲೀಗ್ (ಸಿಪಿಎಲ್) 4.0 ಕ್ರಿಕೆಟ್ ಟೂರ್ನಿಯಲ್ಲಿ ಚಿಕ್ಕೋಡಿ ಚಾಂಪಿಯನ್ಸ್ ತಂಡ ಪ್ರಶಸ್ತಿ ಗೆದ್ದುಕೊಂಡರೆ, ಕಲಬುರಗಿ ಕಿಂಗ್ಸ್ ತಂಡ ರನ್ನರ್ ಅಪ್ ಸ್ಥಾನ ಗಳಿಸಿತು.
ಹುಬ್ಬಳ್ಳಿ:ಕೆನರಾ ಬ್ಯಾಂಕ್‌ನ ಹುಬ್ಬಳ್ಳಿ ವೃತ್ತ ಕಚೇರಿ ವತಿಯಿಂದ ಈಚೆಗೆ ಆಯೋಜಿಸಿದ್ದ ಕೆನರಾ ಪ್ರೀಮಿಯರ್ ಲೀಗ್ (ಸಿಪಿಎಲ್) 4.0 ಕ್ರಿಕೆಟ್ ಟೂರ್ನಿಯಲ್ಲಿ ಚಿಕ್ಕೋಡಿ ಚಾಂಪಿಯನ್ಸ್ ತಂಡ ಪ್ರಶಸ್ತಿ ಗೆದ್ದುಕೊಂಡರೆ, ಕಲಬುರಗಿ ಕಿಂಗ್ಸ್ ತಂಡ ರನ್ನರ್ ಅಪ್ ಸ್ಥಾನ ಗಳಿಸಿತು.
ನಗರದ ಕರ್ನಾಟಕ ಜಿಮ್‌ಖಾನಾ ಅಸೋಸಿಯೇಷನ್ ಕ್ರಿಕೆಟ್ ಮೈದಾನ ಹಾಗೂ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಮೈದಾನಗಳಲ್ಲಿ ನಡೆದ ಟೂರ್ನಿಯಲ್ಲಿ ಬ್ಯಾಂಕ್‌ನ ವಿವಿಧ ವಲಯಗಳನ್ನು ಪ್ರತಿನಿಧಿಸಿದ ಒಟ್ಟು 9 ತಂಡಗಳು ಪಾಲ್ಗೊಂಡಿದ್ದವು.ಕೆನರಾ ಬ್ಯಾಂಕ್‌ನ ಹುಬ್ಬಳ್ಳಿ ವೃತ್ತ ಕಚೇರಿಯ ವೃತ್ತ ಮುಖ್ಯಸ್ಥ ಹಾಗೂ ಪ್ರಧಾನ ವ್ಯವಸ್ಥಾಪಕ ಕೆ. ವೀರೇಂದ್ರ ಬಾಬು ಮಾರ್ಗದರ್ಶನದಲ್ಲಿ ಟೂರ್ನಿ ನಡೆಯಿತು. ಬ್ಯಾಂಕ್‌ನ ಉಪ ಪ್ರಧಾನ ವ್ಯವಸ್ಥಾಪಕರಾದ ಜಗದೀಶ ಸ್ವಾಮಿ ಹಾಗೂ ಎನ್. ನಿಕುಂಜ್ ಬೆಹರಾ ಅವರು ಟೂರ್ನಿಗೆ ಚಾಲನೆ ನೀಡಿದರು.
ರೋಚಕ ಹಾಗೂ ಪೈಪೋಟಿಯಿಂದ ಕೂಡಿದ್ದ ಪಂದ್ಯಗಳ ಬಳಿಕ ಚಿಕ್ಕೋಡಿ ಚಾಂಪಿಯನ್ಸ್ ತಂಡ ವಿಜೇತರಾಗಿ ಹೊರಹೊಮ್ಮಿತು. ಕಲಬುರಗಿ ಕಿಂಗ್ಸ್ ತಂಡ ರನ್ನರ್ ಅಪ್ ಪ್ರಶಸ್ತಿಗೆ ಭಾಜನವಾಯಿತು. ಬಹುಮಾನ ವಿತರಣಾ ಸಮಾರಂಭದಲ್ಲಿ ಉಪ ಪ್ರಧಾನ ವ್ಯವಸ್ಥಾಪಕರಾದ ಜಗದೀಶ ಸ್ವಾಮಿ, ನಿಕುಂಜ್ ಬೆಹರಾ ಹಾಗೂ ರಾಜೀವ್ ಕುಮಾರ್ ಪಾಂಡೆ ಅವರು ವಿಜೇತ ಮತ್ತು ರನ್ನರ್ ಅಪ್ ತಂಡಗಳಿಗೆ ಬಹುಮಾನ ವಿತರಿಸಿದರು.