ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ಸರ್ಕಾರ ಸ್ಥಗಿತಗೊಳಿಸದಿದ್ದರೆ ಮುಂದಿನ ವಿಧಾನಸಭೆ ಅಧಿವೇಶನ ಸಮಯದಲ್ಲಿ ವಿಧಾನಸೌದ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ಹೋರಾಟ ಸಮಿತಿ ನೇತೃತ್ವವಹಿಸಿರುವ ಮಾಜಿ ಸಚಿವ ಸೊಗಡು ಶಿವಣ್ಣ ಎಚ್ಚರಿಸಿದ್ದಾರೆ.ನಗರದ ಮುರುಘರಾಜೇಂದ್ರ ಸಭಾ ಭವನದಲ್ಲಿ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿಯ ಪ್ರಮುಖರು ಸಭೆ ಸೇರಿ, ಮುಂದಿನ ಹೋರಾಟದ ಬಗ್ಗೆ ವಿಸ್ತೃತವಾಗಿ ಚರ್ಚಿಸದ ಸಂಧರ್ಭದಲ್ಲಿ , ಈ ನಿರ್ಣಯದ ಬಗ್ಗೆ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.ಗ್ರಾಮಾಂತರ ಶಾಸಕ ಬಿ. ಸುರೇಶ್ ಗೌಡ ಮಾತನಾಡಿ, ಮುಂದಿನ ದಿನಗಳಲ್ಲಿ ಹೇಮಾವತಿ ಲಿಂಕ್ ಕೆನಾಲ್ ವಿರುದ್ಧ ಹಂತ ಹಂತವಾಗಿ ಹೋರಾಟಕ್ಕೆ ಜಿಲ್ಲೆಯ ರೈತರು, ವಿವಿಧ ಸಂಘ-ಸಂಸ್ಥೆ- ಸಂಘಟನೆಗಳನ್ನು ವಿಶ್ವಾಸಕ್ಕೆ ಪಡೆದು, ಲಿಂಕ್ ಕೆನಾಲ್ ಹಾದು ಹೋಗುವ ಎಲ್ಲಾ ಪ್ರದೇಶದಲ್ಲಿನ ಜನರಿಗೆ ಅರಿವು ಮೂಡಿಸಿ, ತಾತ್ವಿಕ ಅಂತ್ಯಕ್ಕೆ ಹೋರಾಟ ಮಾಡೋಣ ಎಂದು ಕರೆ ನೀಡಿದರು.ಮುಖಂಡ ಅನಿಲ್ ಕುಮಾರ್ ಮಾತನಾಡಿ, ಹೋರಾಟ ಯೋಜನಾ ಬದ್ದವಾಗಿ ನಡೆಯಬೇಕು. ಪಕ್ಷಾತೀತ - ವಿವಿಧ ಸಂಘಟನೆಗಳನ್ನೊಂದಿಗೆ ಪರಿಣಾಮವಾಗಿ ಆಗಬೇಕು ಎಂದರು.ಸಂಪಿಗೆ ಜಗದೀಶ್ ಮಾತನಾಡಿ, ಜಿಲ್ಲೆಗೆ ಹೇಮಾವತಿ ನಾಲಾ ವಲಯದ ಹಂಚಿಕೆ ನೀರನ್ನೇ ಲಿಂಕ್ ಚಾಲನ್ ಮೂಲಕ ಮಾಗಡಿ, ರಾಮನಗರಕ್ಕೆ ಹೇಮಾವತಿ ನೀರು ತೆಗೆದುಕೊಂಡು ಹೋಗುವುದೇ ಅವೈಜ್ಞಾನಿಕ ಕಾಮಗಾರಿಯಾಗಿದೆ ಎಂದು ಹೇಳಿದರು.ಮಾಜಿ ಶಾಸಕ ಎಚ್.ಲಿಂಗಪ್ಪ, ನಿಟ್ಟೂರ್ ಪ್ರಕಾಶ್, ಹೈಕೋರ್ಟ್ ವಕೀಲ ತುರುವೇಕೆರೆ ಜಗದೀಶ್, ಧನಿಯಾಕುಮಾರ್, ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಆರಾಧ್ಯ, ಶಿರಾ ತಾಲೂಕು ಅಧ್ಯಕ್ಷ ದ್ಯಾಮೇಗೌಡ, ಸಾಗರನಹಳ್ಳಿ ನಂಜೇಗೌಡ, ಹೊಸಕೋಟೆ ನಟರಾಜು, ಡಿಎಸ್‌ಎಸ್ ನರಸಿಂಹಯ್ಯ, ಕೊರಟಗೆರೆ ಶಾಶ್ವತ ನೀರಾವರಿ ಸಮಿತಿ ಅಧ್ಯಕ್ಷ ವೆಂಕಟಾಚಲಯ್ಯ ಅಭಿಪ್ರಾಯ ಮಂಡಿಸಿದರು.ಎಪಿಎಂಸಿ ಮಾಜಿ ಅಧ್ಯಕ್ಷ ಪಂಚಾಕ್ಷರಯ್ಯ, ಕೆ.ಪಿ.ಮಹೇಶ, ಬೆಳಗುಂಬ ಪ್ರಭಾಕರ್, ಪುರವರ ಮೂರ್ತಿ, ಕೊರಟಗೆರೆ ತಾಲೂಕಿನ ಬಿಜೆಪಿ ಅಧ್ಯಕ್ಷ ದರ್ಶನ್, ಸೊಗಡು ಕುಮಾರಸ್ವಾಮಿ, ಎಸ್.ಶಿವಪ್ರಸಾದ್,ಆಟೋ ನವೀನ್. ತರಕಾರಿ ಮಹೇಶ್, ಗೋವಿಂದರಾಜು, ಶಬ್ಬೀರ್ ಅಹಮ್ಮದ್ , ರಾಚಂದ್ರರಾವ್, ಕೆ.ಹರೀಶ್, ಮದನ್ ಸಿಂಗ್, ಎನ್.ಗಣೇಶ್, ಇಮ್ರಾನ್, ವಿವೇಕ್, ರವಿಕುಮಾರ್ ಯಾದವ್ ಉಪಸ್ಥಿತರಿದ್ದರು.