ಮುನಿರತ್ನ ಶಾಸಕತ್ವ ರದ್ದುಗೊಳಿಸಿ: ದಲಿತ ಮುಖಂಡ ತೋಟದ ಮನೆ ಗಿರೀಶ್

| Published : Sep 17 2024, 12:49 AM IST

ಮುನಿರತ್ನ ಶಾಸಕತ್ವ ರದ್ದುಗೊಳಿಸಿ: ದಲಿತ ಮುಖಂಡ ತೋಟದ ಮನೆ ಗಿರೀಶ್
Share this Article
  • FB
  • TW
  • Linkdin
  • Email

ಸಾರಾಂಶ

ದಲಿತ ಸಮುದಾಯದ ಬಗ್ಗೆ ಕೀಳಾಗಿ ಮಾತನಾಡಿರುವ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರ ಶಾಸಕತ್ವ ರದ್ದುಗೊಳಿಸಬೇಕು ಎಂದು ದಲಿತ ಮುಖಂಡ ತೋಟದ ಮನೆ ಗಿರೀಶ್ ಒತ್ತಾಯಿಸಿದರು. ಮಾಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

-ಜಾತಿ ನಿಂದನೆ ಮಾಡಿರುವ ಶಾಸಕ ಮುನಿರತ್ನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಕನ್ನಡಪ್ರಭ ವಾರ್ತೆ ಮಾಗಡಿ

ದಲಿತ ಸಮುದಾಯದ ಬಗ್ಗೆ ಕೀಳಾಗಿ ಮಾತನಾಡಿರುವ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರ ಶಾಸಕತ್ವ ರದ್ದುಗೊಳಿಸಬೇಕು ಎಂದು ದಲಿತ ಮುಖಂಡ ತೋಟದ ಮನೆ ಗಿರೀಶ್ ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ನಿಂದನೆ ಹಾಗೂ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿರುವ ಹಾಗೂ ಗುತ್ತಿಗೆದಾರನ ಬಳಿ ಲಂಚಕ್ಕೆ ಬೇಡಿಕೆಯಿಟ್ಟಿರುವ ಶಾಸಕ ಮುನಿರತ್ನ ಅವರಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಆರೋಪಿಸಿದರು.

ಶಾಸಕ ಮುನಿರತ್ನ ಅವರನ್ನು ಕೇವಲ ಬಂಧಿಸಿ ಬಿಡುವ ಕೆಲಸವಾಗಬಾರದು. ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ ಮುಂದಿನ ದಿನಗಳಲ್ಲಿ ಯಾರೊಬ್ಬರೂ ಸಹ ಜಾತಿ ನಿಂದನೆ ಮಾಡದಂತಹ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರ ಹಾಗೂ ಗೃಹ ಮಂತ್ರಿಗಳಲ್ಲಿ ಮನವಿ ಮಾಡುವುದಾಗಿ ತಿಳಿಸಿದರು.

ತಾಲೂಕು ಛಲವಾದಿ ವೇದಿಕೆ ಅಧ್ಯಕ್ಷ ಹಕ್ಕಿನಾಳು ವೆಂಕಟೇಶ್ ಮಾತನಾಡಿ, ಅಂಬೇಡ್ಕರ್ ಸಂವಿಧಾನದಡಿ ಶಾಸಕರಾಗಿ ಆಯ್ಕೆಯಾಗಿರುವ ಮುನಿರತ್ನ ದಲಿತ ಸಮುದಾಯದವರ ಬಗ್ಗೆ ಕೀಳು ಮಟ್ಟದ ಪದ ಬಳಕೆ ಮಾಡಿರುವ ಇವರು ಸಾರ್ವಜನಿಕ ಜೀವನದಲ್ಲಿರಲು ಅನರ್ಹರು. ಕೂಡಲೇ ಇವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ ಸರ್ಕಾರದ ಎಲ್ಲಾ ಸವಲತ್ತುಗಳನ್ನು ವಾಪಾಸ್‌ ಪಡೆಯಬೇಕು. ಹಾಗೂ ಬಹಿರಂಗರಾಗಿ ದಲಿತ ಸಮುದಾಯದವರ ಕ್ಷಮಾಪಣೆ ಕೇಳಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಛಲವಾದಿ ವೇದಿಕೆ ಹಾಗೂ ಸಮುದಾಯದ ವತಿಯಿಂದ ಬೃಹತ್ ಪ್ರತಿಭಟನೆ ಮಾಡುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಹುಳ್ಳೇನಹಳ್ಳಿ ಗ್ರಾಪಂ ಉಪಾಧ್ಯಕ್ಷ ನಾರಾಯಣ್, ಸೋಲೂರು ರಮೇಶ್, ಸುಗ್ಗನಹಳ್ಳಿ ನರಸಿಂಹಯ್ಯ, ಕೃಷ್ಣ ಮೂರ್ತಿ, ಗುಡೇಮಾರನಹಳ್ಳಿ ಜೋಗಿ ರವಿ, ಶಾಂತ್ ಕುಮಾರ್ ಇತರರಿದ್ದರು.