ಸಾರಾಂಶ
ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ
ಆಂಕಾಲಜಿ ತಜ್ಞೆ ಅಪರ್ಣಾ ಶ್ರೀವತ್ಸ ಹೇಳಿಕೆಕ್ಯಾನ್ಸರ್ ರೋಗವನ್ನು ಆತ್ಮವಿಶ್ವಾಸ, ಜೀವನಶೈಲಿ, ಪೌಷ್ಟಿಕಾಂಶ ಆಹಾರ ಸೇವನೆಯಿಂದ ಗುಣಪಡಿಸಬಹುದು
ಕ್ಯಾನ್ಸರ್‌ಗೆ ಆನ್ಸರ್’ ಕೃತಿಯನ್ನು ಪರಿಚಯ ಕಾರ್ಯಕ್ರಮಗರ್ಭಕೋಶ ಕಂಠದ ಕ್ಯಾನ್ಸರ್‌ಗೆ ಎಚ್‌ಪಿವಿ (ಹ್ಯೂಮನ್ ಪ್ಯಾಪಿಲೋಮ ವೈರಸ್) ಕಾರಣಕನ್ನಡಪ್ರಭ ವಾರ್ತೆ ತುರುವೇಕೆರೆ
ಕ್ಯಾನ್ಸರ್ ಎಂಬ ಮಾರಕ ರೋಗವನ್ನು ಆತ್ಮವಿಶ್ವಾಸ, ಜೀವನಶೈಲಿ, ಪೌಷ್ಟಿಕಾಂಶ ಆಹಾರ ಸೇವನೆಯಿಂದ ಗುಣಪಡಿಸಬಹುದು ಎಂದ ಆಂಕಾಲಜಿ ತಜ್ಞೆ ಅಪರ್ಣಾ ಶ್ರೀವತ್ಸ ಹೇಳಿದರು.ಪಟ್ಟಣದ ಚಿದಂಬರೇಶ್ವರ ಗ್ರಂಥಾಲಯದಲ್ಲಿ ರೋಟರಿ ಕ್ಲಬ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಇನ್ನರ್ ವ್ಹೀಲ್ ಕ್ಲಬ್ ಆಫ್ ಸಂಕಲ್ಪ ಜಂಟಿಯಾಗಿ ಹಮ್ಮಿಕೊಂಡಿದ್ದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದಲ್ಲಿ ‘ಕ್ಯಾನ್ಸರ್‌ಗೆ ಆನ್ಸರ್’ ಕೃತಿಯನ್ನು ಪರಿಚಯಿಸಿ ಮಾತನಾಡಿದರು. ಮಹಿಳೆಯರು ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶ ಕಂಠದ (ಸರ್ವೈಕಲ್) ಕ್ಯಾನ್ಸರ್‌ನಿಂದ ಹೆಚ್ಚಾಗಿ ಬಾಧಿತರಾಗುತ್ತಾರೆ. ಸ್ತನ ಕ್ಯಾನ್ಸರ್ ಪ್ರತಿ ೮ ಮಹಿಳೆಯರಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುತ್ತಿದೆ. ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆಯಾದರೆ ಸುಲಭವಾಗಿ ಗುಣಪಡಿಸಬಹುದು ಎಂದರು.
ಗರ್ಭಕೋಶ ಕಂಠದ ಕ್ಯಾನ್ಸರ್‌ಗೆ ಎಚ್‌ಪಿವಿ (ಹ್ಯೂಮನ್ ಪ್ಯಾಪಿಲೋಮ ವೈರಸ್) ಕಾರಣವಾಗಿದೆ. ಅದಕ್ಕೆ ಲಸಿಕೆ ಲಭ್ಯವಿದೆ. ಎಚ್‌ಪಿವಿ ಲೈಂಗಿಕವಾಗಿ ಹರಡುವ ವೈರಸ್ ಆಗಿದ್ದು ೧೧-೧೪ ವಯೋಮಾನದ ಎಲ್ಲಾ ಮಕ್ಕಳಿಗೆ ಲಸಿಕೆ ನೀಡುವುದು ಉತ್ತಮ ಎಂದು ಸಲಹೆ ಮಾಡಿದರು.ಡಾ.ಅಪರ್ಣಾ ಶ್ರೀವತ್ಸ ಅವರನ್ನು ಸನ್ಮಾನಿಸಲಾಯಿತು. ವೈದ್ಯ ದಿನಾಚರಣೆ ಅಂಗವಾಗಿ ಮಕ್ಕಳ ತಜ್ಞ ಡಾ.ನಂಜಪ್ಪ, ಡಾ.ದಿವ್ಯಚೇತನ್ ಹಾಗೂ ಡಾ.ತನುಶ್ರೀ ಅವರನ್ನು ಗೌರವಿಸಲಾಯಿತು.
ರೋಟರಿ ಕ್ಲಬ್ ಅಧ್ಯಕ್ಷ ಸಾ.ಶಿ.ದೇವರಾಜ್, ಖಜಾಂಚಿ ಪ್ರಸಾದ್, ಇನ್ನರ್ ವ್ಹೀಲ್ ಅಧ್ಯಕ್ಷೆ ನೇತ್ರಾ ಸಿದ್ಧಲಿಂಗಸ್ವಾಮಿ, ಕಾರ್ಯದರ್ಶಿ ಜಲಜಾಕ್ಷಿ, ಗೀತಾ ಸುರೇಶ್, ರೊ.ಬಸವರಾಜು, ರೊ.ಶಶಿಧರ್, ಡಾ.ನಾಗರಾಜ್, ಡಾ.ಚೇತನ್, ಆನಂದರಾಜ್, ಲಲಿತಾ ರಾಮಚಂದ್ರ ಇದ್ದರು.