ಇನ್ನರ್ ವ್ಹೀಲ್ ಕ್ಲಬ್‌ನಿಂದ ಕ್ಯಾನ್ಸರ್ ಮುಕ್ತ ಆಂದೋಲನ: ವೈಶಾಲಿ ಕುಡ್ವ

| Published : Jan 02 2025, 12:31 AM IST

ಇನ್ನರ್ ವ್ಹೀಲ್ ಕ್ಲಬ್‌ನಿಂದ ಕ್ಯಾನ್ಸರ್ ಮುಕ್ತ ಆಂದೋಲನ: ವೈಶಾಲಿ ಕುಡ್ವ
Share this Article
  • FB
  • TW
  • Linkdin
  • Email

ಸಾರಾಂಶ

ಕ್ಯಾನ್ಸರ್ ರೋಗ ಬಾರದಂತೆ ಮುಂಜಾಗ್ರತೆಯಾಗಿ ಹದಿಹರೆಯದ ಯವತಿಯರಿಗೆ ಮುಂಚಿತವಾಗಿ ಇಂಜೆಕ್ಷನ್ ನೀಡುವ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಇನ್ನರ್ ವ್ಹೀಲ್ ಸಂಸ್ಥೆಯ ಜಿಲ್ಲಾ ಚೇರ್ಮನ್ ವೈಶಾಲಿ ಕುಡ್ವ ತಿಳಿಸಿದರು. ನರಸಿಂಹರಾಜಪುರದಲ್ಲಿ ಸೋಲಾರ್ ಲೈಟ್ ಲೋಕಾರ್ಪಣೆ ಮಾಡಿ ಮಾತನಾಡಿದರು.

ಇನ್ನರ್ ವ್ಹೀಲ್ ಕ್ಲಬ್, ಪೆಡರಲ್ ಬ್ಯಾಂಕ್‌ನಿಂದ 3 ಲಕ್ಷ ರುಪಾಯಿ ವೆಚ್ಚದ ಸೋಲಾರ್ ದೀಪ ಉದ್ಘಾಟನೆ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ರೋಟರಿ ಸಂಸ್ಥೆಯಿಂದ ಪೊಲಿಯೋ ಮುಕ್ತ ಕಾರ್ಯಕ್ರಮ ನಡೆಸಿದಂತೆ ಇನ್ನರ್ ವ್ಹೀಲ್ ಸಂಸ್ಥೆಯಿಂದ ಕ್ಯಾನ್ಸರ್ ರೋಗ ಬಾರದಂತೆ ಮುಂಜಾಗ್ರತೆಯಾಗಿ ಹದಿಹರೆಯದ ಯವತಿಯರಿಗೆ ಮುಂಚಿತವಾಗಿ ಇಂಜೆಕ್ಷನ್ ನೀಡುವ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಇನ್ನರ್ ವ್ಹೀಲ್ ಸಂಸ್ಥೆಯ ಜಿಲ್ಲಾ ಚೇರ್ಮನ್ ವೈಶಾಲಿ ಕುಡ್ವ ತಿಳಿಸಿದರು.

ಕಡಹಿನಬೈಲು ಗ್ರಾಮ ಪಂಚಾಯಿತಿಯ ಹೊಸ ರಸ್ತೆ ಸರ್ಕಲ್‌ನಲ್ಲಿ ಬುಧವಾರ 3 ಲಕ್ಷ ರುಪಾಯಿ ವೆಚ್ಚದಲ್ಲಿ ಸೋಲಾರ್ ಲೈಟ್ ಲೋಕಾರ್ಪಣೆ ಮಾಡಿ ಮಾತನಾಡಿದರು.

ಸೇವೆಯೇ ಇನ್ನರ್ ವ್ಹೀಲ್ ಸಂಸ್ಥೆಯ ಗುರಿಯಾಗಿದೆ.ಸೋಲಾರ್ ಪ್ಲಾಂಟ್ ಈ ಭಾಗದ ಗ್ರಾಮಸ್ಥರ ಅನುಕೂಲಕ್ಕಾಗಿ ಕಲ್ಪಿಸಿರುವ ಶಾಶ್ವತ ಕಾಮಗಾರಿಯಾಗಿದ್ದು ಇದನ್ನು ಎಲ್ಲಾ ಗ್ರಾಮಸ್ಥರು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ಗ್ರಾಮ ಪಂಚಾಯಿತಿಯವರು ಇದರ ನಿರ್ವಹಣೆಯನ್ನು ಮಾಡಬೇಕಾಗಿದೆ. ಇನ್ನರ್ ವ್ಹೀಲ್ ಸಂಸ್ಥೆ ಹಮ್ಮಿಕೊಂಡಿದ್ದ ಸೋಲಾರ್ ಲೈಟ್ ಶಾಶ್ವತ ಕಾಮಗಾರಿಗೆ ಪೆಡರಲ್ ಬ್ಯಾಂಕ್ ಹಾಗೂ ಕಡಹಿನಬೈಲು ಗ್ರಾಮ ಪಂಚಾಯಿತಿ ಸಹಕಾರ ನೀಡಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯು ಹಲವಾರು ಶಾಶ್ವತ ಕಾಮಗಾರಿಗಳನ್ನು ರೂಪಿಸುತ್ತಿದೆ ಎಂದು ತಿಳಿಸಿದರು.

ಶಿವಮೊಗ್ಗ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ಹೊಸ ರಸ್ತೆಯಲ್ಲಿ ಸೋಲಾರ್ ದೀಪ ಹಾಕುವ ಮೂಲಕ ಜನ ಸಾಮಾನ್ಯರಿಗೆ ಇನ್ನರ್ ಸಂಸ್ಥೆ ಬೆಳಕನ್ನು ನೀಡಿದೆ. ರೋಟರಿ ಕ್ಲಬ್ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಸಮಾಜ ಮುಖಿ ಕಾರ್ಯಕ್ರಮ ರೂಪಿಸುತ್ತಿದೆ. ಸರ್ಕಾರ ಮಾಡದ ಹಲವಾರು ಕಾರ್ಯಕ್ರಮಗಳನ್ನು ಸೇವಾ ಸಂಸ್ಥೆಗಳು ಮಾಡಿದ್ದು ಅಭಿವೃದ್ದಿ ಕಾರ್ಯಕ್ರಮಗಳಲ್ಲಿ ಸರ್ಕಾರದೊಂದಿಗೆ ಕೈಜೋಡಿಸುತ್ತಿದೆ. ಈ ಹೊಸ ರಸ್ತೆಯ ಸರ್ಕಲ್‌ನಲ್ಲಿ ಸೋಲಾರ್ ದೀಪದ ಕಾರ್ಯಕ್ರಮದಲ್ಲಿ ಪೆಡರಲ್ ಬ್ಯಾಂಕ್ ಹಾಗೂ ಕಡಹಿನಬೈಲು ಗ್ರಾಮ ಪಂಚಾಯಿತಿ ಕೈ ಜೋಡಿಸಿದ್ದರಿಂದ ಇಂತಹ ಜನರಿಗೆ ಉಪಯೋಗವಾಗುವ ಕಾರ್ಯಕ್ರಮ ರೂಪಿಸಲು ಸಾದ್ಯವಾಗಿದೆ. ಇನ್ನರ್ ಕ್ಲಬ್ ಆರೋಗ್ಯ, ಶಿಕ್ಷಣಕ್ಕೆ ಹೆಚ್ಚು ಒ್ತತು ನೀಡಬೇಕು. ಮುಂದಿನ ದಿನಗಳಲ್ಲಿ ಇಂದು ಲೋಕಾರ್ಪಣೆಯಾಗಿರುವ ಸೋಲಾರ್ ಲೈಟ್‌ಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಶಾಸಕರು ಹಾಗೂ ಸರ್ಕಾರವು ಇಂತರ ಸಮಾಜ ಮುಖಿ ಕಾರ್ಯಕ್ರಮಕ್ಕೆ ಬೆಂಬಲ ನೀಡಲಿದೆ ಎಂದರು.

ಶಿವಮೊಗ್ಗ ಪೆಡರಲ್ ಬ್ಯಾಂಕ್‌ನ ಉಪಾಧ್ಯಕ್ಷ ಎಂ.ಎಲ್.ಅಜಿತ್ ಮಾತನಾಡಿ, ಪೆಡರಲ್ ಬ್ಯಾಂಕ್‌ನ ಸಿ.ಆರ್.ಎಸ್ ನಿಂದ ಹಲವಾರು ಜನರಿಗೆ ಉಪಯೋಗ ಆಗುವ ಕಾರ್ಯಕ್ರಮ ರೂಪಿಸಿದ್ದೇವೆ. ಸಿ.ಆರ್.ಎಸ್ ನ ಸಂಜೀವಿನಿ ಕಾರ್ಯಕ್ರಮದಡಿ ಸೋಲಾರ್ ಲೈಟಿಗೆ ಹಣ ನೀಡಿದ್ದೇವೆ. ಗ್ರಾಮೀಣ ಭಾಗದ ಅಭಿವೃದ್ದಿಗೆ ಬ್ಯಾಂಕ್ ಹೆಚ್ಚು ಒತ್ತು ನೀಡುತ್ತಿದೆ ಎಂದರು.

ಪೆಡರಲ್ ಬ್ಯಾಂಕಿನ ಬಿ.ಎಚ್.ಕೈಮರ ಶಾಖೆಯ ವ್ಯವಸ್ಥಾಪಕ ಕೃಪಾಕ್ಷ್ ಮಾತನಾಡಿ, ಕಳೆದ 10 ವರ್ಷದಿಂದ ಇದೇ ಪ್ರಥಮ ಬಾರಿಗೆ ಸಿ.ಆರ್.ಎಸ್ ನಿಂದ ಸೋಲಾರ್ ಲೈಟ್ ನೀಡಿದ್ದೇವೆ. ಇನ್ನರ್ ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿಯವರು ಕೈ ಜೋಡಿಸಿದ್ದಾರೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಇನ್ನರ್ ವೀಲ್ ಸಂಸ್ಥೆ ಅಧ್ಯಕ್ಷೆ ಬಿಂದು ವಿಜಯ ವಹಿಸಿದ್ದರು. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಸ್.ಎಸ್.ಶಾಂತಕುಮಾರ್, ಕಡಹಿನಬೈಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ, ಸದಸ್ಯರಾದ ಚಂದ್ರಶೇಖರ್, ಲಿಲ್ಲಿ ಮಾತುಕುಟ್ಟಿ, ರವೀಂದ್ರ, ಶೈಲಾ ಮಹೇಶ್, ವಾಣಿ ನರೇಂದ್ರ, ಇನ್ನರ್ ಸಂಸ್ಥೆಯ ಕಾರ್ಯದರ್ಶಿ ರಾಧಿಕಾ, ಉಪಾಧ್ಯಕ್ಷೆ ಡಾ.ಸ್ವಪ್ನಾಲಿ,ಇನ್ನರ್ ಸಂಸ್ಥೆಯ ಎಡಿಟರ್ ನಾಗಲಕ್ಷ್ಮಿ,ತಾ.ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶ್ಯಾಮಲ ಸತೀಶ್, ರೋಟರಿ ಕ್ಲಬ್ ಅಧ್ಯಕ್ಷ ದಿವಾಕರ್, ಎಪಿಎಂಸಿ ಉಪಾಧ್ಯಕ್ಷ ಎಸ್.ಡಿ.ರಾಜೇಂದ್ರ, ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಡಿ.ಸಿ.ದಿವಾಕರ, ಗ್ರಾಮ ಪಂಚಾಯಿತಿ ಪಿಡಿಒ ವಿಂದ್ಯಾ, ಮುಖಂಡರಾದ ನಂದೀಶ್, ರಂಜು ಎಲಿಯಾಸ್ ಇದ್ದರು.

ರಾಧಿಕ ಸ್ವಾಗತಿಸಿದರು. ಡಾ.ಭಾವನ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಸೋಲಾರ್ ದೀಪ ಅಳವಡಿಕೆಯಲ್ಲಿ ಸಹಕಾರ ನೀಡಿದವರಿಗೆ ಅಭಿನಂದಿಸಲಾಯಿತು.